ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ; ಅಬ್ಬಬ್ಬಾ ದಿನಕ್ಕೆ ಇಷ್ಟೊಂದು ಸ್ಯಾಲರೀನಾ?
ಕೋಟ್ಯಾಂತರ ಬಿಸಿನೆಸ್ ನಡೆಸೋ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್. ಈ ಕಂಪೆನಿಯಲ್ಲಿ ಕೋಟ್ಯಾಂತರ ಮಂದಿ ಉದ್ಯೋಗಿಗಳಿದ್ದಾರೆ. ಕೆಲವರು ಉನ್ನತ ಅಧಿಕಾರದಲ್ಲಿದ್ದರೆ ಮತ್ತೆ ಕೆಲವರು ಸಾಮಾನ್ಯ ಕೆಲಸಗಾರರಾಗಿದ್ದಾರೆ. ಆದರೆ ಇದರಲ್ಲಿ ಅತೀ ಹೆಚ್ಚು ಸಂಬಳ ಪಡೆಯೋ ಉದ್ಯೋಗಿ ಯಾರೆಂದು ನಿಮಗೆ ಗೊತ್ತಿದ್ಯಾ?
ಮುಕೇಶ್ ಅಂಬಾನಿ 833215 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮಾತ್ರವಲ್ಲ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರೂ ಹೌದು. ಇದು 1763000 ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಭಾರತದ ಅತ್ಯಂತ ದೊಡ್ಡ ಕಂಪೆನಿಯಾಗಿದೆ. ಹಲವು ಅಂಗಸಂಸ್ಥೆಗಳನ್ನು ಹೊಂದಿರುವ ರಿಲಯನ್ಸ್ ಕಂಪೆನಿಯಲ್ಲಿ ಕೋಟ್ಯಾಂತರ ಉದ್ಯೋಗಿಗಳಿದ್ದಾರೆ. ಕೆಲವರು ಉನ್ನತ ಅಧಿಕಾರದಲ್ಲಿದ್ದರೆ ಮತ್ತೆ ಕೆಲವರು ಸಾಮಾನ್ಯ ಕೆಲಸಗಾರರಾಗಿದ್ದಾರೆ. ಆದರೆ ಇದರಲ್ಲಿ ಅತೀ ಹೆಚ್ಚು ಸಂಬಳ ಪಡೆಯೋ ಉದ್ಯೋಗಿ ಯಾರೆಂದು ನಿಮಗೆ ಗೊತ್ತಿದ್ಯಾ?
ಈ ವ್ಯಕ್ತಿ ಅಂಬಾನಿ ಕುಟುಂಬದ ಯಾವುದೇ ಸದಸ್ಯರಿಗಿಂತ ಹೆಚ್ಚು ಸಂಬಳವನ್ನು ತೆಗೆದುಕೊಳ್ಳುತ್ತಾರೆ. ಅವರ ಹೆಸರು ನಿಖಿಲ್ ಮೆಸ್ವಾನಿ. ಮುಕೇಶ್ ಅಮಾಬ್ನಿ ಅವರ ಮೊದಲ ಬಾಸ್ ರಸಿಕ್‌ಭಾಯ್ ಮೆಸ್ವಾನಿ ಪುತ್ರ. ನಿಖಿಲ್ ಮೆಸ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿದ್ದು,ತಲಾ 24 ಕೋಟಿ ರೂ. ಪಡೆಯುತ್ತಾರೆ.
ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿ, ಈಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್!
ಮುಕೇಶ್ ಅಂಬಾನಿಗೆ ಗೈಡ್ ಮಾಡಿದ್ದ ರಸಿಕ್‌ಭಾಯ್
ಮುಕೇಶ್ ಅಂಬಾನಿ ಅವರು ತಮ್ಮ ತಂದೆ ಧೀರೂಭಾಯಿ ಅಂಬಾನಿಯವರ ಬಿಸಿನೆಸ್‌ನ್ನು ಮುನ್ನಡೆಸುವಾಗ ರಸಿಕ್ ಭಾಯ್ ಮೆಸ್ವಾನಿ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಧೀರೂಭಾಯಿ ಅಂಬಾನಿಯವರ ಸೋದರಳಿಯ ಮತ್ತು ರಿಲಯನ್ಸ್‌ನ ಮೂಲ ನಿರ್ದೇಶಕರಲ್ಲಿ ಒಬ್ಬರಾದ ರಸಿಕಭಾಯ್ ಅವರನ್ನು ಮುಕೇಶ್ ಅವರಿಗೆ ಮಾರ್ಗದರ್ಶನ ಮಾಡಲು ನಿಯೋಜಿಸಲಾಗಿತ್ತು.
