Asianet Suvarna News Asianet Suvarna News

Vedant Lamba: ಕಾಲೇಜ್ ಮೆಟ್ಟಿಲೇರಿಲ್ಲವೆಂದ್ರೂ ಆನ್ಲೈನಲ್ಲಿ ಚಪ್ಪಲಿ ಮಾರಿ ಕೋಟ್ಯಧಿಪತಿಯಾದ ಯುವಕ

ಕೆಲಸದಲ್ಲಿ ಮೇಲು ಕೀಳಿಲ್ಲ. ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿದ್ರೆ ಯಶಸ್ಸು ಸಿಕ್ಕೇ ಸಿಗುತ್ತೆ ಅಂತಾ ದೊಡ್ಡವರು ಹೇಳಿದ್ದಾರೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಯುವ ಉದ್ಯಮಿಯೊಬ್ಬ ತನ್ನ ಕೆಲಸ ಮೂಲಕ ನೂರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾನೆ, 

Success Story Vedant Lamba Founder Mainstreet Marketplace School Dropout roo
Author
First Published Feb 24, 2024, 1:18 PM IST

ನಿತ್ಯ ಅಗತ್ಯವಿರುವ ವಸ್ತುಗಳಲ್ಲಿ ಚಪ್ಪಲಿ, ಶೂ ಕೂಡ ಸೇರಿದೆ. ಚಪ್ಪಲಿ, ಶೂಗಳಲ್ಲಿ ಬ್ರ್ಯಾಂಡ್, ಸ್ಟೈಲ್, ಫ್ಯಾಷನ್ ಈಗಿನ ದಿನಗಳಲ್ಲಿ ಮಹತ್ವ ಪಡೆಯುತ್ತದೆ. ಹಿಂದೆ ಚಪ್ಪಲಿ ಖರೀದಿಗೆ ಅಂಗಡಿಗೆ ಹೋಗ್ಬೇಕಿತ್ತು. ಶೂ, ಚಪ್ಪಲಿ ವ್ಯಾಪಾರ ಎಂದಾಗ ಬಹುತೇಕರು ಅಂಗಡಿ ತೆರೆದು ಅಲ್ಲಿ ಮಾರಾಟ ಮಾಡೋದು ಎಂದೇ ಅಂದುಕೊಳ್ತಾರೆ. ಆದ್ರೆ ಈಗಿನ ಸಮಾಜಕ್ಕೆ ತಕ್ಕಂತೆ ನಮ್ಮ ವ್ಯವಹಾರವನ್ನು ಬದಲಿಸಿದಾಗ ಅದಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ. ಆದಷ್ಟು ಬೇಗ ಹೆಚ್ಚಿನ ಆದಾಯ ಗಳಿಸುವ ಜೊತೆಗೆ ಜನಪ್ರಿಯತೆ ಗಳಿಸಬಹುದು. ಇದನ್ನು ಚೆನ್ನಾಗಿ ಅರಿತಿದ್ದ ವೇದಾಂತ್ ಲಂಬಾ, ಯುವ ಉದ್ಯಮಿಗಳಿಗೆ ಸ್ಫೂರ್ತಿದಾಯಕವಾಗಿದ್ದಾರೆ. ವೇದಾಂತ್ ಲಂಬಾ (Vedanta Lamba) ಸಾಮಾನ್ಯರಿಗಿಂತ ಒಂದು ಪಟ್ಟು ಹೆಚ್ಚು ಬುದ್ಧಿ ಉಪಯೋಗಿಸಿದ ಕಾರಣ ಉದ್ಯಮ ಈಗ ದೊಡ್ಡಮಟ್ಟದಲ್ಲಿ ವಿಸ್ತಾರಗೊಂಡಿದೆ. ಸ್ನೀಕರ್ಸ್ (Sneaker) ಮಾರಾಟ ಮಾಡ್ತಿರುವ ವೇದಾಂತ್ ಲಂಬಾ ಕಂಪನಿ (Company) ಗೆ ಬಾಲಿವುಡ್ ತಾರೆಯರು, ಕೈಗಾರಿಕೋದ್ಯಮಿಗಳು ಕೂಡ ಗ್ರಾಹಕರಾಗಿದ್ದಾರೆ. ಕೇವಲ ಹೈಸ್ಕೂಲ್ ಮುಗಿಸಿರುವ ವೇದಾಂತ್ ಲಂಬಾ ಯಶಸ್ಸಿನ ಕಥೆ ಇಲ್ಲಿದೆ.

