Asianet Suvarna News Asianet Suvarna News

ಇನ್ನು ರಾತ್ರಿ ಹೊತ್ತಿನಲ್ಲೂ ಷೇರು ವಹಿವಾಟು?

ಬಾಂಬೆ ಷೇರುಪೇಟೆ ಮತ್ತು ಎನ್‌ಎಸ್‌ಇ ಎರಡೂ ಷೇರುಪೇಟೆಗಳು ಬೆಳಗ್ಗೆ 9.15ರಿಂದ ಮಧ್ಯಾಹ್ನ 3.30ರವರೆಗೆ ಕಾರ್ಯಾಚರಣೆ ನಡೆಸುವುದು ಸಾಮಾನ್ಯ. ಆದರೆ ಎನ್‌ಎಸ್‌ಇ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯೂ ಷೇರು ವಹಿವಾಟು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ.

Stock trading even at night NSE considering option trading from 6 to 9 pm akb
Author
First Published Sep 28, 2023, 9:08 AM IST

ಮುಂಬೈ: ಬಾಂಬೆ ಷೇರುಪೇಟೆ ಮತ್ತು ಎನ್‌ಎಸ್‌ಇ ಎರಡೂ ಷೇರುಪೇಟೆಗಳು ಬೆಳಗ್ಗೆ 9.15ರಿಂದ ಮಧ್ಯಾಹ್ನ 3.30ರವರೆಗೆ ಕಾರ್ಯಾಚರಣೆ ನಡೆಸುವುದು ಸಾಮಾನ್ಯ. ಆದರೆ ಎನ್‌ಎಸ್‌ಇ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯೂ ಷೇರು ವಹಿವಾಟು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ.

ಆದರೆ ಇದು ಕೇವಲ ಆಪ್ಷನ್‌ ಟ್ರೇಡಿಂಗ್‌ಗೆ (option trading) ಮಾತ್ರ ಅನ್ವಯ. ಷೇರು ಬೆಲೆಗಳು (Stock prices) ಹಲವು ಜಾಗತಿಕ ಬದಲಾವಣೆಗೆ ಒಳಪಟ್ಟಿರುತ್ತದೆ. ಒಮ್ಮೆ ಮಧ್ಯಾಹ್ನದ ಷೇರು ವಹಿವಾಟು ಮುಗಿಯಿತೆಂದರೆ ನಂತರ ಮಾರನೇ ದಿನ ಬೆಳಗ್ಗೆಯವರೆಗೂ ಯಾವುದೇ ಜಾಗತಿಕ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸುವುದು ಹೂಡಿಕೆದಾರರಿಗೆ ಸಾಧ್ಯವಿಲ್ಲ.

ಅಕ್ಟೋಬರ್‌ ಅಂತ್ಯದೊಳಗೆ ಬೈಜೂಸ್‌ನಿಂದ 3500 ಉದ್ಯೋಗಿಗಳ ಕಡಿತ!

ಜೊತೆಗೆ ದೊಡ್ಡ ದೊಡ್ಡ ಹೂಡಿಕೆದಾರರು, ಬಾಂಬೆ (Bombay), ಎನ್‌ಎಸ್‌ಇನಲ್ಲಿ(NSE) ಷೇರು ವಹಿವಾಟು ಮುಗಿದ ಬಳಿಕ ದಿನದ 24 ಗಂಟೆಯೂ ವಹಿವಾಟಿಗೆ ಅವಕಾಶ ನೀಡುವ ಗಿಫ್ಟ್‌ ಸಿಟಿ ಮೊದಲಾದ ಕಡೆಗೆ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಅವರನ್ನು ಷೇರುಪೇಟೆಯಲ್ಲೇ ಉಳಿಸಿಕೊಳ್ಳಲು ವಹಿವಾಟು ಅವಧಿ ವಿಸ್ತರಣೆ ಅನಿವಾರ್ಯ ಎಂಬ ನಿಲುವು ಎನ್‌ಎಸ್‌ಇನದ್ದು ಎನ್ನಲಾಗಿದೆ.

ಮಣಿಪುರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿಸ್ತರಣೆ: ಮ್ಯಾನ್ಮಾರ್‌- ಭಾರತ ಗಡಿಯಲ್ಲಿ ಬೇಲಿ ಹಾಕಲು ನಿರ್ಧಾರ

ಹೀಗಾಗಿ ಸಂಜೆ 6ರಿಂದ 9 ಗಂಟೆಯವರೆಗೆ ಅಥವಾ ರಾತ್ರಿ 11.30ರವರೆಗೂ ಆಪ್ಷನ್‌ ಟ್ರೇಡಿಂಗ್‌ಗೆ ಅವಕಾಶ ನೀಡುವ ಬಗ್ಗೆ ಎನ್‌ಎಸ್‌ಇ ಉತ್ಸುಕವಾಗಿದೆ. ಈ ಕುರಿತು ಅದು ಈಗಾಗಲೇ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಸೆಬಿ ಒಪ್ಪಿದ ಕೂಡಲೇ ಇಂಥದ್ದೊಂದು ಯೋಜನೆ ಜಾರಿಗೆ ಎನ್‌ಎಸ್‌ಇ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios