ನವದೆಹಲಿ(ಡಿ.11): ಊರ್ಜಿತ್ ಪಟೇಲ್ ಆರ್ ಬಿಐ ಗರ್ವನರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.  

ಊರ್ಜಿತ್ ಪಟೇಲ್ ರಾಜೀನಾಮೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂದಿರುವ ಸ್ವಾಮಿ, ಉರ್ಜಿತ್ ಪಟೇಲ್ ರಾಜೀನಾಮೆ ದೇಶದ ಆರ್ಥಿಕತೆ, ಆರ್ ಬಿಐ, ಸರ್ಕಾರಗಳಿಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಮುಂದಿನ ಆರ್‌ಬಿಐ ಗರ್ವನರ್ ಬರುವವರೆಗೆ ಊರ್ಜಿತ್ ಪಟೇಲ್ ಗರ್ವನರ್ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿರುವ ಸ್ವಾಮಿ,  ಪ್ರಧಾನಿ ನರೇಂದ್ರ ಮೋದಿ ದೇಶದ ಹಿತಾಸಕ್ತಿಯಿಂದ ಉರ್ಜಿತ್ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಬೇಕು ಎಂದು ಸ್ವಾಮಿ ಹೇಳಿದ್ದಾರೆ.

ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!

ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!

ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!