ಮಣಿಪುರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿಸ್ತರಣೆ: ಮ್ಯಾನ್ಮಾರ್- ಭಾರತ ಗಡಿಯಲ್ಲಿ ಬೇಲಿ ಹಾಕಲು ನಿರ್ಧಾರ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಯೋಜಿಸಲಾಗಿರುವ ಸೇನೆಗೆ ಪರಮಾಧಿಕಾರ ನೀಡುವ ಆಫ್ಗ್ಪಾ(ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ.
ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಯೋಜಿಸಲಾಗಿರುವ ಸೇನೆಗೆ ಪರಮಾಧಿಕಾರ ನೀಡುವ ಆಫ್ಗ್ಪಾ(ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಈ ಕಾಯ್ದೆ ಅಡಿಯಲ್ಲಿ 19 ಪೊಲೀಸ್ ಠಾಣೆಯನ್ನು ಹೊರತುಪಡಿಸಿ ರಾಜ್ಯದ ಮಿಕ್ಕೆಲ್ಲ ಪೊಲೀಸ್ ಠಾಣೆಗಳು ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ಅಡಿಗೆ ಒಳಪಡುತ್ತದೆ. ಮುಂಬರುವ ಅ.1ರಿಂದ ಜಾರಿಯಾಗುವಂತೆ 6 ತಿಂಗಳು ಕಾಯ್ದೆ ವಿಸ್ತರಣೆ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮಂಗಳವಾರ ಮೈತೇಯಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಿಬ್ಬರ ಮೃತದೇಹ ಫೋಟೋ ವೈರಲ್ ಆದ ಬಳಿಕ ರಾಜ್ಯ ಮತ್ತೆ ಉದ್ವಿಗ್ನಗೊಂಡಿದೆ.
ಮಣಿಪುರದಲ್ಲಿ ಮುಂದುವರೆದ ಪ್ರತಿಭಟನೆ
ಇಂಫಾಲ್: ಕಳೆದ ಜುಲೈನಲ್ಲಿ ಮಣಿಪುರದ ಹಿಂಸಾಚಾರದ ವೇಳೆ ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ (Dead Body Photo Viral) ಫೋಟೊ ವೈರಲ್ ಆಗುತ್ತಿದ್ದಂತೆ, ಅವರ ಹತ್ಯೆ ಖಂಡಿಸಿ ಸತತ ಎರಡನೇ ದಿನವಾದ ಬುಧವಾರವೂ ಸಾವಿರಾರು ವಿದ್ಯಾರ್ಥಿಗಳು ಇಂಫಾಲ್‌ನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಪ್ಪು ಬ್ಯಾಡ್ಜ್ ಧರಿಸಿದ್ದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಘೋಷಣೆ ಕೂಗಿದರು.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬೀದಿಗೆ
ಈ ನಡುವೆ ಮಂಗಳವಾರ ಪ್ರತಿಭಟನೆ ವೇಳೆ 45 ವಿದ್ಯಾರ್ಥಿಗಳು ಗಾಯಗೊಂಡ ಹಿನ್ನೆಲೆಯಲ್ಲಿ 5 ತಿಂಗಳ ಬಳಿಕ ಇತ್ತೀಚೆಗೆ ಪ್ರಾರಂಭವಾಗಿದ್ದ ಮೊಬೈಲ್ ಇಂಟರ್‌ನೆಟ್ ಸೇವೆಯನ್ನೂ ಅ.1ರವರೆಗೆ ಸ್ಥಗಿತಗೊಳಿಸಲಾಗಿದೆ. ಇನ್ನು ರಾಜ್ಯದಲ್ಲಿ ಕಳೆದ 5 ತಿಂಗಳಲ್ಲಿ ನಡೆದ ಎಲ್ಲಾ ಹತ್ಯೆಗಳು ಮತ್ತು ಅತ್ಯಾಚಾರಗಳ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಬುಡಕಟ್ಟು ಸಂಘ (ITLF)ನ ಮಹಿಳಾ ವಿಭಾಗವು ಚುರಚಂದ್‌ಪುರದಲ್ಲಿ ಪ್ರತಿಭಟನೆ ನಡೆಸಿದೆ.
ಹೀಗಾಗಿ ಕಳೆದ ಕೆಲ ವಾರಗಳಿಂದ ಶಾಂತವಾಗಿದ್ದ ಮಣಿಪುರ ಮತ್ತೆ ಉದ್ವಿಗ್ನ ಸ್ಥಿತಿ ತಲುಪಿದ್ದು, ಮತ್ತೆ ಇದೀಗ ಭದ್ರತಾ ಪಡೆಗಳ ನಿಯೋಜನೆ ಬಿರುಸುಗೊಂಡಿದೆ.
ಮಣಿಪುರದ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಭಾರತದ ತೀವ್ರ ಆಕ್ಷೇಪ
ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಹಿಂಸಾಚಾರದ ವೇಳೆ ಕಾಣೆಯಾಗಿದ್ದರು, ಇವರಿಬ್ಬರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಇದೀಗ 5 ತಿಂಗಳಿಂದ ನಿಷೇಧಕ್ಕೊಳಪಟ್ಟಿದ್ದ ಮೊಬೈಲ್ ಇಂಟರ್ನೆಟ್ ಮತ್ತೆ ಸ್ಥಾಪಿತಗೊಂಡ ಬೆನ್ನಲ್ಲೇ ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದ್ದು, ಪ್ರತಿಭಟನೆ ಆರಂಭವಾಗಿದೆ. ನೂರಾರು ವಿದ್ಯಾರ್ಥಿಗಳು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬೀರೇನ್ ಸಿಂಗ್ (Beeren Singh) ಅವರ ಮನೆಯತ್ತ ಮೆರವಣಿಗೆ ಹೊರಟಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಬಳಕೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ಸಿಬಿಐ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬೀರೇನ್ ಸಿಂಗ್ ಹೇಳಿದ್ದಾರೆ. ಮಣಿಪುರ ಹಿಂಸಾಚಾರ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಲುವಾಂಗ್ಬಿ (17) ಹಾಗೂ ಹೇಮಂಜಿತ್ ಸಿಂಗ್ (20) ಕಾಣೆಯಾಗಿದ್ದರು. ಇವರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು.
Manipur violence: ಮಣಿಪುರದ ಸ್ಥಿತಿಗೆ ವೋಟ್ ಬ್ಯಾಂಕ್ ರಾಜಕಾರಣ ಕಾರಣ: ಸೂಲಿಬೆಲೆ
ಮ್ಯಾನ್ಮಾರ್- ಭಾರತ ಗಡಿಯಲ್ಲಿ ಬೇಲಿ ಹಾಕಲು ನಿರ್ಧಾರ
ಇಂಫಾಲ್: ಕಳೆದ 5 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರದಲ್ಲಿ, ಮೇ 3ರಂದು ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಇದೇ ಶನಿವಾರ ಸೆಪ್ಟೆಂಬರ್ 23 ರಂದು ಮರುಸ್ಥಾಪಿಸಲಾಗಿತ್ತು. ಆದರೆ ಇಂಟರ್‌ನೆಟ್ ಮರು ಆರಂಭವಾಗುತ್ತಿದ್ದಂತೆ ಮತ್ತೆ ಗಲಭೆ ಶುರುವಾಗಿದೆ. ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ತಡೆಯಲು ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತದೆ ಹಾಗೂ ಭಾರತ ಮತ್ತು ಮ್ಯಾನ್ಮಾರ್‌ಗಳ ಗಡಿ ಪ್ರದೇಶದಲ್ಲಿ ಸಂಪೂರ್ಣ ಬೇಲಿ ಹಾಕುವ ಅಗತ್ಯವಿದೆ. ಹೀಗಾಗಿ ಮಣಿಪುರದ 60 ಕಿ.ಮೀ ಅಂತಾರಾಷ್ಟ್ರೀಯ ಗಡಿಗೆ ಬೇಲಿ ಹಾಕಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಇದಲ್ಲದೇ ಭಾರತ ಮತ್ತು ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಉಭಯ ಪ್ರದೇಶಗಳ ಜನರು ಯಾವುದೇ ದಾಖಲಾತಿ ಇಲ್ಲದೇ ಪರಸ್ಪರರ ಭೂಪ್ರದೇಶದ ಒಳಗೆ 16 ಕಿ.ಮೀ ವರೆಗೆ ಚಲಿಸುವ ಉಪಕ್ರಮವನ್ನು ರದ್ದು ಮಾಡುವಂತೆ ಕೇಂದ್ರಕ್ಕೆ ಕೋರಲಾಗಿದೆ ಎಂದಿದ್ದಾರೆ.
ಅಲ್ಲದೇ ಭದ್ರತಾ ಪಡೆಗಳ ನಿಯೋಜನೆಯಿಂದ ಸಂಘರ್ಷಗಳು ಬಹುತೇಕ ಕಡಿಮೆಯಾಗಿದ್ದು 2 ತಿಂಗಳಿನಿಂದ ರಾಜ್ಯದ ಪರಿಸ್ಥಿತಿ ಸುಧಾರಿಸಿದೆ ಎಂದು ಸಿಎಂ ತಿಳಿಸಿದ್ದರು. ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಕುಕಿ ಸಮುದಾಯದ ಜನರು ಮೇ3 ರಿಂದ ಭಾರೀ ಹಿಂಸೆ ಪೀಡಿತ ಪ್ರತಿಭಟನೆಯಲ್ಲಿ ತೊಡಗಿದ ಬಳಿಕ ಎರಡೂ ಸಮುದಾಯಗಳ ನಡುವೆ ತೀವ್ರ ಸಂಘರ್ಷ ನಡೆದು ಸುಮಾರು 170ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.