ಹಿಂದಿನ ಸಂದರ್ಶನವೊಂದರಲ್ಲಿ ಮುಕೇಶ್ ಅಂಬಾನಿ, ಧೀರೂಭಾಯಿ ಅವರು ಆಗ ಬೆಳೆಯುತ್ತಿರುವ ಪಾಲಿಯೆಸ್ಟರ್ ವಿಭಾಗವನ್ನು ನಿರ್ವಹಿಸುತ್ತಿದ್ದ ರಸಿಕ್‌ಭಾಯ್ ಅವರನ್ನು ಹೇಗೆ ತಮ್ಮ ಮೊದಲ ಮೇಲ್ವಿಚಾರಕರಾಗಿ ನೇಮಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು.
ಹೊಸ ವರ್ಷದಲ್ಲಿ ಮುಕೇಶ್ ಅಂಬಾನಿ ಬಿಗ್ ಬಿಸಿನೆಸ್ ಪ್ಲಾನ್ , AI ಬಳಸಿ ಕೋಟಿ ಕೋಟಿ ಗಳಿಸುತ್ತಾ ಅಂಬಾನಿ ಗ್ರೂಪ್!
ಪೆಟ್ರೋಕೆಮಿಕಲ್ಸ್ ವಿಭಾಗವನ್ನು ನಿರ್ವಹಿಸುತ್ತಿರುವ ನಿಖಿಲ್ ಮೆಸ್ವಾನಿ
ಇಂದು, ರಸಿಕ್‌ಭಾಯ್ ಮೆಸ್ವಾನಿ ಅವರ ಮಗ, ನಿಖಿಲ್ ಮೆಸ್ವಾನಿ, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿ ನಿಂತಿದ್ದಾರೆ. ಮುಕೇಶ್ ಅಂಬಾನಿಯವರ ಮಾರ್ಗವನ್ನು ಅನುಸರಿಸಿ, ನಿಖಿಲ್ ಪ್ರಾಜೆಕ್ಟ್ ಆಫೀಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಂತ ಹಂತವಾಗಿ ಉನ್ನತ ಹುದ್ದೆಗೇರಿದ ಅವರು ಕಾರ್ಯನಿರ್ವಾಹಕ ನಿರ್ದೇಶಕರಾದರು. ನಿಖಿಲ್ 1986ರಲ್ಲಿ ರಿಲಯನ್ಸ್‌ಗೆ ಸೇರಿದರು. ಜುಲೈ 1, 1988 ರಿಂದ ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಂಬ ಶೀರ್ಷಿಕೆಯೊಂದಿಗೆ ಸಂಪೂರ್ಣ ಸಮಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯವಾಗಿ ನಿಖಿಲ್, ಪೆಟ್ರೋಕೆಮಿಕಲ್ಸ್ ವಿಭಾಗದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ರಿಲಯನ್ಸ್ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಇಂಡಿಯನ್ ಸೂಪರ್ ಲೀಗ್ ಮತ್ತು ಕಂಪನಿಯ ಇತರ ಕ್ರೀಡಾ ಉಪಕ್ರಮಗಳಲ್ಲಿ ನಿಖಿಲ್ ಮೆಸ್ವಾನಿ ಕೂಡಾ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಮುಖ್ಯವಾಗಿ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದರೂ, ಯಾವುದೇ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲು, ಮುಕೇಶ್ ಅಂಬಾನಿ ವಾರ್ಷಿಕವಾಗಿ 15 ಕೋಟಿ ರೂಪಾಯಿ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರು.