Asianet Suvarna News Asianet Suvarna News

ಹೋಟೆಲ್‌ನಲ್ಲಿ ಕೇವಲ 15 ರೂ. ಕ್ಯಾರೆಟ್‌ನಿಂದ 1,500 ರೂ. ಆದಾಯ: ನೀವೂ ಟ್ರೈ ಮಾಡಿ!

ಐಷಾರಾಮಿ ಹೋಟೆಲ್‌ನಲ್ಲಿ ಕೇವಲ 15 ರೂ. ಕ್ಯಾರೆಟ್‌ ಅನ್ನು ಹುರಿದು ಫ್ರೈ ಮಾಡಿ ಬರೋಬ್ಬರಿ 1,500 ರೂ.ಗೆ ಮಾರಾಟ ಮಾಡಲಾಗಿದೆ.

Hotel business Earn Rs 1500 from just Rs 15 Carrot Try it yourself sat
Author
First Published Dec 19, 2023, 8:39 PM IST

ನವದೆಹಲಿ (ಡಿ.19): ಸಾಮಾನ್ಯವಾಗಿ ನಾವು ಪ್ರತಿನಿತ್ಯ ಸೇವಿಸುವ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ರುಚಿಯಾಗಿ ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ನಾವು ಬಳಸುವ 15 ರೂ. ಮೌಲ್ಯದ ಕ್ಯಾರೆಟ್ ಅನ್ನು ಫ್ರೈ ಮಾಡಿ 1,500 ರೂ. ಬೆಲೆಗೆ ಗ್ರಾಹಕರಿಗೆ ನೀಡಲಾಗಿದೆ.

ಸಾಮಾನ್ಯವಾಗಿ ಮಧ್ಯಮ ವರ್ಗದವರು ಅಥವಾ ಕಷ್ಟಪಟ್ಟು ತಮ್ಮ ದುಡಿಮೆಯಿಂದಲೇ ಶ್ರೀಮಂತರಾದವರು ಐಷಾರಾಮಿ ಹೋಟೆಲ್‌ಗಳಿಗೆ ಊಟ ಮಾಡಲು ಹೋದಾಗ ಅಲ್ಲಿನ ಮೆನು ನೋಡಿ ಬೆಚ್ಚಿ ಬೀಳುತ್ತಾರೆ. ಕಾರಣ, ಹೋಟೆಲ್ ಮೆನುವಿನಲ್ಲಿರುವ ಆಹಾರ ಪದಾರ್ಥಗಳ ಬೆಲೆಗಳು ಗ್ರಾಹಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿರುತ್ತದೆ. ಆದರೆ, ಇದೀಗ ಐಷಾರಾಮಿ ಹೋಟೆಲ್ ಬಾಣಸಿಗರೊಬ್ಬರು ಅಂತಹ ದುಬಾರಿ ಖಾದ್ಯವನ್ನು ದುಬಾರಿ ಹೋಟೆಲ್ ಗಳಲ್ಲಿ ಹೇಗೆ ತಯಾರಿಸುತ್ತಾರೆ ಹಾಗೂ ಅದರ ಬೆಲೆ ಎಷ್ಟಿದೆ ಎಂಬುದನ್ನು ವಿಡಿಯೋ ಮಾಡಿ ತೋರಿಸಿದ್ದಾರೆ.

ಪಬ್ಲಿಕ್ ಪ್ಲೇಸ್‌ನಲ್ಲಿ ಮಲೈಕಾ ಅರೋರಾ ಸೊಂಟವನ್ನೇ ಹಿಡಿದುಕೊಂಡ ಅಭಿಮಾನಿ: ಆದ್ರೂ ಶಾಂತವಾಗಿದ್ರು ನಟಿ!

ಕ್ಯಾರೆಟ್‌ ಹುರಿದು ಮಾಡಿದ ಖಾದ್ಯ: ಕ್ಯಾರೆಟ್ ಎಲ್ಲ ದೇಶಗಳಲ್ಲಿಯೂ ಪರಿಚಿತವಿರುವ ಹಾಗೂ ಸರ್ವೇ ಸಾಮಾನ್ಯವಾಗಿ ಬೆಳೆಯುವ ತರಕಾರಿ ಆಗಿದೆ. ನಮ್ಮ ದೇಶದಲ್ಲಿ ಒಂದು ಕೆ.ಜಿ. ಕ್ಯಾರೆಟ್‌ಗೆ ಹೆಚ್ಚೆಂದರೆ 100 ರೂ. ಇರಬಹುದು. ಇನ್ನು ಒಂದೆರಡು ಕ್ಯಾರೆಟ್‌ಗಳನ್ನು ತೆಗೆದುಕೊಂಡರೆ 10 ರಿಂದ 15 ರೂ. ಆಗಬಹುದು. ಹೀಗೆ, ಕೇವಲ ಹದಿನೈದು ರೂ. ವೆಚ್ಚದಲ್ಲಿ ಖರೀದಿಸಿದ ಕ್ಯಾರೆಟ್‌ ಅನ್ನು ಹೋಟೆಲ್‌ನಲ್ಲಿ ಬಾಣಸಿಗನಿಂದ ರುಚಿ, ರುಚಿಯಾದ ಖಾದ್ಯವನ್ನಾಗಿ ತಯಾರಿಸಿ ಬರೋಬ್ಬರಿ 1,500 ರೂ.ಗೆ ಮಾರಾಟ ಮಾಡಿದ್ದಾರೆ.

