Asianet Suvarna News Asianet Suvarna News

Trending News: ವಯಸ್ಸು 22, ಆದಾಯ ಮಾತ್ರ ಕೋಟಿ ಕೋಟಿ, ಸೆಲ್ಫೀ ಮಾರಿ ಗಳಿಕೆ!

* ಏಕಾಏಕಿ ಶ್ರೀಮಂತನಾದ ವಿದ್ಯಾರ್ಥಿ

* ಸೆಲ್ಫೀಯಿಂದ ಬದಲಾಯ್ತು ಬಾಲಕನ ಅದೃಷ್ಟ

* ಓದೋ ವಯಸ್ಸಲ್ಲಿ ಕೋಟಿ ಕೋಟಿ ಸಂಪಾದನೆ

Student accidentally becomes a millionaire after selfie joke pod
Author
Bangalore, First Published Jan 22, 2022, 8:26 AM IST

ಇಂಡೋನೇಷ್ಯಾ(ಜ.22): ವಯಸ್ಸು 22 ವರ್ಷ, ಈತನದ್ದು ಕಾಲೇಜಿಗೆ ಹೋಗಬೇಕಾದ ವಯಸ್ಸು, ಹೀಗಿದ್ದರೂ ಈ ಬಾಲಕ ಕೆಲಸ ಮಾಡುತ್ತಾರೆ. ಆದರೆ ಈತ ಮಾಡೋ ಕೆಲಸ ಎಲ್ಲರೂ ಮಾಡುವಂತಹುದ್ದಲ್ಲ, ಜೊತೆಗೆ ಎಲ್ಲರಂತೆಯೇ ಈತ ಗಳಿಸುತ್ತಿರುವ ಹಣವೂ ಸಾಮಾನ್ಯ ಮೊತ್ತವಲ್ಲಇದರಲ್ಲೇನು ವಿಶೇಷ ಅಂತ ಯೋಚಿಸುತ್ತಿರಬೇಕು ಆದರೆ ಆ ಹುಡುಗನ ಸಂಪಾದನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ... ಹೌದು ಈ ಹುಡುಗ ಇಲ್ಲಿಯವರೆಗೆ 7 ಕೋಟಿ ರೂ.ಗೂ ಹೆಚ್ಚು ಸಂಪಾದಿಸಿದ್ದಾನೆ. ಅಷ್ಟಕ್ಕೂ ಈ ಬಾಲಕ ಮಾಡೋ ಕೆಲಸವೇನು ಎಂಬ ಪ್ರಶ್ನೆ ಮೂಡೋದು ಸಹಜ. ನಿ ಬಾಲಕ ಜವಾಗಿ ಈ ಹುಡುಗ ಸೆಲ್ಫಿ ಮಾರುತ್ತಾನೆ. ಸೆಲ್ಫಿ ಮಾರುವ ಮೂಲಕವೇ ಅಷ್ಟೊಂದು ಗಳಿಸಿದ್ದಾನೆ. 

'ಫೋಟೊದಿಂದ ಅದೃಷ್ಟ ಬದಲಾಗುತ್ತದೆ ಎಂದು ಅಂದುಕೊಂಡಿರಲಿಲ್ಲ'

ವರದಿಯ ಪ್ರಕಾರ, ಇಂಡೋನೇಷ್ಯಾದ ನಿವಾಸಿ ಸುಲ್ತಾನ್ ಗುಸ್ತಾಫ್ ಅಲ್ ಗೊಜಾಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ.18 ವರ್ಷ ವಯಸ್ಸಿನವರಾಗಿದ್ದಾಗ, ಆತ ತನ್ನ 1000 ಸೆಲ್ಫಿಗಳನ್ನು ಕ್ಲಿಕ್ ಮಾಡಿದ್ದ. ಇದರ ನಂತರ, ಈ ಸೆಲ್ಫಿಗಳ ವೀಡಿಯೊ ಯೋಜನೆಯನ್ನು ತಯಾರಿಸಲಾಯಿತು, ಅದಕ್ಕೆ 'ಗೋಜಾಲಿ ಎವ್ರಿಡೇ' ಎಂದು ಹೆಸರಿಸಲಾಯಿತು. ಇದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಅದನ್ನು ತಯಾರಿಸುವಾಗ, ಅದು ತನ್ನ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಆತ ಭಾವಿಸಲಿಲ್ಲ. ಕೆಲವು ದಿನಗಳ ನಂತರ, ಈ ಯೋಜನೆ ಮತ್ತು ಚಿತ್ರಗಳನ್ನು NFT ಖರೀದಿಸಿತು.

ಮನೆಯವರಿಗೆ ಆದಾಯದ ಮಾಹಿತಿ ಇಲ್ಲ

NFT ಹರಾಜು ಸೈಟ್ OpenSea ನಲ್ಲಿ ಕ್ರಿಪ್ಟೋಕರೆನ್ಸಿಗಾಗಿ ತನ್ನ ಸೆಲ್ಫಿಗಳನ್ನು ಮಾರಾಟ ಮಾಡಿದೆ ಎಂದು ಗೋಜಲಿ ವಿವರಿಸುತ್ತಾರೆ. ಅದನ್ನು ಅಪ್ಲೋಡ್ ಮಾಡುವಾಗ, ಅವರು ಅದರ ಬೆಲೆಯನ್ನು 3 ಡಾಲರ್ ಎಂದು ಇಟ್ಟುಕೊಂಡಿದ್ದ. ಯಾರಾದರೂ ಅದನ್ನು ಖರೀದಿಸುತ್ತಾರೆ ಎಂದು ಆತ ಊಹಿಸಿಯೂ ಇರಲಿಲ್ಲ. ಕೆಲವು ದಿನಗಳ ನಂತರ, NFT ಸಂಗ್ರಾಹಕರು ಈ ಸೆಲ್ಫಿಯನ್ನು ಖರೀದಿಸಿದರು. ಸೆಲೆಬ್ರಿಟಿ ಬಾಣಸಿಗರೊಬ್ಬರು ಈ ಸೆಲ್ಫಿಗಳನ್ನು ಖರೀದಿಸುವ ಮೂಲಕ ಭಾರೀ ಪ್ರಚಾರ ಮಾಡಿದ್ದರು. ಇದಾದ ಬಳಿಕ ಈತನ ಅದೃಷ್ಟ ತಿರುಗಿತು. ತದನಂತರ 400ಕ್ಕೂ ಹೆಚ್ಚು ಮಂದಿ ನನ್ನ ಸೆಲ್ಫಿ ಖರೀದಿಸಿದ್ದಾರೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಗೋಜಲಿ 7 ಕೋಟಿ ರೂ.ಗೂ ಹೆಚ್ಚು ಗಳಿಸಿದ್ದಾನೆ. ಆದರೆ ಮನೆಯಲ್ಲಿ ಸಂಪಾದನೆಯ ಬಗ್ಗೆ ಇನ್ನೂ ಹೇಳಿಲ್ಲ ಎನ್ನುತ್ತಾರೆ.

Follow Us:
Download App:
  • android
  • ios