ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಬಾಲೆ, 100 ಕೋಟಿ ಮೌಲ್ಯದ ಕಂಪೆನಿ ಒಡತಿ!

ಪ್ರಾಂಜಲಿ ಅವಸ್ಥಿ ಎಂಬ 16 ವರ್ಷದ ಭಾರತೀಯ ಹುಡುಗಿ ತನ್ನ AI ಸ್ಟಾರ್ಟ್ಅಪ್  Delv.AI ಮೂಲಕ ಟೆಕ್ ಉದ್ಯಮಕ್ಕೆ ಸೆಡ್ಡು ಹೊಡೆದಿದ್ದಾಳೆ. ಈಕೆ ಸ್ಥಾಪಿಸಿರುವ ಕಂಪೆನಿ ರೂ. 100 ಕೋಟಿ ಮೌಲ್ಯ ಹೊಂದಿದೆ.

Meet Pranjali Awasthi the sixteen year-old tech prodigy behind AI startup Delv AI company gow

ಪ್ರಾಂಜಲಿ ಅವಸ್ಥಿ ಎಂಬ 16 ವರ್ಷದ ಭಾರತೀಯ ಹುಡುಗಿ ತನ್ನ AI ಸ್ಟಾರ್ಟ್ಅಪ್ (ಕೃತಕ ಬುದ್ಧಿಮತ್ತೆ)  Delv.AI ಮೂಲಕ ಟೆಕ್ ಉದ್ಯಮಕ್ಕೆ ಸೆಡ್ಡು ಹೊಡೆದಿದ್ದಾಳೆ. ಮಿಯಾಮಿ ಟೆಕ್ ವೀಕ್ ಈವೆಂಟ್‌ನಲ್ಲಿ ಭಾಗವಹಿಸಿದ  ಅವಸ್ಥಿ ಅವರು ಜನವರಿ 2022 ರಲ್ಲಿ ಕಂಪೆನಿಯನ್ನು  ಪ್ರಾರಂಭಿಸಿದ ಬಗ್ಗೆ ಮಾತನಾಡಿದ್ದಾಳೆ. ಜೊತೆಗೆ  ಸುಮಾರು 3.7 ಕೋಟಿ ರೂಪಾಯಿಗಳ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಬಹಿರಂಗಪಡಿಸಿದ್ದಾಳೆ. Delv.AI ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ತಿಳಿಸಿರುವಂತೆ 10 ಜನರ ಬಲಿಷ್ಠ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ.

ಈ ಈವೆಂಟ್‌ನಲ್ಲಿ ಅವಸ್ಥಿ ತನ್ನ ಉದ್ಯಮಶೀಲತೆಯ ಪ್ರಯಾಣಕ್ಕೆ  ತನ್ನ ತಂದೆಯೇ ಮೊದಲ ಪ್ರೇರಣೆ ಎಂದಿದ್ದಾರೆ. ಟೆಕ್‌ ಉದ್ಯಮದ ಬಗ್ಗೆ ನನಗೆ ಪ್ರೇರಣೆಯಾಗಿದ್ದು ತನ್ನ ಇಂಜಿನಿಯರ್‌ ತಂದೆ ಎಂದಿದ್ದಾರೆ.

ಫ್ರೆಂಚ್ ಅರಮನೆಯಲ್ಲಿ ನಡೆದ ಭಾರತೀಯ ಉದ್ಯಮಿ ಮಗಳ ಅದ್ಧೂರಿ ಮದುವೆ ಗಿನ್ನೆಸ್‌ ರೆಕಾರ್ಡ್‌ಗೆ ಸೇರ್ಪಡೆ!

ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಣಕ್ಕಾಗಿ ತನ್ನ ಇಂಜಿನಿಯರ್ ತಂದೆ ಪ್ರೋತ್ಸಾಹಿಸಿದರು. ಇದರಿಂದ ನಾನು   ಪ್ರಭಾವಿತಳಾದೆ. ಅವರ  ಪ್ರೋತ್ಸಾಹದಿಂದ  ಕೇವಲ ಏಳನೇ ವಯಸ್ಸಿನಲ್ಲಿ ಕೋಡಿಂಗ್ ಮಾಡುವುದನ್ನು ಕಲಿತೆ ಎಂದಿದ್ದಾರೆ. ಇದು ನನ್ನ ಪ್ರಮುಖ ಸಾಧನೆಗೆ   ಅಡಿಪಾಯ ಹಾಕಿತು ಎಂದಿದ್ದಾರೆ.

