ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ್ರೆ ಹೆಚ್ಚುವರಿ ಹಣ ಅಂತ ನೀಡ್ಲೇಬೇಕು. ಆದ್ರೆ ಕೆಲವೊಂದು ಕಂಪನಿ ವಿಪರೀತ ಸುಲಿಗೆ ಮಾಡ್ತಿದೆ. ಅದು ಯಾವ್ದು? ಯಾವ ಆಪ್ ನಲ್ಲಿ ಕಡಿಮೆ ಬೆಲೆಗೆ ಆಹಾರ ಸಿಗುತ್ತೆ?
ಮನೆಯಲ್ಲೇ ಕುಳಿತ ಆಹಾರ (food) ಆರ್ಡರ್ ಮಾಡುವ ನಮಗೆ ಬೇರೆ ಬೇರೆ ಆಪ್, ಭಿನ್ನ ರೇಟ್ ತೋರಿಸುತ್ತೆ. ಟೈಂ ಇದೆ ಅನ್ನೋರು ಎಲ್ಲ ಚೆಕ್ ಮಾಡಿ ಯಾವುದ್ರಲ್ಲಿ ಕಡಿಮೆಗೆ ಸಿಗುತ್ತೆ ಅಂತ ನೋಡಿ, ಆರ್ಡರ್ ಮಾಡ್ತಾರೆ. ಸದ್ಯ ಸ್ವಿಗ್ಗಿ (Swiggy) ಹಾಗೂ ಜೊಮಾಟೊ (Zomato) ಮಾರ್ಕೆಟ್ ನಲ್ಲಿ ಹೆಸ್ರು ಪಡೆದಿದೆಯಾದ್ರೂ ಬೈಕ್, ಟ್ಯಾಕ್ಸಿ ಸೇವೆ ನೀಡುವ ರಾಪಿಡೊ (Rapido) ಇವಕ್ಕೆ ಟಕ್ಕರ್ ನೀಡಲು ಬಂದಿದೆ. ಮೆಕ್ಡೋನಾಲ್ಡ್ 199 ರೂಪಾಯಿ ಚಿಕನ್ ಬರ್ಗರ್ , ಈ ಮೂರು ಆಪ್ ಗಳ ಪೈಕಿ ಯಾವ ಆಪ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ನೋಡೋಣ.
ಎನ್ಡಿಟಿವಿ ಪ್ರಾಫಿಟ್ ನಡೆಸಿದ ಅಧ್ಯಯನದಲ್ಲಿ ಇದಕ್ಕೆ ಸಂಬಂಧಿಸಿದ ಅಚ್ಚರಿ ರಿಸಲ್ಟ್ ಸಿಕ್ಕಿದೆ. ಅಗ್ನಿದೇವ್ ಭಟ್ಟಾಚಾರ್ಯ ಎನ್ನುವವರು ತಮ್ಮ ಕಚೇರಿಯಲ್ಲಿ ಸ್ವಿಗ್ಗಿ, ಜೊಮಾಟೊ ಮತ್ತು ರ್ಯಾಪಿಡೊ ಮೂರೂ ಅಪ್ಲಿಕೇಷನ್ ನಲ್ಲಿ ಮೆಕ್ಚಿಕನ್ ಬರ್ಗರ್ ಆರ್ಡರ್ ಮಾಡಿದ್ದಾರೆ. ಸ್ವಿಗ್ಗಿ ಮತ್ತು ಜೊಮಾಟೊದಲ್ಲಿ ಬರ್ಗರ್ ಮೀಲ್ ಬೆಲೆ 451 ರೂಪಾಯಿ ಮತ್ತು 402 ರೂಪಾಯಿ ತೋರಿಸಿದೆ. ರಾಪಿಡೊದಲ್ಲಿ ಇದ್ರ ಬೆಲೆ ಕೇವಲ 234 ರೂಪಾಯಿ ಆಗಿತ್ತು. 200 ರೂಪಾಯಿ ಕಡಿಮೆ ಆಗೋಕೆ ಹೇಗೆ ಸಾಧ್ಯ ಅಂತ ಚೆಕ್ ಮಾಡಿದಾಗ ಸಿಕ್ರೇಟ್ ಚಾರ್ಜ್ ಬಹಿರಂಗವಾಗಿದೆ.
