ಐದನೇ ತರಗತಿ ಪಾಸ್ ಆದವನ ಕಮಾಲ್… ಸಿದ್ಧವಾಯ್ತು ಇ ಬೈಸಿಕಲ್ !
ಓದಿಗೂ ಸಾಧನೆಗೂ ಸಂಬಂಧವಿಲ್ಲ. ಅತಿ ಹೆಚ್ಚು ಓದಿದವರು ಕೆಲಸ ಇಲ್ಲದೆ ಕುಳಿತಿರಬಹುದು. ಕಡಿಮೆ ಓದಿದ ವ್ಯಕ್ತಿ ಬುದ್ಧಿವಂತಿಕೆ ಉಪಯೋಗಿಸಿ ಕೈತುಂಬ ಸಂಪಾದನೆ, ಹೆಸರು ಮಾಡಬಹುದು. ಅದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆ.
ಪರಿಸರ ಸ್ನೇಹಿ ಸೈಕಲ್ ಈಗ ಅಪರೂಪವಾಗಿದೆ. ಮಕ್ಕಳು ಸೈಕಲ್ ಓಡಿಸೋದನ್ನು ನಾವು ನೋಡ್ಬಹುದೇ ವಿನಃ ದೊಡ್ಡವರ ಬಳಿ ಸೈಕಲ್ ಕಾಣಸಿಗ್ತಿಲ್ಲ. ಸೈಕಲ್ ತುಳಿಬೇಕು ಎನ್ನುವ ಕಾರಣಕ್ಕೆ ಬಹುತೇಕರು ಅದರ ಖರೀದಿಗೆ ಮನಸ್ಸು ಮಾಡ್ತಿಲ್ಲ. ಈಗ ಎಲೆಕ್ಟ್ರಿಕ್ ಸೈಕಲ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದು ದುಬಾರಿ, ಖರೀದಿ ಸಾಧ್ಯವಿಲ್ಲ ಎನ್ನುವವರೇ ಅನೇಕ ಮಂದಿ. ಸೈಕಲ್ ಪ್ರೇಮಿಗಳು ನೀವಾಗಿದ್ದು, ಎಲೆಕ್ಟ್ರಿಕ್ ಸೈಕಲ್ ದುಬಾರಿ ಎನ್ನುವವರಾಗಿದ್ದರೆ ಈ ವ್ಯಕ್ತಿ ನಿಮಗೆ ಸಹಾಯ ಮಾಡಬಲ್ಲ. ನೀವು ಸಾಮಾನ್ಯ ಸೈಕಲ್ ನೀಡಿದ್ರೆ ಸಾಕು. ಅವರು ಸಾಮಾನ್ಯ ಸೈಕಲ್ಲನ್ನೇ ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸುತ್ತಾರೆ.
ನಮ್ಮ ದೇಶದಲ್ಲಿ ಬುದ್ಧಿವಂತ (Intelligent) ರ ಸಂಖ್ಯೆ ಸಾಕಷ್ಟಿದೆ. ಆದ್ರೆ ಅವರನ್ನು ಸರಿಯಾಗಿ ಗುರುತಿಸುವ, ಆರ್ಥಿಕ ಸಹಾಯ ನೀಡುವವರ ಸಂಖ್ಯೆ ಬಹಳ ವಿರಳ. ತನ್ನ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಏನನ್ನಾದ್ರೂ ಸಾಧಿಸಬೇಕೆಂಬ ಗುರಿ ಹೊಂದಿದ್ದ ಈ ವ್ಯಕ್ತಿ ಈಗ ಸಾಧನೆ ಹಾದಿಯಲ್ಲಿ ಸಾಗ್ತಿದ್ದಾನೆ. ತಮ್ಮ ಕಲೆ ಮೂಲಕ ಸಾಮಾನ್ಯ ಸೈಕಲ್ (bicycle) ಅನ್ನು ಎಲೆಕ್ಟ್ರಿಕ್ (electric) ಸೈಕಲ್ ಆಗಿ ಪರಿವರ್ತಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಕೋಟಿ ಕೋಟಿ ಬಿಸಿನೆಸ್ ನಿರ್ವಹಿಸೋ ಮುಕೇಶ್ ಅಂಬಾನಿ ಕುಟುಂಬ ಸದಸ್ಯರ ವಿದ್ಯಾರ್ಹತೆ ಎಷ್ಟು?
ಇವರ ಹೆಸರು ಉಮೇಶ್ ಶರ್ಮಾ. ಬಿಹಾರದ ಸಮಸ್ತಿಪುರದ ರೋಸ್ರಾ ನಿವಾಸಿ. ಈಗಾಗಲೇ ಆರು ಸಾಮಾನ್ಯ ಸೈಕಲ್ ಗಳನ್ನು ಉಮೇಶ್ ಶರ್ಮಾ ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ ಫುಲ್ ಜಾರ್ಜ್ ಮಾಡಿದ್ರೆ 60ರಿಂದ 70 ಕಿಲೋಮೀಟರ್ ದೂರ ಕ್ರಮಿಸುತ್ತದೆ. ಉಮೇಶ್ ಮೂರು ವಿಧಗಳಲ್ಲಿ ಸೈಕಲ್ ತಯಾರಿಸುತ್ತಿದ್ದಾರೆ.