ವೇದಾಂತ್ ಲಂಬಾ ಯಾರು? : ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್‌ನ ಸಂಸ್ಥಾಪಕ ವೇದಾಂತ್ ಲಂಬಾ. ವೇದಾಂತ್ 2005 ಮತ್ತು 2010 ರ ನಡುವೆ ಪುಣೆ (Pune) ಯ ಸೇಂಟ್ ಮೇರಿಸ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರು ಓದಿದ್ದು ಹೈಸ್ಕೂಲ್ ಶಿಕ್ಷಣ ಮಾತ್ರ. ವೇದಾಂತ್ ಲಂಬಾ ಪ್ರಯಾಣ ಶುರುವಾಗಿದ್ದು ಯುಟ್ಯೂಬ್ ಚಾನೆಲ್ ಮೂಲಕ. ಅವರು ಆರಂಭದಲ್ಲಿ ಅಂದ್ರೆ 2017 ರಲ್ಲಿ  ಮೇನ್ ಸ್ಟ್ರೀಟ್ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ನಂತ್ರ ಅದನ್ನು ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ ಹೆಸರಿನ ಸ್ಟಾರ್ಟ್ ಅಪ್ ಆಗಿ ಅಭಿವೃದ್ಧಿಪಡಿಸಿದ್ರು. ಮೇನ್ ಸ್ಟ್ರೀಟ್ ಮಾರ್ಕೆಟ್ ಪ್ಲೇಸ್ ಮೂಲಕ ವೇದಾಂತ್ ಲಂಬಾ, ಆನ್ಲೈನ್ ನಲ್ಲಿ ವ್ಯವಹಾರ ನಡೆಸುತ್ತಾರೆ. ಅವರು ಆನ್ಲೈನ್ ನಲ್ಲಿ ಸ್ನೀಕರ್ಸ್ ಮಾರಾಟ ಶುರು ಮಾಡಿದ್ರು. 

ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!

ಸ್ನೀಕರ್ಸ್ ಪ್ರೇಮಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಅನೇಕರು ಸ್ನೀಕರ್ಸ್ ಬಳಸ್ತಾರೆ. ಈಗಿನ ದಿನಗಳಲ್ಲಿ ಅಂಗಡಿಗೆ ಹೋಗಿ ಹಾಲು ಖರೀದಿ ಮಾಡುವವರ ಸಂಖ್ಯೆ ಕೂಡ ಕಡಿಮೆ. ಆನ್ಲೈನ್ ನಲ್ಲಿಯೇ ಬುಕ್ ಮಾಡಿ, ಮನೆಯವರೆಗೆ ಡಿಲೆವರಿ ಪಡೆಯುವವರೇ ಹೆಚ್ಚಿರುವ ಕಾರಣ ವೇದಾಂತ್ ಲಂಬಾ ವ್ಯಾಪಾರ ಕ್ಲಿಕ್ ಆಗಿದೆ. 

ವೇದಾಂತ್ ಲಂಬಾ, ಫ್ಲಿಪ್‌ಕಾರ್ಟ್, ಅಮೆಜಾನ್, ಮೈಂತ್ರಾ ಮತ್ತು ಝೆಬಾಂಗ್‌ನಂತಹ ಮೇನ್ ಸ್ಟ್ರೀಟ್ ನಲ್ಲಿ ಆನ್‌ಲೈನ್ ಮಾರುಕಟ್ಟೆ ಆರಂಭಿಸಿದ್ದಾರೆ.  ವೇದಾಂತ್ ಲಂಬಾ ಆನ್ಲೈನ್ ಮಾರುಕಟ್ಟೆಯಲ್ಲಿ ಜನಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ಸ್ ಗಳಾದ ರಣಬೀರ್ ಕಪೂರ್, ಕರಣ್ ಜೋಹರ್, ರಣವೀರ್ ಸಿಂಗ್ ಕೂಡ ಗ್ರಾಹಕರು. ವೇದಾಂತ್ ಲಂಬಾ ಯಶಸ್ಸಿಗೆ ವ್ಯಾಪಾರದಲ್ಲಿ ಅವರು ಅಳವಡಿಸಿರುವ ಬುದ್ಧಿವಂತಿಕೆ ಕಾರಣವಾಗಿದೆ. 

ವೇದಾಂತ್ ಲಂಬಾ ಸ್ಟಾರ್ಟ್ ಆಪ್ ಶುರು ಮಾಡುವಾಗ್ಲೇ ಕೆಲವು ಬಿಲಿಯನೇರ್ ಕೈಗಾರಿಕೋದ್ಯಮಿಗಳು 2 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಇವರಲ್ಲಿ ಝೊಮಾಟೊ ಸಿಇಒ ದೀಪಿಂದರ್ ಗೋಯಲ್, ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಬಾದ್‌ಶಾ ಅವರಂತಹ ರಾಪರ್‌ಗಳು ಸೇರಿದ್ದಾರೆ.

ನಾರಿಯೇ'ಅಮುಲ್' ಶಕ್ತಿ; ದೇಶದ ನಂ.1 ಡೈರಿ ಸಂಸ್ಥೆಯಲ್ಲಿದೆ 36 ಲಕ್ಷ ಮಹಿಳೆಯರ ಪಾಲು!

ವೇದಾಂತ್ ಲಂಬಾ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಅವರ ಮಾರುಕಟ್ಟೆಯಲ್ಲಿ ಈಗ 3,000 ಕ್ಕೂ ಉತ್ಪನ್ನಗಳಿವೆ. ಸ್ನೀಕರ್ಸ್, ಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ಅವರು ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದ್ದಾರೆ. ಉದ್ಯಮ ಶುರು ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ವೇದಾಂತ್ ಲಂಬಾ,24 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದಾರೆ. ಈ ವರ್ಷ ಅವರ ಆದಾಯ 100 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.

Follow Us:
Download App:
  • android
  • ios