ಚಿಕ್ಕ ವಯಸ್ಸಿನಲ್ಲೇ ಮದುವೆ, ಮಕ್ಕಳಾದ್ರೂ ಛಲಬಿಡದ ಪಾಕಿಸ್ತಾನದ ಮಹಿಳೆ.. ಉದ್ಯಮವಾಯ್ತು ಹವ್ಯಾಸ
ಮದುವೆ ಮತ್ತು ಮಕ್ಕಳಾದ್ಮೇಲೆ ಬಹುತೇಕ ಮಹಿಳೆಯರು ಮನೆಗೆ ಸೀಮಿತವಾಗ್ತಾರೆ. ಆದ್ರೆ ಅವರಲ್ಲಿ ಈಕೆ ಭಿನ್ನವಾಗಿ ನಿಲ್ಲುತ್ತಾರೆ. ತಮ್ಮ ಹವ್ಯಾಸಕ್ಕೆ ಹೊಸ ರೂಪ ನೀಡಿ, ಈಗ ಎತ್ತರಕ್ಕೆ ಏರಿದ್ದಾರೆ.
ಕೆಲಸ ಮಾಡುವ ಉತ್ಸಾಹ ಹೊಂದಿದ್ದರೆ ಯಾವ ಕೆಲಸವನ್ನಾದ್ರೂ ಯಾವ ವಯಸ್ಸಿನಲ್ಲಾದ್ರೂ ಮಾಡಬಹುದು. ಇದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದ ರಜನಿ ಬೆಕ್ಟರ್ ಕೂಡ ಇದ್ರಲ್ಲಿ ಒಬ್ಬರು. ಅವರ ಸಾಧನೆ ಅನೇಕಾನೇಕ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ಮಿಸಸ್ ಬೆಕ್ಟರ್ ಫುಡ್ ಸ್ಪೆಷಾಲಿಟೀಸ್ ಸಂಸ್ಥಾಪಕಿ ರಜನಿ ಬೆಕ್ಟರ್. ಸಮರ್ಪಣಾ ಮನೋಭಾವ, ಕಠಿಣ ಪರಿಶ್ರಮ ಹಾಗೂ ಕೌಶಲ್ಯದಿಂದ ರಜನಿ ಬೆಕ್ಟರ್ ಈ ಹಂತಕ್ಕೆ ತಲುಪಿದ್ದಾರೆ. 6 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ರಜನಿಯವರ ಕಂಪನಿ ಹೊಂದಿದೆ. ರಜನಿ ಬೆಕ್ಟರ್ ಅವರ ಮಿಸಸ್ ಬೆಕ್ಟರ್ ಫುಡ್ ಸ್ಪೆಷಾಲಿಟೀಸ್ ಗೆ ಮೆಕ್‌ಡೊನಾಲ್ಡ್ಸ್ ಮತ್ತು ಬರ್ಗರ್ ಕಿಂಗ್ ಕಂಪನಿಗಳು ಗ್ರಾಹಕರಾಗಿದ್ದಾರೆ.
ರಜನಿ ಹುಟ್ಟಿದ್ದು ಕರಾಚಿಯಲ್ಲಿ. ಬೆಳೆದಿದ್ದು ಲಾಹೋರ್ (Lahore) ನಲ್ಲಿ. ದೇಶ ವಿಭಜನೆ ಸಂದರ್ಭದಲ್ಲಿ ತಂದೆ ಜೊತೆ ದೆಹಲಿಗೆ ಬಂದ ರಜನಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಆಯ್ತು. ತಮ್ಮ ಹದಿನೇಳನೇ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಜನಿ ಬೆಕ್ಟರ್ ಮನೆಯಲ್ಲಿ ಖಾಲಿ ಕುಳಿತುಕೊಳ್ಳಲಿಲ್ಲ. ಮದುವೆ ನಂತ್ರ ಓದು ಮುಂದುವರೆಸಿದರು.
ಅಂಬಾನಿ,ಅದಾನಿಗಿಂತಲೂ ಹೆಚ್ಚು ಸಂಪತ್ತು ಗಳಿಸಿದ ಸಾವಿತ್ರಿ ಜಿಂದಾಲ್; ಸಂಪತ್ತಿನಲ್ಲಿ9.6 ಶತಕೋಟಿ ಡಾಲರ್ ಏರಿಕೆ
ಮಕ್ಕಳು ದೊಡ್ಡವರಾಗ್ತಿದ್ದಂತೆ ಹವ್ಯಾಸ (Hobby) ವನ್ನು ಉದ್ಯಮ ಮಾಡಿಕೊಂಡ ರಜಿನಿ : ಮದುವೆ, ಓದು ಮುಗಿದ ನಂತ್ರ ರಜನಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ರು. ಮಕ್ಕಳು ಶಾಲೆಗೆ ಹೋಗ್ತಿದ್ದಂತೆ ರಜನಿಗೆ ಮನೆಯಲ್ಲಿ ಹೆಚ್ಚಿನ ಕೆಲಸ ಇರ್ತಿರಲಿಲ್ಲ. ಅಡುಗೆಯಲ್ಲಿ ಆಸಕ್ತಿ ಹೊಂದಿದ್ದ, ಹೊಸ ಹೊಸ ರುಚಿಗಳನ್ನು ಪ್ರಯತ್ನಿಸುತ್ತಿದ್ದ ರಜನಿ ಇದ್ರಲ್ಲೇ ಮುಂದುವರೆಯುವ ಮನಸ್ಸು ಮಾಡಿದ್ರು. ಹಾಗಾಗಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕಿಂಗ್ (Baking) ಕೋರ್ಸ್‌ಗೆ ಸೇರಿಕೊಂಡರು. ಐಸ್ ಕ್ರೀಮ್, ಕುಕ್ಕಿ, ಕೇಕ್ ಗಳನ್ನು ತಯಾರಿಸಲು ಕಲಿತ ರಜನಿ ಅದನ್ನು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ರುಚಿ ನೋಡಲು ನೀಡ್ತಿದ್ದರು.
