ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!
ವಯಸ್ಸು ಕೇವಲ ಅಂಕಿ ಮಾತ್ರ. ದುಡಿಮೆ ವಿಷ್ಯದಲ್ಲಿ ಇದು ಲೆಕ್ಕಕ್ಕೆ ಬರೋದಿಲ್ಲ ಎಂಬುದನ್ನು ಈ ಮಹಿಳೆ ಸರಿಯಾಗಿ ಅರಿತಿದ್ದಾರೆ. ನಿರಂತರ ದುಡಿಮೆ ಹಾಗೂ ಪರಿಶ್ರಮದಿಂದ ಆದಾಯ ಗಳಿಸಬಹುದು ಎಂಬುದನ್ನು ಈಕೆ ತೋರಿಸಿದ್ದಾಳೆ.
ಇದು ಸಾಮಾಜಿಕ ಜಾಲತಾಣಗಳ ಪರ್ವ. ಕೋಟ್ಯಾಂತರ ಮಂದಿಗೆ ಜ್ಞಾನದ ಜೊತೆ ಮನರಂಜನೆ ನೀಡುವ ಸಾಮಾಜಿಕ ಜಾಲತಾಣಗಳು ಇಷ್ಟಕ್ಕೆ ಸೀಮಿತವಾಗಿಲ್ಲ. ಲಕ್ಷಾಂತರ ಮಂದಿಗೆ ಆದಾಯ ತಂದುಕೊಡುವ ಮೂಲಗಳಾಗಿವೆ. ಒಳ್ಳೆಯ ಕೆಲಸ ಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಲಕ್ಷಾಂತರ ಹಣ ಸಂಪಾದನೆ ಮಾಡುವ ಜನರು ನಮ್ಮಲ್ಲಿದ್ದಾರೆ. ಮಕ್ಕಳು, ವೃದ್ಧರಿಂದ ಹಿಡಿದು ಗೃಹಿಣಿಯರನ್ನು ಸ್ವಾವಲಂಭಿ ಮಾಡಿ, ಹೊಸ ಕನಸು ಚಿಗುರುವಂತೆ ಮಾಡಿದ್ದು ಈ ಸಾಮಾಜಿಕ ಜಾಲತಾಣ.
ಇನ್ಸ್ಟಾಗ್ರಾಮ್ (Instagram) ರೀಲ್ಸ್ ಹಾಗೂ ಯುಟ್ಯೂಬ್ (Youtube) ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅನೇಕ ಗೃಹಿಣಿರು ಹಣ ಸಂಪಾದನೆ ಮಾಡ್ತಿದ್ದಾರೆ. ಕೆಲಸಕ್ಕೆಂದು ಬೇರೆ ಸ್ಥಳಕ್ಕೆ ಹೋಗುವ ಅಗತ್ಯವಿಲ್ಲ. ಇನ್ನೊಬ್ಬರ ಕೈಕೆಳಗೆ ದುಡಿಯುವ ಅನಿವಾರ್ಯತೆ ಇಲ್ಲ. ಕೆಲಸಕ್ಕೆಂದೇ ಸಮಯ ಹೊಂದಿಸಿಕೊಳ್ಳುವ ತಾಪತ್ರಯವಿಲ್ಲ. ಸಿಕ್ಕ ಸಮಯದಲ್ಲಿ ಒಂದು ವಿಡಿಯೋ ತಯಾರಿಸಿ, ಅದನ್ನು ಸಾಮಾಜಿಕ ಜಾಲತಾಣ (Social Media) ದಲ್ಲಿ ಪೋಸ್ಟ್ ಮಾಡಿದ್ರೆ ಆಯ್ತು. ಒಳ್ಳೆ ಕಂಟೆಂಟ್ ವಿಡಿಯೋಗಳನ್ನು ಜನರು ನೋಡೇ ನೋಡ್ತಾರೆ. ಇದ್ರಿಂದ ಸಂಪಾದನೆ ಆಗೇ ಆಗುತ್ತೆ. ಯುಟ್ಯೂಬ್ ಮೂಲಕವೇ ಲಕ್ಷಾಂತರ ಜನರ ಮನಗೆದ್ದು, ಸಂಪಾದನೆ ಮಾಡ್ತಿರುವ ಮಹಿಳೆಯೊಬ್ಬಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
700 ರೂ. ಹೂಡಿ ಕೆಲಸ ಶುರುಮಾಡಿದವಳ ಗಳಿಕೆ ಈಗ ಒಂದೂವರೆ ಲಕ್ಷ !