25 ವರ್ಷಗಳ ಹಿಂದೆ ಬ್ಯಾಟರಿ ಚಾಲಿತ ಸೈಕಲ್ ಅನ್ನು ಉಮೇಶ್ ತಯಾರಿಸಲು ಪ್ರಯತ್ನಿಸಿದ್ದರು. ಆದ್ರೆ ಅದ್ರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಆ ನಂತ್ರ ಉಮೇಶ್ ಗ್ರಿಲ್ ವೆಲ್ಡಿಂಗ್ ಕೆಲಸ ಶುರು ಮಾಡಿದ್ದರು. ಹಿಂದಿನ ವರ್ಷ ಪೆಟ್ರೋಲ್ – ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಉಮೇಶ್ ಮತ್ತೆ ಎಲೆಕ್ಟ್ರಿಕ್ ಸೈಕಲ್ ತಯಾರಿಸುವ ಪ್ರಯತ್ನ ನಡೆಸಿದ್ದರು. ಈ ಬಾರಿ ಉಮೇಶ್ ಯಶಸ್ವಿಯಾದರು. ಅವರ ಕೆಲಸ ತಿಳಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಹಿಂದಿನ ವರ್ಷ ಆರು ಸೈಕಲ್ ಆರ್ಡರ್ ಬಂದಿತ್ತು. ಈ ವರ್ಷ ಉಮೇಶ್ ಶರ್ಮಾ ಎಲೆಕ್ಟ್ರಿಕ್ ಸೈಕಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ್ಮೇಲೆ ಅನೇಕ ಆರ್ಡರ್ ಗಳು ಬರ್ತಿವೆ ಎಂದು ಉಮೇಶ್ ಹೇಳಿದ್ದಾರೆ. ಉಮೇಶ್ ಪರಿವರ್ತಿಸಿರುವ ಎಲೆಕ್ಟ್ರಿಕ್ ಸೈಕಲ್ ಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಮೇಶ್ ಬರೀ ಐದನೇ ತರಗತಿಯವರೆಗೆ ಮಾತ್ರ ಕಲಿತಿದ್ದಾರೆ ಎಂಬುದು ಇಲ್ಲಿ ವಿಶೇಷ. ಅವರು ಸೈಕಲ್ ಪರಿವರ್ತನೆಗೆ 15,000 ರೂಪಾಯಿಯಿಂದ 28,000 ರೂಪಾಯಿ ಚಾರ್ಜ್ ಮಾಡ್ತಾರೆ. ಗ್ರಾಹಕರಿಗೆ ಅಗತ್ಯವಿರುವಂತೆ ಅದನ್ನು ಪರಿವರ್ತಿಸಲಾಗುತ್ತದೆ. ಒಂದ್ವೇಳೆ ಗ್ರಾಹಕರು ಉಮೇಶ್ ಗೆ 28,000 ರೂಪಾಯಿ ನೀಡಿದ್ರೆ ಉಮೇಶ್ ಎರಡು ವರ್ಷ ವಾರಂಟಿ ಇರುವ ಬ್ಯಾಟರಿಯನ್ನು ನೀಡ್ತಾರೆ.
ಹನ್ನೊಂದು ತಿಂಗಳೊಳಗೆ ಬಾಡಿಗೆ ಮನೆ ಖಾಲಿ ಮಾಡ್ಬಹುದಾ?ಹನ್ನೊಂದು ತಿಂಗಳೊಳಗೆ ಬಾಡಿಗೆ ಮನೆ ಖಾಲಿ ಮಾಡ್ಬಹುದಾ?
ಉಮೇಶ್ ಪ್ರಕಾರ ಈ ಎಲೆಕ್ಟ್ರಿಕ್ ಸೈಕಲನ್ನು 30 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದು. ಸೈಕಲ್ ನಲ್ಲಿ 250 ವ್ಯಾಟ್ ಮೋಟಾರ್ (Watt Motor), 30 ಆಂಪಿಯರ್ ಬ್ಯಾಟರಿ, ಚಾರ್ಜರ್ (Charger), ಲೈಟ್, ನಿಯಂತ್ರಕ (Contoller), ಹಾರ್ನ್ ಇದೆ. ಉಮೇಶ್ ಸೈಕಲ್ ತಯಾರಿಸಲು ಏಳು ದಿನಗಳ ಸಮಯ ತೆಗೆದುಕೊಳ್ತಾರೆ. ಅವರ ತಂದೆ ಕಬ್ಬಿಣದ ಪಿಠೋಪಕರಣ ಕೆಲಸ ಮಾಡ್ತಿದ್ದ ಕಾರಣ ಅವರಿಗೆ ಕಚ್ಚಾ ವಸ್ತುಗಳನ್ನು ಪಡೆಯೋದು ಸಮಸ್ಯೆ ಆಗ್ತಿಲ್ಲ. ಆದ್ರೆ ಸರ್ಕಾರದ ಯೋಜನೆಯ ಲಾಭ ಸಿಗುತ್ತಿಲ್ಲ ಎಂದು ಉಮೇಶ್ ನೋವು ತೋಡಿಕೊಂಡಿದ್ದಾರೆ.