ಅವಸ್ಥಿ ಕುಟುಂಬವು 11 ನೇ ವಯಸ್ಸಿನಲ್ಲಿ ಫ್ಲೋರಿಡಾಕ್ಕೆ ಸ್ಥಳಾಂತರಗೊಂಡಿತು. ಇದು ಆಕೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿತು. ಕಂಪ್ಯೂಟರ್ ವಿಜ್ಞಾನ ತರಗತಿಗಳು ಮತ್ತು ಸ್ಪರ್ಧಾತ್ಮಕ ಗಣಿತ ಕಾರ್ಯಕ್ರಮಗಳಿಗೆ  ಪ್ರವೇಶ ಪಡೆದಳು. 13 ನೇ ವಯಸ್ಸಿನಲ್ಲಿ ಫ್ಲೋರಿಡಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ರಿಸರ್ಚ್ ಲ್ಯಾಬ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದಳು. ಇದು ಅವಳ ಉದ್ಯಮಶೀಲತೆಯ ಸಾಹಸಕ್ಕೆ ವೇದಿಕೆ ಮಾಡಿಕೊಟ್ಟಿತು.

ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ

ಈ ಇಂಟರ್ನ್‌ಶಿಪ್ ಸಮಯದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ವರ್ಚುವಲ್ ಹೈಸ್ಕೂಲ್‌ಗೆ ಹಾಜರಾಗುವಾಗ ಪ್ರಾಂಜಲಿ ಯಂತ್ರ ಕಲಿಕೆಯ ಯೋಜನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಈ ಸಮಯದಲ್ಲಿ OpenAI ChatGPT-3 ಬೀಟಾವನ್ನು ಬಿಡುಗಡೆ ಮಾಡಿತು. AI ಅನ್ನು ಬಳಸಿಕೊಂಡು ಸಂಶೋಧನಾ ಡೇಟಾ ಹೊರತೆಗೆಯುವಿಕೆ ಮತ್ತು ಸಾರಾಂಶವನ್ನು ಸುವ್ಯವಸ್ಥಿತಗೊಳಿಸುವ ತನ್ನ ಕಲ್ಪನೆಯನ್ನು ಪ್ರಾಂಜಲಿ  ಹುಟ್ಟುಹಾಕಿದಳು . Delv.AI ಅನ್ನು ಈ ಅವಧಿಯಲ್ಲಿ ಕಲ್ಪಿಸಲಾಗಿತ್ತು, ಪ್ರಾಂಜಲಿಯು ದತ್ತಾಂಶ ಹೊರತೆಗೆಯುವ ಪ್ರಕ್ರಿಯೆಗಳನ್ನು ಸುಧಾರಿಸಲು ಮತ್ತು ಡೇಟಾ ಸಿಲೋಗಳನ್ನು ತೊಡೆದು ಹಾಕಲು ಯಂತ್ರ ಕಲಿಕೆಯನ್ನು ಬಳಸಿಕೊಳ್ಳುವ ಗುರಿಯನ್ನು  Delv.AI ಹೊಂದಿದೆ. 

ಬ್ಯಾಕೆಂಡ್ ಕ್ಯಾಪಿಟಲ್‌ನ ಲೂಸಿ ಗುವೊ ಮತ್ತು ಡೇವ್ ಫಾಂಟೆನೋಟ್ ಮುನ್ನಡೆಸುತ್ತಿರುವ ಮಿಯಾಮಿಯಲ್ಲಿ AI ಸ್ಟಾರ್ಟ್ಅಪ್ ವೇಗವರ್ಧಕವನ್ನು ಸೇರಿಕೊಂಡಾಗ ಪ್ರಾಂಜಲಿ ಪ್ರಯಾಣವು ಮಹತ್ವದ ಮೈಲಿಗಲ್ಲನ್ನು ತಲುಪಿತು. ಪ್ರಾಂಜಲಿ ಇದಕ್ಕಾಗಿ ತನ್ನ  ಹೈಸ್ಕೂಲ್ ವಿದ್ಯಾಭ್ಯಾಸವನ್ನು ತಾತ್ಕಾಲಿಕವಾಗಿ ತೊರೆದರೂ ಸಹ ತನ್ನ ಕನಸುಗಳನ್ನು ಮುಂದುವರಿಸುವ ಬದ್ಧತೆ ಅವಳಲ್ಲಿತ್ತು.

