ನವದೆಹಲಿ(ಆ.06): ಕಡಿಮೆ ಬೆಲೆಯ ತಂಪು ಪಾನೀಯ ಮತ್ತು ಹಾಲಿನ ಉತ್ಪನ್ನಗಳತ್ತ ಗ್ರಾಹಕರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಕಾರಣದಿಂದ ಭಾರತದ ಜ್ಯೂಸ್ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದೆ. 

ಈ ಕುರಿತು ನೀಲ್ಸನ್ ರಿಸರ್ಚ್ ಡಾಟಾ ಸಂಶೋಧನೆ ನಡೆಸಿದ್ದು, ಶೇ.100ರಷ್ಟು ಹಣ್ಣಿನ ರಸದ ಪಾನೀಯ ಮಾರಾಟದಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.3.1ರಷ್ಟು ಕುಸಿತವಾಗಿದೆ ಏಂದು ತಿಳಿಸಿದೆ. 

2019-20ರ ಆರ್ಥಿಕ ವರ್ಷದಲ್ಲಿ ಜ್ಯೂಸ್ ಮಾರುಕಟ್ಟೆ ಶೇ. 4.9ರಷ್ಟು ಕುಸಿತ ದಾಖಲಿಸಿದ್ದು,  ಕಡಿಮೆ ಬೆಲೆಯ ತಂಪು ಪಾನೀಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ಸಂಶೋಧನೆ ಸ್ಪಷ್ಟಪಡಿಸಿದೆ.

ಇದೇ ವೇಳೆ ಹಾಲಿನ ಉತ್ಪನ್ನಗಳ ಮಾರಾಟದಲ್ಲಿನ ಏರಿಕೆ ಕೂಡ ಜ್ಯೂಸ್ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದ್ದು, ಬಾಟಲ್ ಮತ್ತು ಪ್ಯಾಕ್ಡ್ ಜ್ಯೂಸ್ ಮಾರಾಟದಲ್ಲಿನ ಕುಸಿತ ಆತಂಕಕ್ಕೆ ಕಾರಣವಾಗಿದೆ.