ತೆರಿಗೆ ಉಳಿಸಲು ಸುಳ್ಳು HRA ಕ್ಲೇಮ್ ಮಾಡೋ ತೆರಿಗೆದಾರರ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣು, ಕಠಿಣ ಕ್ರಮದ ಎಚ್ಚರಿಕೆ

ತೆರಿಗೆದಾರರು ತೆರಿಗೆ ಉಳಿಸಲು ನಾನಾ ಅಡ್ಡ ಮಾರ್ಗಗಳನ್ನು ಹುಡುಕುತ್ತಾರೆ. ಅದರಲ್ಲೂ ಎಚ್ ಆರ್ ಎ ಕ್ಲೇಮ್ ಹೆಸರಿನಲ್ಲಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದ್ದು, ತಡೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. 

Stern Action Against HRA Fraud Income Tax Department Utilizes e verification System  Details anu

ನವದೆಹಲಿ (ಮೇ 8): ತೆರಿಗೆ ಉಳಿಸಲು ತೆರಿಗೆದಾರರು ಹತ್ತು ಹಲವು ಮಾರ್ಗಗಳನ್ನು ತಡಕಾಡುತ್ತಾರೆ. ಕೆಲವರಂತೂ ಅಡ್ಡ ಮಾರ್ಗಗಳ ಮೂಲಕ ತೆರಿಗೆ ಉಳಿತಾಯಕ್ಕೆ ಮುಂದಾಗುತ್ತಾರೆ. ಇದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಕೂಡ ಬಂದಿದೆ. ಅದರಲ್ಲೂ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ) ಸೌಲಭ್ಯ ಬಳಸಿಕೊಂಡು ತೆರಿಗೆ ವಂಚಿಸುತ್ತಿರೋದು ಕಂಡುಬಂದಿದೆ. ಬಾಡಿಗೆದಾರರು ಹೆಚ್ಚಿನ ಬಾಡಿಗೆ ಮೊತ್ತವನ್ನು ತೋರಿಸುತ್ತಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಬಾಡಿಗೆದಾರರು ಮನೆ ಮಾಲೀಕರ ಪ್ಯಾನ್ ಮಾಹಿತಿಗಳನ್ನು ಒದಗಿಸದೆ ವಾರ್ಷಿಕ ಒಂದು ಲಕ್ಷ ರೂ. ಮೀರಿದ ಬಾಡಿಗೆಗೆ ಎಚ್ ಆರ್ ಎ ಕ್ಲೇಮ್ ಮಾಡುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಎಚ್ಆರ್ ಎ ಕ್ಲೇಮ್ ಮಾಡಲು ಮನೆ ಮಾಲೀಕರ ಪ್ಯಾನ್ ಮಾಹಿತಿಗಳನ್ನು ಸಲ್ಲಿಕೆ ಮಾಡೋದು ಕಡ್ಡಾಯ. ಹೀಗಾಗಿ ಆದಾಯ ತೆರಿಗೆ ಇಲಾಖೆ ಎಚ್ ಆರ್ ಎ ವಂಚನೆ ತಡೆಗೆ ಇ-ಪರಿಶೀಲನೆ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಎಚ್ ಆರ್ ಎ ಕ್ಲೇಮ್ ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಂಚಿಸುವ ತೆರಿಗೆದಾರರ ಪತ್ತೆಗೆ ಆದಾಯ ತೆರಿಗೆ ಇಲಾಖೆ 'ಇ-ಪರಿಶೀಲನ' ವ್ಯವಸ್ಥೆ ಅಳವಡಿಸಿಕೊಂಡಿದೆ. ಅಷ್ಟೇ ಅಲ್ಲ, ಇದರ ಮೂಲಕ ಎಚ್ ಆರ್ ಎ ದುರ್ಬಳಕೆ ಮಾಡಿರುವ ತೆರಿಗೆದಾರರನ್ನು ಪತ್ತೆ ಹಚ್ಚಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಆದಾಯ ತೆರಿಗೆ ಇಲಾಖೆ ಪೋರ್ಟಲ್ ಮೂಲಕ ತೆರಿಗೆ ವಂಚಿಸುತ್ತಿರೋರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ತೆರಿಗೆ ಅಧಿಕಾರಿಗಳು ಈಗಾಗಲೇ ಮುಂದಾಗಿದ್ದಾರೆ.

