Netflix ಮತ್ತು  Amazon Prime ಸಂಪೂರ್ಣವಾಗಿ ಫ್ರೀ ಫ್ರೀ; Jio, Airtel, Vi ಬಳಕೆದಾರರಿಗೆ ಸೂಪರ್ ಬಿಗ್ ಆಫರ್

Jio, Airtel, Vi ಬಳಕೆದಾರರಿಗೆ ಉಚಿತ OTT ಸೌಲಭ್ಯ! ರೀಚಾರ್ಜ್ ಪ್ಲಾನ್‌ಗಳಲ್ಲಿ Netflix ಮತ್ತು Amazon Prime ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಪಡೆಯಿರಿ. ಯಾವ ಪ್ಲಾನ್ ನಿಮಗೆ ಸೂಕ್ತ ಎಂಬುದನ್ನು ಇಲ್ಲಿ ತಿಳಿಯಿರಿ.

Super offer for Jio Airtel Vi users Netflix Amazon Prime free subscription mrq

ನವದೆಹಲಿ: ನೀವು ಮೊಬೈಲ್ ರೀಚಾರ್ಜ್ ಮಾಡಿಕೊಂಡಾಗ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಂಎಸ್, ಡೇಟಾ ಜೊತೆಯಲ್ಲಿ ಹೆಚ್ಚುವರಿ ಆಫರ್‌ಗಳು ನೀಡಲಾಗುತ್ತದೆ. ಹಾಗಾಗಿ ರೀಚಾರ್ಜ್ ಮಾಡಿಕೊಳ್ಳುವಾಗ ಯಾವ ಪ್ಲಾನ್ ಹೆಚ್ಚು ಲಾಭ ನೀಡುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಇಂದು ಎಲ್ಲರೂ ಓಟಿಟಿಯಲ್ಲಿ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಇದಕ್ಕಾಗಿಯೇ ನೂರಾರು ರೂಪಾಯಿ ಖರ್ಚು ಮಾಡುತ್ತಾರೆ. ಈ ಹಣ ಉಳಿತಾಯ ಮಾಡುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳು ನೀಡುತ್ತಿವೆ. ಮೊಬೈಲ್ ರೀಚಾರ್ಜ್ ಜೊತೆ ಓಟಿಟಿ ಅಪ್ಲಿಕೇಷನ್‌ಗಳ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ. 

ಈ  ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ವೇಗದ ಡೇಟಾ, ಅನಿಯಮಿತ ಕರೆ ಮತ್ತು ಇತರ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡುತ್ತಿರುವ ಪ್ಲಾನ್‌ಗಳ ಮಾಹಿತಿ ಇಲ್ಲಿದೆ ನೋಡಿ.

1.ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್
ನೀವು ಏರ್‌ಟೆಲ್ ಬಳಕೆದಾರರಾಗಿದ್ರೆ 1,199 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಈ ಪ್ಲಾನ್‌ನಲ್ಲಿ ನಿಮಗೆ ಉಚಿತ ಓಟಿಟಿ ಪ್ಲಾಟ್‌ಫಾರಂಗಳ ಆಕ್ಸೆಸ್ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ, ಉಚಿತ 100 ಎಸ್‌ಎಂಎಸ್ ಮತ್ತು ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು. ಅಂದ್ರೆ ಈ ಪ್ಲಾನ್‌ನಲ್ಲಿ  210GB ಡೇಟಾ ಸಿಗುತ್ತದೆ. ಇನ್ನು OTT ಲಾಭ ನೋಡೋದಾದ್ರೆ ಅಮೆಜಾನ್ ಪ್ರೈಮ್ ಸೇರಿದಂತೆ 22 ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳ ಆಕ್ಸೆಸ್ ನಿಮಗೆ ಲಭ್ಯವಾಗುತ್ತದೆ. 

ಇದನ್ನೂ ಓದಿ: BSNL & MTNL ಗಳಿಸಿದ ಆಸ್ತಿ ಕೇಳಿ ಶಾಕ್ ಆದ್ರು ದೇಶದ ಜನತೆ: ಖಾಸಗೀಕರಣ ಆಗುತ್ತಾ ಸರ್ಕಾರಿ ಸಂಸ್ಥೆ?

2.ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಜಿಯೋಟಿವಿ ಆಕ್ಸೆಸ್‌ ಉಚಿತವಾಗಿಯೇ ನೀಡುತ್ತಾ ಬಂದಿದೆ. ಗ್ರಾಹಕರು 1,029 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ನಿಮಗೆ  168GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಕಳುಹಿಸಬಹುದು. ಈ ಯೋಜನೆ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜಿಯೋ ಟಿವಿ ಜೊತೆಯಲ್ಲಿ 1,029 ರೂಪಾಯಿ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ಸಬ್‌ ಸ್ಕ್ರಿಪ್ಷನ್ ಸಿಗುತ್ತದೆ. 

3.ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಪ್ಲಾಮ್ 
ಓಟಿಟಿ  ಸಬ್‌ಸ್ಕ್ರಿಪ್ಷನ್ ಗಾಗಿ ವೊಡಾಫೋನ್ ಐಡಿಯಾ ಬಳಕೆದಾರರು 1,599 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಈ ಯೋಜನೆ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಡಿ ಪ್ರತಿದಿನ 100 ಎಸ್‌ಎಂಎಸ್ , ಅನಿಯಮಿತ ಕೆರೆ ಮತ್ತು ಪ್ರತಿದಿನ  2.5GB ಡೇಟಾ ಸಿಗುತ್ತದೆ. ಇದರ ಜೊತೆಯಲ್ಲಿ ಅನಿಯಮಿತ 5G ಡೇಟಾ ಕೂಡ ಲಭ್ಯವಿದೆ. ಇದೆಲ್ಲದರ ಜೊತೆಯಲ್ಲಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಸಬ್‌ ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ.

ಇದನ್ನೂ ಓದಿ: 10 ಸೆಕೆಂಡ್‌ಗೆ 8.5 ಲಕ್ಷ! ಐಪಿಎಲ್‌ನಿಂದ ಮುಕೇಶ್ ಅಂಬಾನಿ ಜೇಬಿಗೆ ಸೇರಲಿರುವ ಹಣ ಎಷ್ಟು?

Latest Videos
Follow Us:
Download App:
  • android
  • ios