ಸ್ವಿಗ್ಗಿ ಮತ್ತು ಜೊಮಾಟೊ 199 ರ ಬರ್ಗರ್ ಚಿಕನ್ ಮೀಲ್ ಗೆ, ಡಿಲೆವರಿ ಚಾರ್ಜ್, ಪ್ಯಾಕೇಜಿಂಗ್, ಪ್ಲಾಟ್ಫಾರ್ಮ್ ಶುಲ್ಕ, ಜಿಎಸ್ಟಿ ಎಲ್ಲ ಸೇರಿಸಿ, ಬರ್ಗರ್ ಬೆಲೆಯನ್ನು 315 ರೂಪಾಯಿಗೆ ತಂದು ನಿಲ್ಲಿಸಿವೆ. ಆದ್ರೆ ರಾಪಿಡೊದಲ್ಲಿ ಪ್ಯಾಕೇಜಿಂಗ್ ಶುಲ್ಕ ಅಥವಾ ಪ್ಲಾಟ್ಫಾರ್ಮ್ ಶುಲ್ಕವಿಲ್ಲ. ಡೆಲಿವರಿ ಚಾರ್ಜ್ ಹಾಗೂ ಜಿಎಸ್ ಟಿ ಸೇರಿ ರಾಪಿಡೋ 234 ರೂಪಾಯಿ ಚಾರ್ಜ್ ಮಾಡಿದೆ. ರಾಪಿಡೋ ಡೆಲಿವರಿ ಚಾರ್ಜ್ 25 ರೂಪಾಯಿ. ಸ್ವಿಗ್ಗಿಯದ್ದು 78 ರೂಪಾಯಿ ಆದ್ರೆ ಜೊಮಾಟೊ ಚಾರ್ಜ್ 35 ರೂಪಾಯಿ. ರಾಪಿಡೋ ಜಿಎಸ್ ಟಿ 10 ರೂಪಾಯಿ.
ಗೇಮ್ ಚೇಂಜರ್ ಆಗಲಿದ್ಯಾ ರಾಪಿಡೊ? : ರಾಪಿಡೊ ಈಗ ಫುಡ್ ಡೆಲಿವರಿ ಜಗತ್ತನ್ನು ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಓನ್ಲಿ ಹೆಸರಿನ ತನ್ನ ಹೊಸ ಆಹಾರ ವಿತರಣಾ ವೇದಿಕೆ ಪ್ರಾರಂಭಿಸಿದೆ. ಕಡಿಮೆ ವೆಚ್ಚ, ಹೆಚ್ಚು ರೀಚ್ ಮತ್ತು ಅಗ್ಗದ ಸೇವೆ ಇದ್ರ ಪಾಲಿಸಿಯಾಗಿದೆ. ಕಂಪನಿ ತನ್ನ 40 ಲಕ್ಷ ಸವಾರರ ಸಹಾಯದಿಂದ ಯಾವುದೇ ದೊಡ್ಡ ವೆಚ್ಚವಿಲ್ಲದೆ ಫುಡ್ ಡೆಲಿವರಿ ಮಾಡ್ತಿದೆ. ರಾಪಿಡೊ ಪ್ರಸ್ತುತ ರೆಸ್ಟೋರೆಂಟ್ಗಳಿಂದ ಯಾವುದೇ ಕಮಿಷನ್ ತೆಗೆದುಕೊಳ್ಳುತ್ತಿಲ್ಲ. ಡೆಲಿವರಿ ಚಾರ್ಜ್ ಮಾತ್ರ ವಿಧಿಸ್ತಿದೆ. ಆರ್ಡರ್ 400 ಕ್ಕಿಂತ ಕಡಿಮೆಯಿದ್ದರೆ 25 ರೂಪಾಯಿ ಮತ್ತು ಆರ್ಡರ್ 400 ಕ್ಕಿಂತ ಹೆಚ್ಚಿದ್ದರೆ 50 ರೂಪಾಯಿ ಚಾರ್ಜ್ ಮಾಡುತ್ತಿದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ಒಂದೇ ದರದಲ್ಲಿ ಆಹಾರ ನೀಡುವುದು ರಾಪಿಡೋ ಉದ್ದೇಶವಾಗಿದೆ. ಫುಡ್ ಡೆಲಿವರಿಯಿಂದ ಸದ್ಯ ಕಂಪನಿಗೆ ಯಾವುದೇ ಲಾಭವಾಗ್ತಿಲ್ಲ. ಆದ್ರೆ ಬಲವಾದ ಗ್ರಾಹಕರನ್ನು ಹೊಂದಲು ಕಂಪನಿ ಮುಂದಾಗಿದೆ. ರಾಪಿಡೊ ಈ ಪ್ಲಾನ್ ಸ್ವಿಗ್ಗಿ ಹಾಗೂ ಜೊಮಾಟೊಕ್ಕೆ ದೊಡ್ಡ ಹೊಡೆತವಾಗಲಿದೆ. ಈಗಾಗಲೇ ಬೆಲೆ ಏರಿಕೆ ಅಸಮಾಧಾನ ಗ್ರಾಹಕರಲ್ಲಿದೆ. 250 ರೂಪಾಯಿ ಆಹಾರಕ್ಕೆ 450 ರೂಪಾಯಿ ಏಕೆ ಕೊಡ್ಬೇಕು ಎನ್ನುವ ಪ್ರಶ್ನೆ ಎದ್ದಿರುವ ಟೈಂನಲ್ಲಿ ರಾಪಿಡೊ ಹೊಸ ಯೋಜನೆ ಜೊತೆ ಮಾರ್ಕೆಟ್ ಗೆ ಧುಮುಕಿದೆ.