ಪ್ರಾಡಕ್ಟ್ ಹಂಟ್‌ನಲ್ಲಿ Delv.AI ನ ಬೀಟಾ ಲಾಂಚ್ ಅಸಾಧಾರಣ ಯಶಸ್ಸನ್ನು ಕಂಡಿದೆ ಎಂದು ಮಿಯಾಮಿ ಟೆಕ್ ವೀಕ್ ಈವೆಂಟ್‌ನಲ್ಲಿ  ಬಹಿರಂಗಪಡಿಸಿದ್ದಾಳೆ.  ಪ್ರೊಡಕ್ಟ್ ಹಂಟ್ ಎನ್ನುವುದು ಯಾರಾದರೂ ತಮ್ಮ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ಸಹಾಯ ಮಾಡುವ  ಅಪ್ಲಿಕೇಶನ್ ಆಗಿದೆ.

 ಅವಸ್ಥಿಯ ಹೇಳಿಕೆಯಂತೆ ಬೆಳೆಯುತ್ತಿರುವ ಆನ್‌ಲೈನ್ ವಿಚಾರಗಳ ಬಗ್ಗೆ  ನಿರ್ದಿಷ್ಟ ಮಾಹಿತಿಯನ್ನು ಸಮರ್ಥವಾಗಿ ತಿಳಿಸಲು ಸಂಶೋಧಕರಿಗೆ ಸಹಾಯ ಮಾಡುವುದು Delv.AI ನ ಪ್ರಾಥಮಿಕ ಗುರಿಯಾಗಿದೆ ಎಂದಿದ್ದಾರೆ  ಆನ್ ಡೆಕ್ ಮತ್ತು ವಿಲೇಜ್ ಗ್ಲೋಬಲ್‌ನಿಂದ ಪ್ರಾಂಜಲಿ ಸುರಕ್ಷಿತ ಹೂಡಿಕೆಗೆ ಸಹಾಯ ಮಾಡುವಲ್ಲಿ ವೇಗವರ್ಧಕ ಕಾರ್ಯಕ್ರಮವು ನಿರ್ಣಾಯಕ ಪಾತ್ರವನ್ನು ವಹಿಸಿದೆ. Delv.AI ಒಟ್ಟು ನಿಧಿಯಲ್ಲಿ $450,000 (ಸುಮಾರು Rs 3.7 ಕೋಟಿ) ಸಂಗ್ರಹಿಸಿದೆ ಮತ್ತು ಪ್ರಸ್ತುತ  12 ಮಿಲಿಯನ್ ಡಾಲರ್‌ ಅಂದಾಜು (ಬಹುತೇಕ ರೂ. 100 ಕೋಟಿ) ಮೌಲ್ಯವನ್ನು ಹೊಂದಿದೆ.

ಪ್ರಾಂಜಲಿಯ ಭಾರತೀಯ ಪೋಷಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೂ ಪ್ರಾಂಜಲಿ ಸದ್ಯಕ್ಕೆ ಕಾಲೇಜನ್ನು ಮುಂದೂಡಲು ತೀರ್ಮಾನಿಸಿದ್ದಾಳೆ. ಆಕೆಯ ಜವಾಬ್ದಾರಿಗಳು ಮತ್ತು ಅವರ ಬೆಳೆಯುತ್ತಿರುವ ಕಂಪನಿಗೆ ಆದ್ಯತೆ ನೀಡಲು ಮುಂದಾಗಿದ್ದಾಳೆ. ಪ್ರಾಂಜಲಿಯು ತನ್ನ ಉದ್ಯಮಶೀಲತೆಯ ಪ್ರಯಾಣಕ್ಕೆ ಲಾಭದಾಯಕವಾದ ವ್ಯಾಪಾರ ಕೌಶಲ್ಯಗಳನ್ನು ಪಡೆಯಲು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಮಾಡುವ ಬಗ್ಗೆ ತೀರ್ಮಾನಿಸಿದ್ದಾಳೆ. ಸಣ್ಣ ಮತ್ತು ಕ್ರಿಯಾತ್ಮಕ ತಂಡವನ್ನು ಮುನ್ನಡೆಸುತ್ತಿರುವ ಪ್ರಾಂಜಲಿ, ಕೋಡಿಂಗ್‌ನಿಂದ ಕಾರ್ಯಾಚರಣೆಗಳು ಮತ್ತು ಗ್ರಾಹಕ ಸೇವೆಯವರೆಗೆ Delv.AI ನ ವಿವಿಧ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

Latest Videos
Follow Us:
Download App:
  • android
  • ios