ನವದೆಹಲಿ(ಡಿ.10): ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿರುವ ಊರ್ಜಿತ್ ಪಟೇಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಕೇಂದ್ರ ಸರ್ಕಾರ ದರಲ್ಲೂ ವಿಶೇಷವಾಗಿ ಕೇಂದ್ರ ಹಣಕಾಸು ಇಲಾಖೆ ಜೊತೆಗಿನ ಆರ್‌ಬಿಐ ತಿಕ್ಕಾಟ, ಆರ್ ಬಿಐ ಸ್ವಾಯತತ್ತೆ ಮೇಲೆ ಕೇಂದ್ರದ ಪ್ರಹಾರ ಇಂತಹ ಮಾತುಗಳೇ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಊರ್ಜಿತ್ ಪಟೇಲ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಊರ್ಜಿತ್ ಪಟೇಲ್ ಓರ್ವ ಪ್ರಾಮಾಣಿಕ ಮತ್ತು ಅದ್ಭುತ ಅರ್ಥಶಾಸ್ತ್ರಜ್ಞ ಎಂದು ಬಣ್ಣಿಸಿದ್ದಾರೆ. ಊರ್ಜಿತ್ ಪಟೇಲ್ ಅವಧಿಯಲ್ಲೇ ಆರ್‌ಬಿಐ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶಿಸ್ತು ಕಾಣಿಸಿಕೊಂಡಿದ್ದು ಎಂದು ಮೋದಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.