ಇನ್ನು ಕೇವಲ 15 ರೂ.ಗೆ ಖರೀದಿಸಿದ ಕ್ಯಾರೆಟ್‌ನಿಂದ 1,500 ರೂಪಾಯಿ ಮೌಲ್ಯದ ಖಾದ್ಯವನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಹೋಟೆಲ್‌ನ ಬಾಣಸಿಗ ವಿಡಿಯೋದಲ್ಲಿ ಹೇಳಿದ್ದಾರೆ. ಮೊದಲು ಕ್ಯಾರೆಟ್ ಅನ್ನು ಹುರಿದು ನಂತರ ಅದಕ್ಕೆ ಕೆಲವು ಮಸಾಲೆಗಳನ್ನು ಸೇರಿಸುತ್ತಾರೆ. ಮಸಾಲೆಗಳೊಂದಿಗೆ ಹುರಿದ ಕೆಲವು ಪದಾರ್ಥಗಳನ್ನು ಸಹ ಇಟ್ಟುಕೊಂಡು ಅದನ್ನು ಬಿಳಿಯ ತಟ್ಟೆಯಲ್ಲಿಟ್ಟು ಅದರ ಮೇಲೆ ಕೆಲವು ರೀತಿಯ ಪೇಸ್ಟ್ ಹಚ್ಚುತ್ತಾನೆ. ಅದರ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಇತರ ವಸ್ತುಗಳನ್ನು ಸಿಂಪಡಿಸಿ 1,500 ರೂ.ಗಳ ಭಕ್ಷ್ಯಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತಾನೆ.

ಹಾಸಿಗೆ ಹಿಡಿದ 'ಕೆಚ್ಚೆದೆಯ ಕನ್ನಡತಿ ಅಕ್ಕ ಅನು' : ಈಗ್ಲಾದ್ರೂ ನಿಮ್ಮ ಶಾಲೆ ಕೆಲಸ ನೀವೇ ಮಾಡ್ಕೊಳ್ಳಿ!

ಐಷಾರಾಮಿ ಖಾದ್ಯದ ವಿಡಿಯೋ ವೈರಲ್: ಇನ್ನು ಈ ಹೋಟೆಲ್ ಇರುವುದು ಬ್ರಿಟನ್‌ನಲ್ಲಿ. ಆದರೆ, ಬಾಣಸಿಗ ಮಾತ್ರ ಇಂಡಿಯಾದವನು. ಈತನ ಹೆಸರು ಅಭಿಲಾಶ್ ಎಂಬುದಾಗಿದೆ. ಈತ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಚೆಫ್ ಅಭಿಲಾಷ್  (_chefabhilash_) ಎಂಬ ತನ್ನದೇ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ದುಬಾರಿ ಹೋಟೆಲ್‌ಗಳಲ್ಲಿ ಜನರಿಗೆ ಹೇಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಈವರೆಗೆ ವಿಡಿಯೋವನ್ನು 3 ಲಕ್ಷ ಜನರು ಲೈಕ್ ಮಾಡಿದ್ದಾರೆ. ಜೊತೆಗೆ, 1 ಕೋಟಿ ಜನರು ವೀಕ್ಷಿಸಿದ್ದಾರೆ. ಈ ವಿಷಯದ ಬಗ್ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದು, ಬಳಕೆದಾರರು 'ಹೋಟೆಲ್ ಮಾಲೀಕರಿಗೆ ಹಿಂದಿ ಗೊತ್ತಿಲ್ಲ, ಅದಕ್ಕಾಗಿಯೇ ನಿಮ್ಮ ಕೆಲಸ ಇನ್ನೂ ಹಾಗೇಯೇ ಇದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, ಹೋಟೆಲ್ ಮಾಲೀಕರು ಈ ವಿಡಿಯೋ ನೋಡಿದರೂ ಗ್ರಾಹಕರಿಂದಲ ಕಡಿಮೆ ಹಣವನ್ನೇನು ತೆಗೆದುಕೊಳ್ಳುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios