ಇಡೀ ಮಾರ್ಕೆಟ್‌ ಕುಸಿತ ಕಂಡರೂ ಮಹಾರಾಜನಾಗಿ ನಿಂತ ಸರ್ಕಾರಿ ಸ್ವಾಮ್ಯದ ITI, ಇದಕ್ಕೆ ಕಾರಣವೇನು?

ಐಟಿಐ ಲಿಮಿಟೆಡ್‌ನ ಷೇರುಗಳು ಕೇವಲ 10 ದಿನಗಳಲ್ಲಿ ದ್ವಿಗುಣಗೊಂಡಿವೆ. ಮಾರುಕಟ್ಟೆ ಕುಸಿತದ ನಡುವೆಯೂ ಈ ಸರ್ಕಾರಿ ಸ್ವಾಮ್ಯದ ಕಂಪನಿಯ ಷೇರುಗಳು ಏರಿಕೆ ಕಂಡಿವೆ. ಉತ್ತಮ ಆರ್ಥಿಕ ಫಲಿತಾಂಶಗಳು, ಹೂಡಿಕೆದಾರರ ವಿಶ್ವಾಸ ಮತ್ತು ಪ್ರಮುಖ ಟೆಲಿಕಾಂ ಯೋಜನೆಗಳಲ್ಲಿನ ಭಾಗವಹಿಸುವಿಕೆ ಇದಕ್ಕೆ ಕಾರಣ.

Stock Market Crash Sensex Nifty falls But ITI stock soars 15 PC to new highs san

ಬೆಂಗಳೂರು (ಜ.6):ಇಂದಿನ ಜನರಷನ್‌ ಜಡ್‌ಗೆ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್, ಈಗ ITI ಲಿಮಿಟೆಡ್ ಎನ್ನುವ ಹೆಸರಿನಿಂದ ಪ್ರಖ್ಯಾತವಾಗಿರುವ ಕಂಪನಿಯನ್ನು ಕೇಳಿರುವ ಸಾಧ್ಯತೇ ಇಲ್ಲ. ಕ್ಲಾಸ್‌ ಹಾಗೂ ಲೈಸೆನ್ಸ್‌ ರಾಜ್‌ನ ಟ್ರೆಂಡ್‌ ಸೆಟ್ಟರ್‌ ಆಗಿದ್ದ ಕಪ್ಪು ಬಣ್ಣದ ರೋಟರಿ ಡಯಲ್‌ ಫೋನ್‌ಗಳ ಉತ್ಪಾದನೆ ಮಾಡುತ್ತಿದ್ದ ಐಟಿಐ ಲಿಮಿಟೆಡ್‌ ಈಗ ಮತ್ತೆ ಸುದ್ದಿಯಲ್ಲಿದೆ. ಷೇರು ಮಾರುಕಟ್ಟೆಯಲ್ಲಿ ಬರೀ 10 ಟ್ರೇಡಿಗ್‌ ಸೆಷನ್‌ಗಳಲ್ಲೇ ಹಣ ಡಬಲ್‌ ಆಗಿದೆ. ಸ್ವಾತಂತ್ರ್ಯ ಪಡೆದ ಬಳಿಕ ಭಾರತ ಆರಂಭಿಸಿದ ಮೊದಲ ಕಂಪನಿ ಇಂದು ತನ್ನ ಷೇರುಮಾರುಕಟ್ಟೆ ವಹಿವಾಟಿನ ಕಾರಣಕ್ಕಾಗಿ ಸುದ್ದಿಯಲ್ಲಿದೆ.

ಇಂದು ವಿವಿಧ ಕಾರಣಗಳಿಗಾಗಿ ದೇಶದ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸೋಮವಾರದ ಕುಸಿತಕ್ಕೆ ಎಚ್‌ಎಂಪಿವಿ ಸಣ್ಣ ಕಾರಣವಾದರೂ ಇದಕ್ಕೆ ವಿವಿಧ ವಿಚಾರಗಳು ಅಲ್ಲಿಗಲ್ಲಿಗೆ ಲಿಂಕ್‌ ಆಗಿದೆ. ಒಟ್ಟಾರೆಯಾಗಿ ಸೆನ್ಸೆಕ್ಸ್‌ ಇಂದು 1200 ಅಂಕದ ಕುಸಿತ ಕಂಡಿದ್ದರೆ ನಿಫ್ಟಿ ಶೇ. 1.5ರಷ್ಟು ಕುಸಿತ ಕಂಡು ಹೂಡಿಕೆದಾರರ ನಿರಾಸೆಗೆ ಕಾರಣವಾಗಿದೆ. ಆದರೆ, ಇಡೀ ಮಾರುಕಟ್ಟೆ ಕುಸಿತದ ಭೀತಿ ಎದುರಿಸುತ್ತಿರುವ ನಡುವೆಯೂ ಸರ್ಕಾರಿ ಸ್ವಾಮ್ಯದ ಕಂಪನಿಯೊಂದು ಮಾತ್ರ ಏರಿಕೆಯ ಹಾದಿ ಹಿಡಿದಿತ್ತು. ಸೋಮವಾರ ಒಂದೇ ದಿನ ಐಟಿಐ ಷೇರು 91.40 ರೂಪಾಯಿ ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಬರಗಾಲದಲ್ಲೂ ದಂಡಿಯಾಗಿ ನೀರು ಸಿಗುವಂತೆ ಮಾಡಿದೆ.