ರಜನಿ ಕೈ ರುಚಿ ನೋಡಿದ ಆಪ್ತರು ಇದನ್ನು ವ್ಯಾಪಾರ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಅದರಂತೆ ರಜನಿ 1970 ರಲ್ಲಿ ರಜನಿ ಮನೆಯಲ್ಲಿ ಐಸ್ ಕ್ರೀಮ್ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ.
ಇದಾದ್ಮೇಲೆ ರಜನಿ ಕುಕ್ಕಿಗೆ ಕೈ ಹಾಕಿದ್ರು. 1978 ರಲ್ಲಿ ಸ್ವಲ್ಪ ಬಂಡವಾಳವನ್ನು ಹಾಕಿ ತಮ್ಮ ಉದ್ಯಮವನ್ನು ವಿಸ್ತರಿಸುವ ನಿರ್ಧಾರಕ್ಕೆ ಬಂದಿದ್ದರು. ಹಾಗಾಗಿ 20,000 ರೂಪಾಯಿ ಆರಂಭಿಕ ಬಂಡವಾಳ ಹಾಕಿದ ರಜನಿ, ಬಿಸ್ಕತ್ತು, ಕುಕಿ, ಕೇಕ್ ತಯಾರಿ ಮಾರಾಟ ಆರಂಭಿಸಿದ್ರು. ಮಿಸಸ್ ಬೆಕ್ಟರ್ ಫುಡ್ ಸ್ಪೆಷಾಲಿಟೀಸ್ ಮೊದಲ ಹೆಸರು ಕ್ರಿಮಿಕಾ ಎಂದಾಗಿತ್ತು. ನಂತ್ರ ರಜನಿ ಹೆಸರು ಬದಲಿಸಿಕೊಂಡರು. ರಜನಿ ತಯಾರಿಸುತ್ತಿದ್ದ ಕುಕ್ಕಿ, ಬಿಸ್ಕತ್ ಮತ್ತು ಕೇಕ್ ಗೆ ಬಹಳ ಬೇಡಿಕೆ ಇತ್ತು.
ಈಗ ಉನ್ನತ ಮಟ್ಟಕ್ಕೇರಿದೆ ಮಿಸಸ್ ಬೆಕ್ಟರ್ ಫುಡ್ ಸ್ಪೆಷಾಲಿಟಿಸ್ : ರಜನಿ ನಿಧಾನವಾಗಿ ಬೆಳೆದ್ರೂ ಗ್ರಾಹಕರಲ್ಲಿ ವಿಶ್ವಾಸ ಉಳಿಸಿಕೊಂಡು ಬಂದ್ರು. ಈಗ ಅವರ ಕಂಪನಿ 60 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಮಿಸಸ್ ಬೆಕ್ಟರ್ ಫುಡ್ ಸ್ಪೆಷಾಲಿಟಿಸ್ 6 ಸಾವಿರ ಕೋಟಿ ಬಂಡವಾಳವನ್ನು ಹೊಂದಿದೆ. 2020 ರಲ್ಲಿ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ರಜನಿ ಕೆಲಸವನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಹೋಟೆಲ್‌ನಲ್ಲಿ ಕೇವಲ 15 ರೂ. ಕ್ಯಾರೆಟ್‌ನಿಂದ 1,500 ರೂ. ಆದಾಯ: ನೀವೂ ಟ್ರೈ ಮಾಡಿ!
ಆರಂಭದಲ್ಲಿ ಹವ್ಯಾಸವಾಗಿ ಶುರುವಾದ ಬಿಸ್ಕತ್, ಕುಕ್ಕಿ ತಯಾರಿಗೆ ಈಗ ದೊಡ್ಡ ಮಟ್ಟದ ಬ್ಯುಸಿನೆಸ್ ಆಗಿ ರೂಪಗೊಂಡಿದೆ. ಅನೇಕ ದೊಡ್ಡ ಫಾಸ್ಟ್ ಫುಡ್ ಕಂಪನಿಗಳು ರಜನಿ ಕಂಪನಿಯಿಂದ ಸಾಮಾನು ಖರೀದಿ ಮಾಡುತ್ವೆ.