Income Tax Return 2024:ಎಚ್ ಆರ್ ಎ ವಿನಾಯ್ತಿ ಕ್ಲೇಮ್ ಮಾಡೋ ಮುನ್ನ ಈ 5 ವಿಚಾರಗಳನ್ನು ಗಮನಿಸಿ

ಕೆಲವು ವರದಿಗಳ ಪ್ರಕಾರ ಕಾನೂನು ತಜ್ಞರು ಎಚ್ ಆರ್ ಎ ಕ್ಲೇಮ್ ವಂಚನೆಯಿಂದ ಮುಂದೆ ಎದುರಾಗಬಹುದಾದ ಗಂಭೀರ ಕ್ರಮಗಳ ಬಗ್ಗೆ ಈಗಾಗಲೇ ಬಾಡಿಗೆದಾರರು ಹಾಗೂ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಮನೆ ಮಾಲೀಕರಿಗೆ ತಮ್ಮ ಪ್ಯಾನ್ ದುರ್ಬಳಕೆ ಆಗಿರುವ ಬಗ್ಗೆ ಮಾಹಿತಿಯಿಲ್ಲದಿದ್ದರೂ ಅವರು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ತೆರಿಗೆ ಅಧಿಕಾರಿಗಳ ಸಹಭಾಗಿತ್ವ ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 

ಪ್ಯಾನ್ ಗೆ ಸಂಬಂಧಿಸಿ ಸುಳ್ಳು ಕ್ಲೇಮ್ ಗಳನ್ನು ನಿರಾಕರಿಸೋದ್ರಿಂದ ಮನೆ ಮಾಲೀಕರು ಮುಂದೆ ಎದುರಿಸಬೇಕಾದ ಕಾನೂನು ಸಮಸ್ಯೆಗಳ ಬಗ್ಗೆ  ಆದಾಯ ತೆರಿಗೆ ಮಾಜಿ ಮುಖ್ಯ ಆಯುಕ್ತ ರಾಮಕೃಷ್ಣನ್ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ. ಈ ರೀತಿ ಪ್ಯಾನ್ ಮಾಹಿತಿಗಳ ದುರ್ಬಳಕೆಯ ಗಂಭೀರ ಪರಿಣಾಮಗಳನ್ನು ಮನೆ ಮಾಲೀಕರು ಎದುರಿಸಬೇಕಾಗುತ್ತದೆ. ಅವರ ಮೇಲಿನ ತೆರಿಗೆ ಹೊರೆ ಕೂಡ ಹೆಚ್ಚುತ್ತದೆ ಎಂದು ಎಚ್ಚರಿಸಿದ್ದಾರೆ.

ಮನೆ ಮಾಲೀಕರು ಎಚ್ ಆರ್ ಎ ಕ್ಲೇಮ್ ಗೆ ತಮ್ಮ ಪ್ಯಾನ್ ದುರ್ಬಳಕೆ ತಡೆಗೆ ದಾಖಲೆಗಳ ಸಮರ್ಪಕ ನಿರ್ವಹಣೆ, ಎಲೆಕ್ಟ್ರಾನಿಕ್ ಪಾವತಿ ಮಾದರಿ ಆಯ್ಕೆ ಹಾಗೂ ಪ್ಯಾನ್ ಮಾಹಿತಿಗಳ ದುರ್ಬಳಕೆ ತಡೆಗೆ ಖಾಲಿ ಆಸ್ತಿಗಳಿಂದ ಗಳಿಸುತ್ತಿರುವ ಆದಾಯದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕಾದ ಅಗತ್ಯವಿದೆ. 

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಳ!

ಇತ್ತೀಚಿನ ಮಾಧ್ಯಮ ಪ್ರಕಟಣೆಯಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ  (CBDT) ವಂಚನೆ ಪ್ರಕರಣಗಳ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯಗಳನ್ನು ಒತ್ತಿ ಹೇಳಿದೆ. ಹಾಗೆಯೇ ತೆರಿಗೆದಾರರು ಕೆಲವೊಂದು ನಿಯಮಗಳನ್ನು ಅನುಸರಿಸುವ ಜೊತೆಗೆ ಹಣಕಾಸಿನ ವಹಿವಾಟುಗಳಲ್ಲಿ ಪಾರದರ್ಶಕತೆ ನಿರ್ವಹಣೆ ಮಾಡಬೇಕಾದ ಅಗತ್ಯವನ್ನು ಸಾರಿ ಹೇಳಿದ್ದಾರೆ.

ಇನ್ನು ಎಚ್ ಆರ್ ಎ ಪೂರ್ಣ ಪ್ರಮಾಣದಲ್ಲಿ ತೆರಿಗೆಯಿಂದ ವಿನಾಯ್ತಿ ಪಡೆದಿಲ್ಲ. ಇದನ್ನು ಕಾಯ್ದೆಗೆ ಅನುಗುಣವಾಗಿ ಕ್ಲೇಮ್ ಮಾಡಬಹುದು. ತೆರಿಗೆದಾರರು ಫಾರ್ಮ್ 16ನಲ್ಲಿ ಎಚ್ ಆರ್ ಎ ಅನ್ನು ಸರಿಯಾಗಿ ನಮೂದಿಸದಿದ್ರೆ ಅದು ಆದಾಯ ತೆರಿಗೆ ಇಲಾಖೆಯ ಗಮನ ಸೆಳೆಯುವ ಸಾಧ್ಯತೆಯಿದೆ. 


 

Latest Videos
Follow Us:
Download App:
  • android
  • ios