ಎರಡು ವರ್ಷದ ಮಗಳೊಂದಿಗೆ ಸ್ವಿಗ್ಗಿ ಡೆಲಿವರಿ ಮಾಡುವ ಪಂಕಜ್ ಕಥೆ ವೈರಲ್. ಮಯಾಂಕ್ ಅಗರ್ವಾಲ್ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಈ ಕಥೆ, ಪಂಕಜ್ ಪತ್ನಿ ತೀರಿಕೊಂಡು, ಮಗುವಿನ ಆರೈಕೆಗೆ ಬೇರೆ ದಾರಿಯಿಲ್ಲದೆ ದುಡಿಮೆಗಾಗಿ ಮಗಳನ್ನು ಜೊತೆಗಿರಿಸಿಕೊಂಡು ಡೆಲಿವರಿ ಮಾಡುವ ಅನಿವಾರ್ಯತೆ ಬಿಂಬಿಸುತ್ತದೆ. ಮಗುವಿನ ಸುರಕ್ಷತೆ ಕುರಿತು ಕಳವಳ ವ್ಯಕ್ತವಾದರೂ, ಪಂಕಜ್‌ಗೆ ಬೇರೆ ಆಯ್ಕೆಯಿಲ್ಲ ಎಂದು ಮಯಾಂಕ್ ಸ್ಪಷ್ಟಪಡಿಸಿದ್ದಾರೆ. ಸಹಾಯ ಹಸ್ತ ಚಾಚಲು ಹಲವರು ಮುಂದೆ ಬಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಪೋಸ್ಟ್‌ಗಳು ಗಮನ ಸೆಳೆಯುತ್ತವೆ. ಅದೇ ರೀತಿ ಎರಡು ವರ್ಷದ ಮಗುವಿನೊಂದಿಗೆ ಕೆಲಸ ಮಾಡುವ ಸ್ವಿಗ್ಗಿ ಡೆಲಿವರಿ ಪಾಲುದಾರರ ಬಗ್ಗೆ ಒಂದು ಪೋಸ್ಟ್ ಈಗ ಗಮನ ಸೆಳೆಯುತ್ತಿದೆ. ಗುರುಗ್ರಾಮದ ಸಿಇಒ ಮಯಾಂಕ್ ಅಗರ್ವಾಲ್ ಈ ಪೋಸ್ಟ್ ಅನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಯಾಂಕ್ ಅವರ ಪೋಸ್ಟ್ ಪಂಕಜ್ ಎಂಬ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ವ್ಯಕ್ತಿಯ ಕುರಿತದ್ದಾಗಿದೆ. ತನ್ನ ಎರಡು ವರ್ಷದ ಮಗಳು ಟುನ್ ಟುನ್ ಜೊತೆ ಪಂಕಜ್ ಸ್ವಿಗ್ಗಿ ಡೆಲಿವರಿಗೆ ಹೋಗುತ್ತಾನೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಮಯಾಂಕ್ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಬೇಗ ವೈರಲ್ ಆಯಿತು.

ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದ ಆಹಾರವನ್ನು ಪಂಕಜ್ ಬೈಕ್‌ನಲ್ಲಿ ತಂದು ಕೆಳಗೆ ನಿಂತುಕೊಂಡಿದ್ದರು. ಆದರೆ, ಫುಡ್ ಆರ್ಡರ್ ಮಾಡಿದ್ದ ಮಯಾಂಕ್ ಮೊದಲು ಅವನನ್ನು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಬರಲು ಹೇಳಬೇಕೆಂದು ಯೋಚಿಸಿದ್ದರು. ಆದರೆ, ಆರ್ಡರ್ ಬಂದಿದೆ ಎಂದು ಫೋನ್‌ ಮಾಡಿದ ಡೆಲಿವರಿ ಬಾಯ್ ಮೊಬೈಲ್‌ನಲ್ಲಿ ಮಗುವಿನ ಧ್ವನಿ ಕೇಳಿದಾಗ ಮಯಾಂಕ್ ತನ್ನ ನಿರ್ಧಾರವನ್ನು ಬದಲಾಯಿಸಿದರು. ತಕ್ಷಣ ಡೆಲಿವರಿ ಕೊಡಲು ಬಂದಿರುವ ಪಂಕಜ್ ಅವ‌ರನ್ನು ನೋಡಿದಾಗ, ಅವರು ತಮ್ಮ ಚಿಕ್ಕ ಮಗುವಿನೊಂದಿಗೆ ಆಹಾರ ವಿತರಣೆಗೆ ಹೋಗುತ್ತಿದ್ದಾರೆಂದು ಮಯಾಂಕ್ ಅರಿತುಕೊಂಡರು. ಆದರೆ, ಈ ಮಗುವಿನ ತಾಯಿ ಹೆರಿಗೆಯಲ್ಲಿ ಮೃತಪಟ್ಟಿದ್ದಾರೆ. ಅವರ ಅಣ್ಣ ಸಂಜೆ ಕ್ಲಾಸ್‌ಗೆ ಹೋಗುತ್ತಾರೆ. ಹೀಗಾಗಿ, ಚಿಕ್ಕ ಮಗುವನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ.

ಆದ್ದರಿಂದ, ದುಡಿಮೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಪಂಕಜ್ ಅವರು ತಮ್ಮ 2 ವರ್ಷದ ಪುಟ್ಟ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅದೇ ಸಮಯದಲ್ಲಿ, ಕೆಲವರು ಮಗುವಿನೊಂದಿಗೆ ಹೋಗುವುದಕ್ಕಾಗಿ ಪಂಕಜ್‌ರನ್ನು ದೂಷಿಸುತ್ತಾರೆ. ಇನ್ನು ಕೆಲವರು ಹೀಯಾಳಿಸಿ ಬೈದ್ದೂ ಇದೆ ಎಂದು ಮಯಾಂಕ್ ಹೇಳುತ್ತಾರೆ.

ಪಂಕಜ್ ಮತ್ತು ಅವರ 2 ವರ್ಷದ ಮಗಳು ನಿಜವಾಗಿಯೂ ಸ್ಫೂರ್ತಿ ನೀಡುತ್ತಾರೆ ಎಂದು ಮಯಾಂಕ್ ಹೇಳುತ್ತಾರೆ. ಅದೇ ಸಮಯದಲ್ಲಿ, ಮಯಾಂಕ್ ಅವರ ಪೋಸ್ಟ್ ಗಮನ ಸೆಳೆದ ನಂತರ, ಅನೇಕ ಜನರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಯಾಂಕ್ ನಂತರ ತಮ್ಮ ಪೋಸ್ಟ್‌ನಲ್ಲಿ ಅವರಿಗೆ ಉತ್ತರಿಸಿದರು. ಪಂಕಜ್ ಅವರ ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವವರಿಗೆ ಮಯಾಂಕ್ ಹೇಳುವುದೇನೆಂದರೆ, ಅದು ಪಂಕಜ್ ಅವರ ಆಯ್ಕೆಯಲ್ಲ, ಬದಲಿಗೆ ಅವರಿಗೆ ಬೇರೆ ದಾರಿಯಿಲ್ಲ. ಅವರು ಬಂದಿದ್ದನ್ನು ಸವಾಲಾಗಿ ಎದುರಿಸುತ್ತಿದ್ದಾರೆ. ಇದರಲ್ಲಿ ಅವರ ತಪ್ಪು ಎಂಬುದು ಯಾವುದೂ ಕಾಣಿಸಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಮಯಾಂಕ್ ಅವರು ಮಾಡಿದ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬಹಳಷ್ಟು ಸಕಾರಾತ್ಮಕ ಕಾಮೆಂಟ್‌ಗಳು ಬಂದಿವೆ. ಪಂಕಜ್ ಅವರ ಅನುಮತಿಯೊಂದಿಗೆ ಅವರ ಫೋಟೋ ಮತ್ತು ಅನುಭವವನ್ನು ಹಂಚಿಕೊಂಡಿದ್ದೇನೆ ಎಂದು ಮಯಾಂಕ್ ಹೇಳುತ್ತಾರೆ. ಅನೇಕ ಜನರು ಪಂಕಜ್‌ಗೆ ಸಹಾಯ ಮಾಡಲು ಆಸಕ್ತಿ ತೋರಿಸಿದ್ದರಿಂದ, ಮಯಾಂಕ್ ಅವರ ಖಾತೆ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ. ಫೋನ್ ಸಂಖ್ಯೆ ಬೇಕಾದವರು ನೇರ ಸಂದೇಶ ಕಳುಹಿಸಿ ಎಂದು ಮಯಾಂಕ್ ಹೇಳುತ್ತಾರೆ.

ನಿಮ್ಮ ಶಕ್ತಿ, ಪ್ರೀತಿ ಮತ್ತು ಧೈರ್ಯವು ಸಾವಿರಾರು ಜನರಿಗೆ ಪ್ರೇರಣೆಯಾಗಲಿ. ಈ ಲೋಕದಲ್ಲಿ ಇನ್ನೂ ಮಮತೆ ಉಳಿದಿದೆಯೆಂದು ತೋರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಮಯಾಂಕ್ ಅವರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಪಂಕಜ್ ಅವರು ಧನ್ಯವಾದಗಳನ್ನು ಅರ್ಪಿಸಿ ಡೆಲಿವರಿ ಕೊಟ್ಟು ಹೋಗಿದ್ದಾರೆ.