ಯುಟ್ಯೂಬ್ ವಿಡಿಯೋ ಮೂಲಕ ಲಕ್ಷಾಂತರ ಸಂಪಾದನೆ : ನಮಗೆ ಬರೋದು ಬರೀ ಅಡಿಗೆ, ಮನೆ ಕೆಲಸ. ಇದ್ರಿಂದ ಸಂಪಾದನೆ ಹೇಗೆ ಸಾಧ್ಯ ಎನ್ನುತ್ತಿದ್ದ ಮಹಿಳೆಯರು ಈಗ ಬದಲಾಗಿದ್ದಾರೆ. ಹೊಸ ರುಚಿಯಿಂದ ಹಿಡಿದು ನಿತ್ಯದ ಆಹಾರಗಳ ತಯಾರಿಕೆ ವಿಡಿಯೋ ಮಾಡಿ ಅದನ್ನು ಪೋಸ್ಟ್ ಮಾಡಿ ಆದಾಯ ಪಡೆಯುತ್ತಿದ್ದಾರೆ. ಈಗ ನಾವು ಹೇಳ ಹೊರಟಿರುವ ಯುಟ್ಯೂಬರ್ ಹೆಸರು ನಿಶಾ ಮಧುಲಿಕಾ. ಅವರು ಅಡುಗೆ ವಿಡಿಯೋಗಳನ್ನು ಪೋಸ್ಟ್ ಮಾಡ್ತಾರೆ. ಯೂಟ್ಯೂಬ್‌ನಲ್ಲಿ 14 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ನಿಶಾ ಮಧುಲಿಕಾ ಹೊಂದಿದ್ದಾರೆ.
ಎಲ್ಲಿಂದ ಶುರವಾಯ್ತು ಪ್ರಯಾಣ ? : ನಿಶಾ ಮಧುಲಿಕಾ ಬಡ ಮಕ್ಕಳಿಗೆ ಟ್ಯೂಷನ್ ಹೇಳಿಕೊಡ್ತಿದ್ದರು. ಒಮ್ಮೆ ಅಡುಗೆ ಬ್ಲಾಗ್ ನೋಡಿದ ಅವರು ಅಡುಗೆ ಮೇಲೆ ಪ್ರೀತಿ ಬೆಳೆಸಿಕೊಂಡರು. ನಂತರ ಅದನ್ನೇ ವೃತ್ತಿ ಮಾಡಿಕೊಂಡರು. 54 ವರ್ಷದ ನಿಶಾ ಮಧುಲಿಕಾ 2007 ರಲ್ಲಿ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. ಇದರ ನಂತರ 2011 ರಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಯುಟ್ಯೂಬ್ ಶುರು ಮಾಡಿದ ನಂತ್ರ ನಿಶಾ ಮಧುಲಿಕಾ ಪ್ರಸಿದ್ಧಿ ಹೆಚ್ಚಾಯ್ತು. ಅವರು ನಂತ್ರ ಹಿಂತಿರುಗಿ ನೋಡಲಿಲ್ಲ. ನಿಶಾ, ಯುಟ್ಯೂಬ್ ಮೂಲಕ ಮನೆ ಮನೆಯನ್ನು ತಲುಪಲು ಸಾಧ್ಯವಾಯ್ತು.
ರುಚಿಕರವಾದ ಅಡುಗೆ ಜೊತೆಗೆ ಸಿಹಿ ತಿಂಡಿ, ಕೇಕ್, ಚಾಕೋಲೇಟ್ ಸೇರಿದಂತೆ ಅನೇಕ ಭಕ್ಷ್ಯಗಳ ತಯಾರಿ ಬಗ್ಗೆ ಅವರು ವಿಡಿಯೋ ಮಾಡ್ತಾರೆ. ಅವರ ಚಾನೆಲ್‌ನಲ್ಲಿ 2200 ಕ್ಕೂ ಹೆಚ್ಚು ಅಡುಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇಂಟರ್ನೆಟ್ ನ ಪ್ರಸಿದ್ಧ ಬಾಣಸಿಗರಾಗಿರುವ ನಿಶಾ ಮಧುಲಿಕಾ ಗಳಿಕೆ ಕಡಿಮೆ ಏನಿಲ್ಲ.
ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ; ಅಬ್ಬಬ್ಬಾ ದಿನಕ್ಕೆ ಇಷ್ಟೊಂದು ಸ್ಯಾಲರೀನಾ?
ನಿಶಾ ಮಧುಲಿಕಾ, ಯುಟ್ಯೂಬ್ (Youtube) ಮೂಲಕವೇ ಖ್ಯಾತರಾಗಿದ್ದಾರೆ. ಹಣ ಸಂಪಾದನೆ ಕೂಡ ಮಾಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ನಿಶಾ ಮಧುಲಿಕಾ ಆಸ್ತಿ ಸುಮಾರು 29 ಕೋಟಿ ರೂಪಾಯಿದ್ದಾಗಿದೆ. ಬರಿ ಕನಸು ಕಂಡ್ರೆ ಸಾಕಾಗೋದಿಲ್ಲ, ಅದನ್ನು ನನಸು ಮಾಡಲು ನಿರಂತರ ಪ್ರಯತ್ನ ನಡೆಸಬೇಕು ಎಂಬುದಕ್ಕೆ ನಿಶಾ ಮಧುಲಿಕಾ ಸಾಕ್ಷಿಯಾಗಿದ್ದಾರೆ. ಧೈರ್ಯಗೆಡದೆ, ಜನರಿಗೆ ಒಳ್ಳೋಳ್ಳೆ ಅಡುಗೆ ಬಗ್ಗೆ ಮಾಹಿತಿ ನೀಡುವ ಮೂಲಕ ಸಂಪಾದನೆ ಮಾಡ್ತಿರುವ ನಿಶಾ ಮಧುಲಿಕಾ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.