ಕೇವಲ ಎರಡು ತಿಂಗಳ ಹಿಂದೆ 220 ರ ಆಸುಪಾಸಿನಲ್ಲಿದ್ದ ಐಟಿಐ ಕಂಪನಿ ಲಿಮಿಟೆಡ್‌ನ ಷೇರು, ಈ ಅವಧಿಯಲ್ಲಿ ಶೇ. 92ರಷ್ಟು ಏರಿಕೆ ಕಂಡಿದೆ. ಸೋಮವಾರ ಒಂದೇ ದಿನ ಐಟಿಐ ಕಂಪನಿಯ ಷೇರು ಶೇ. .20ರಷ್ಟು ಏರಿಕೆ ಕಂಡು 548 ರೂಪಾಯಿಯಲ್ಲಿ ಮುಕ್ತಾಯಕಂಡಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಕಂಪನಿಯ ಉತ್ತಮ ಆರ್ಥಿಕ ಫಲಿತಾಶ, ಹೂಡಿಕೆದಾರರ ವಿಶ್ವಾಸ ಹಾಗೂ ಸರ್ಕಾರ ಮೂಲಸೌಕರ್ಯ ಪ್ರಾಜೆಕ್ಟ್‌ಗಳು. ಕಳೆದ ಅಕ್ಟೋಬರ್‌ನಲ್ಲಿ 52ವಾರದ ಕನಿಷ್ಠಕ್ಕೆ ತಲುಪಿದ್ದ ಐಟಿಐ ಕಂಪನಿಯ ಷೇರು ಕಳೆದ ಒಂದೇ ವರ್ಷದಲ್ಲಿ ಹೂಡಿಕೆದಾರರಿಗೆ ಶೇ. 348ರಷ್ಟು ರಿಟರ್ನ್ಸ್‌ ನೀಡಿದೆ. ಐಟಿಟಿ ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಶೇ. 313.3ರಷ್ಟು ಆದಾಯ ಹೆಚ್ಚಳವಾಗಿರುವುದನ್ನು ಘೋಷಣೆ ಮಾಡಿದ್ದು, ಪ್ರಸ್ತುತ ಅತ್ಯಂತ ಪ್ರಮುಖ ಟೆಲಿಕಾಮ್‌ ಪ್ರಾಜೆಕ್ಟ್‌ ಆಗಿರುವ ಭಾರತ್‌ನೆಟ್‌ನ ಭಾಗವಾಗಿರುವುದಾಗಿ ತಿಳಿಸಿದೆ.

Jagdeep Singh: ವಿಶ್ವದಲ್ಲಿಯೇ ಗರಿಷ್ಠ ವೇತನ ಪಡೆಯುವ ಉದ್ಯೋಗಿ, ದಿನದ ಸಂಬಳ 48 ಕೋಟಿ!

ಐಟಿಐ ಭಾರತ್ ನೆಟ್ ಹಂತ II ಅಲ್ಲದೆ, ರಕ್ಷಣಾ ಸಚಿವಾಲಯದ ಆಸ್ಕಾನ್ ಯೋಜನೆಯಲ್ಲೂ ಕೂಡ ಐಟಿಐ ಭಾಗವಾಗಿದೆ. ಅವರೊಂದಿಗೆ ಸ್ಪೆಕ್ಟ್ರಮ್‌ಗಾಗಿ ಸ್ಮಾರ್ಟ್ ಎನರ್ಜಿ ಮೀಟರ್‌ಗಳು ಮತ್ತು ನೆಟ್‌ವರ್ಕ್ ಮೂಲಸೌಕರ್ಯಗಳ ಪೂರೈಕೆ ಸೇರಿದಂತೆ ಮಹತ್ವದ ಒಪ್ಪಂದಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಕಂಪನಿಯ ಆರ್ಡರ್‌ ಬುಕ್‌ಗಳು ಕೂಡ ಸದೃಢವಾಗಿದ್ದು, ಹೊಸ ಒಪ್ಪಂದಗಳು ಅದಕ್ಕೆ ಸೇರ್ಪಡೆಯಾಗಿವೆ. ಇದು ಭವಿಷ್ಯದ ದಿನಗಳಲ್ಲಿ ಕಂಪನಿಗೆ ಆರೋಗ್ಯಕರ ಲಾಭ ಸಿಗಬಹುದು ಎನ್ನುವ ವಿಶ್ವಾಸವನ್ನು ಹೂಡಿಕೆದಾರರಿಗೆ ನೀಡಿದೆ.

ನವೀ ಮುಂಬೈ ಏರ್‌ಪೋರ್ಟ್‌ ಬಳಿಯ 5286 ಎಕರೆ ಕೈಗಾರಿಕಾ ಭೂಮಿ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಕೇವಲ 2200 ಕೋಟಿಗೆ ಮಾರಾಟ

Latest Videos
Follow Us:
Download App:
  • android
  • ios