ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಮುಂದಿನ ತಿಂಗಳು ನಿರಾಸೆ, 11 ದಿನ ಟ್ರೇಡಿಂಗ್ ಇಲ್ಲ, ಈ ತಿಂಗಳಲ್ಲಿ ಲಾಭ ಮಾಡಿದವರು, ಕಳೆದುಕೊಂಡವರು ಮುಂದಿನ ತಿಂಗಳು ಲಾಭ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರೆ, 11 ದಿನ ಯಾವುದೇ ಟ್ರೇಡಿಂಗ್ ಇರುವುದಿಲ್ಲ. 

ಮುಂಬೈ (ಸೆ.28) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಷೇರು ಮಾರುಕಟ್ಟೆ ಹೂಡಿಕೆ, ಟ್ರೇಡಿಂಗ್ ಕಷ್ಟದ ಕೆಲಸವಲ್ಲ. ಆನ್‌ಲೈನ್ ಮೂಲಕ ಖಾತೆ ತೆರೆದು ಟ್ರೇಡಿಂಗ್ ಮಾಡಿಕೊಳ್ಳಬಹುಹು. ಹೀಗಾಗಿ ಹೆಚ್ಚಿನ ಮಂದಿ ಇದೀಗ ಟ್ರೇಡಿಂಗ್ ಕುರಿತು ಆಸಕ್ತಿ ಹೊಂದಿದ್ದಾರೆ. ಈ ತಿಂಗಳು ಮಾರುಕಟ್ಟೆ ಏರಿಳಿತ ನೋಡಿಕೊಂಡು ಹಲವರು ಆದಾಯಗಳಿಸಿದ್ದಾರೆ.ಮಂದಿನ ತಿಂಗಳು ಇದೇ ರೀತಿ ಆದಾಯ ಮಾಡಲು ಅಥವಾ ನಷ್ಟ ಸರಿದೂಗಿಸಲು ಕೆಲ ಅಡೆತಡೆ ಎದುರಾಗಲಿದೆ. ಕಾರಣ ಅಕ್ಟೋಬರ್ ತಿಂಗಳಲ್ಲಿ 11 ದಿನ ಯಾವುದೇ ಟ್ರೇಡಿಂಗ್ ಇರುವುದಿಲ್ಲ.

ಅಕ್ಟೋಬರ್ ತಿಂಗಳಲ್ಲಿ 11 ದಿನ ಷೇರುಮಾರುಕಟ್ಟೆ ಬಂದ್

ಅಕ್ಟೋಬರ್ ತಿಂಗಳಲ್ಲಿ 11 ದಿನ ಷೇರುಮಾರುಕಟ್ಟ ಬಂದ್ ಆಗಲಿದೆ. ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆ ಆಗಮಿಸಲಿದೆ. ಈಗಾಗಲೇ ನವರಾತ್ರಿ ಹಬ್ಬ ಆರಂಭಗೊಂಡಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲೇ ವಿಜಯ ದಶಮಿ ಸೇರಿದಂತೆ ಹಲವು ಹಬ್ಬಗಳು ಆಗಮಿಸುತ್ತಿದೆ. ದೀಪಾವಳಿ ಹಬ್ಬವೂ ಅಕ್ಟೋಬರ್ ತಿಂಗಳಲ್ಲಿ ಆಗಮಿಸುತ್ತಿದೆ. ಹೀಗಾಗಿ ಹಲವು ದಿನಗಳು ರಜೆ ಇರಲಿದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟು 11 ದಿನ ರಜೆ ಇರಲಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್ಇ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಲಿಡೇ ಲಿಸ್ಟ್ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 11 ದಿನ ರಜಾ ದಿನ ಇರಲಿದೆ. ರಜಾ ದಿನದಲ್ಲಿ ಯಾವುದೇ ಟ್ರೇಡಿಂಗ್ ಇರುವುದಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳ 31 ದಿನಗಳ ಪೈಕಿ 11 ದಿನ ರಜೆ ಇರಲಿದೆ. ಇನ್ನುಳಿದ 20 ದಿನ ಮಾತ್ರ ಟ್ರೇಡಿಂಗ್ ನಡೆಯಲಿದೆ.

ಅಕ್ಟೋಬರ್ ತಿಂಗಳಲ್ಲಿ ಟ್ರೇಡಿಂಗ್ ರಜಾ ದಿನ

ಅಕ್ಟೋಬರ್ 2: ದಸರಾ, ಮೋಹನ್ ದಾಸ್ ಕರಮಚಂದ್ರ ಗಾಂಧಿ ಜಯಂತಿ (ಗುರುವಾರ)

ಅಕ್ಟೋಬರ್ 21: ದೀಪಾವಳಿ, ಲಕ್ಷ್ಮಿ ಪೂಜೆ (ಮಂಗಳವಾರ)

ಅಕ್ಟೋಬರ್ 22: ದೀಪಾವಳಿ ಬಲಿಪಾಡ್ಯಮ (ಬುಧವಾರ)

ಅಕ್ಟೋಬರ್ ತಿಂಗಳಲ್ಲಿ ಸಮಾನ್ಯ ರಜಾ ದಿನ ಹಾಗೂ ಟ್ರೇಡಿಂಗ್ ಬಂದ್

ಅಕ್ಟೋಬರ್ 4: ಶನಿವಾರ

ಅಕ್ಟೋಬರ್ 5: ಭಾನುವಾರ

ಅಕ್ಟೋಬಪ್ 11: ಶನಿವಾರ

ಅಕ್ಟೋಬರ್ 12: ಭಾನುವಾರ

ಅಕ್ಟೋಬರ್ 18: ಶನಿವಾರ

ಅಕ್ಟೋಬರ್ 19: ಭಾನುವಾರ

ಅಕ್ಟೋಬರ್ 25: ಶನಿವಾರ

ಅಕ್ಟೋಬರ 26: ಭಾನುವಾರ

ಅಕ್ಟೋಬರ್ ತಿಂಗಳಲ್ಲಿ ಭಾರತೀಯರು ಹಬ್ಬದ ಸಂಭ್ರಮದಲ್ಲಿ ಮಿಂದೇಳಲಿದ್ದಾರೆ. ಹೀಗಾಗಿ ರಜಾ ದಿನವೂ ಹೆಚ್ಚಾಗಿದೆ.