ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿ, ಈಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್!
ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿಯೀಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್. ಶೆಡ್ ಬಾಡಿಗೆ ಪಡೆದು ಬಿಸಿನೆಸ್ ಆರಂಭಿಸಿದಾತ ಈಗ ಬರೋಬ್ಬರಿ 39000 ಕೋಟಿ ರೂ. ಆಸ್ತಿಯ ಒಡೆಯ. ಆ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲಿದೆ.
ಮುಕೇಶ್ ಅಂಬಾನಿ ನೇತೃತ್ವದ ಜಿಯೋ, ತನ್ನ ಮೊಬೈಲ್ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸಲು ಮತ್ತು ತನ್ನ ಜಿಯೋಭಾರತ್ ಫೋನ್‌ಗಳ ಮೂಲಕ ತನ್ನ ಸೇವೆಗಳಿಗೆ ನಿಷ್ಠಾವಂತ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನೋಡುತ್ತಿದೆ. ಬಳಕೆದಾರರು ಸ್ಮಾರ್ಟ್‌ಫೋನ್‌ಗಳತ್ತ ಸಾಗುತ್ತಿರುವಾಗ, ಫೀಚರ್ ಫೋನ್‌ಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿಯೇ ಜಿಯೋ ಮೊಬೈಲ್ ಮಾರುಕಟ್ಟೆಯು ಇಳಿಮುಖದತ್ತ ಸಾಗಿದೆ. ಹೀಗಿದ್ದೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಫೀಚರ್ ಫೋನ್ ಪೋರ್ಟ್ ಫೋಲಿಯೋ ಮಾರುಕಟ್ಟೆಯ 63 ಪ್ರತಿಶತ ಪಾಲನ್ನು ಹೊಂದಿದೆ.
ಜಿಯೋ ಜೊತೆಗಿನ ಪಾಲುದಾರಿಕೆಯಲ್ಲಿ ಎಲೆಕ್ಟ್ರಾನಿಕ್ಸ್ ತಯಾರಕ ಡಿಕ್ಸನ್ ಟೆಕ್ನಾಲಜೀಸ್ ಸೇರಿಕೊಂಡಿದೆ. ಸ್ವಯಂ ನಿರ್ಮಿತ ಬಿಲಿಯನೇರ್ ಸುನಿಲ್ ವಚಾನಿ ನೇತೃತ್ವದಲ್ಲಿ, ಕಂಪನಿಯು ಮಾರ್ಚ್ 2024ರ ವೇಳೆಗೆ ಜಿಯೋ ಭಾರತ್ ಫೋನ್‌ಗಳನ್ನು ತಯಾರಿಸುವ ಮೂಲಕ 1600 ಕೋಟಿ ರೂ.ನಿಂದ ಸುಮಾರು 1800 ಕೋಟಿ ರೂ. ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದೆ. ಡಿಕ್ಸನ್ ಆರ್‌ಐಎಲ್ ಅಂಗಸಂಸ್ಥೆಯಿಂದ 15 ಮಿಲಿಯನ್ ಜಿಯೋಭಾರತ್ ಫೋನ್‌ಗಳನ್ನು ತಯಾರಿಸಲು ಆರ್ಡರ್ ಪಡೆದಿತ್ತು, ನಂತರ 20 ಮಿಲಿಯನ್ ಫೋನ್‌ಗಳಿಗೆ ಹೆಚ್ಚಿಸಲಾಗಿದೆ.
Newyearಗೆ ಅಂಬಾನಿಯ ಹೊಸ ಬಿಸಿನೆಸ್ ಐಡಿಯಾ, ಎಷ್ಟು ಕೋಟಿಯ ಕಂಪೆನಿ ಆರಂಭಿಸೋಕೆ ಪ್ಲಾನ್?
ತಂದೆಯಿಂದ ಸಾಲ ಪಡೆದು ಬಿಸಿನೆಸ್ ಆರಂಭಿಸಿದ ಸುನಿಲ್ ವಚಾನಿ
ಸುನಿಲ್ ವಚಾನಿ, ತಮ್ಮ ತಂದೆಯಿಂದ 20 ಲಕ್ಷ ರೂಪಾಯಿ ಸಾಲ ಪಡೆದು 1993ರಲ್ಲಿ ಡಿಕ್ಸನ್ ಟೆಕ್ನಾಲಜೀಸ್‌ನ್ನು ಸ್ಥಾಪಿಸಿದರು. ಮೊದಲಿಗೆ ಅವರು ದೆಹಲಿಯ ಬಳಿ ಬಾಡಿಗೆಗೆ ಪಡೆದ ಶೆಡ್‌ನಿಂದ 14.1 ಇಂಚಿನ ಟಿವಿಗಳನ್ನು ತಯಾರಿಸುವ ಮೂಲಕ ಪ್ರಾರಂಭಿಸಿದರು. ಇಂದು, ಡಿಕ್ಸನ್ ಟೆಕ್ನಾಲಜೀಸ್ 39,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಲಿಸ್ಟೆಡ್ ಸಂಸ್ಥೆಯಾಗಿದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ, ಸುನಿಲ್ ವಚಾನಿ ಅವರು 13,300 ಕೋಟಿ ರೂ ($ 1.6 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಡಿಕ್ಸನ್ ಟೆಕ್ನಾಲಜೀಸ್ ಕ್ಲೈಂಟ್‌ಗಳು ಮುಕೇಶ್ ಅಂಬಾನಿಯವರ ಜಿಯೋದಿಂದ ಪ್ರಮುಖ ಜಾಗತಿಕ ಸ್ಮಾರ್ಟ್‌ಫೋನ್ ಕಂಪನಿಗಳಾದ Samsung, Xiaomi ಮತ್ತು Panasonic ವರೆಗೆ ವ್ಯಾಪಿಸಿದೆ.
ಹೊಸ ವರ್ಷದ 2024ಕ್ಕೆ ಹೊಸ ಆಫರ್ ಘೋಷಿಸಿದ ಅಂಬಾನಿಯ ರಿಲಾಯನ್ಸ್ ಜಿಯೋ
2017ರಲ್ಲಿ ಮತ್ತೆ ಪಟ್ಟಿ ಮಾಡಿದ ನಂತರ ಕಂಪನಿಯ ಷೇರುಗಳು ಹೆಚ್ಚುತ್ತಿವೆ. ವಚಾನಿ ಸಂಸ್ಥೆಯು ಇಂದು ವಾರ್ಷಿಕವಾಗಿ 5 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. 52 ವರ್ಷದ ವಚಾನಿ ಕಂಪನಿಯಲ್ಲಿ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದಾರೆ. 2021ರಲ್ಲಿ, ಅವರು ಲುಟ್ಯೆನ್ಸ್ ದೆಹಲಿಯಲ್ಲಿ 170 ಕೋಟಿ ರೂಪಾಯಿಗಳ ಅದ್ದೂರಿ ಬಂಗಲೆಯನ್ನು ಖರೀದಿಸಿದರು.