Asianet Suvarna News Asianet Suvarna News

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಳ!

ಕೇಂದ್ರ ಸರ್ಕಾರವು ಈ ವರ್ಷ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಳ ಸೇರಿ 2 ಪ್ರಯೋಜನಗಳನ್ನು ನೀಡಲಿದೆ ಎಂದು ವರದಿಗಳು ಹೇಳುತ್ತಿದೆ.

7th pay commission central govt employees likely to get two benefits soon check details ash
Author
First Published Jan 9, 2024, 2:00 PM IST | Last Updated Jan 9, 2024, 2:00 PM IST

ನವದೆಹಲಿ (ಜನವರಿ 9, 2024): ಹೊಸ ವರ್ಷ 2024 ಉತ್ಸಾಹದಿಂದ ಪ್ರಾರಂಭವಾಗಿದೆ. ಹೊಸ ವರ್ಷದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಈ ವರ್ಷ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಳ ಸೇರಿ 2 ಪ್ರಯೋಜನಗಳನ್ನು ನೀಡಲಿದೆ ಎಂದು ವರದಿಗಳು ಹೇಳುತ್ತಿದೆ. 7ನೇ ವೇತನ ಆಯೋಗದ ಹೆಚ್ಚುವರಿ ವೇತನದ ಜತೆಗೆ ಈ ಡಬಲ್ ಬಂಪರ್ ಹೆಚ್ಚಳ ದೊರೆಯುವ ಸಾಧ್ಯತೆ ಇದೆ. 

ಪ್ರಸ್ತುತ, ಸರ್ಕಾರಿ ನೌಕರರು ತುಟ್ಟಿ ಭತ್ಯೆಯನ್ನು ಶೇಕಡಾ 46 ರ ದರದಲ್ಲಿ ಪಡೆಯುತ್ತಿದ್ದಾರೆ. ಇನ್ನು, ಕೇಂದ್ರವು ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಲಿದೆ ಎನ್ನಲಾಗಿದ್ದು, ಇದಾದ ನಂತರ ಡಿಎ ಶೇ. 50ಕ್ಕೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ!

ಒಂದು ವೇಳೆ, DA ಮತ್ತು HRA ಎರಡನ್ನೂ ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಉತ್ತಮ ಮಟ್ಟಿನ ಹೆಚ್ಚಳವನ್ನು ಪಡೆಯುತ್ತಾರೆ. ಇನ್ನು, ಎಚ್‌ಆರ್‌ಎ ಪ್ರಮಾಣವು ನಗರದಿಂದ ನಗರಕ್ಕೆ ಭಿನ್ನವಾಗಿದೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ಯೋಗಿಗಳು ಮಾತ್ರ ಎಚ್‌ಆರ್‌ಎ ಪ್ರಯೋಜನವನ್ನು ಪಡೆಯುತ್ತಾರೆ. ಉದಾಹರಣೆಗೆ, ಶ್ರೇಣಿ-1 ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಶ್ರೇಣಿ-II ಅಥವಾ ಶ್ರೇಣಿ-III ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಹೆಚ್ಚಿನ HRA ಅನ್ನು ಪಡೆಯುತ್ತಾರೆ.

ಸಾಮಾನ್ಯವಾಗಿ, DA ದರವನ್ನು ಜನವರಿ ಮತ್ತು ಜುಲೈನಲ್ಲಿ -- AICPI ಸೂಚ್ಯಂಕದ ಅರ್ಧ-ವಾರ್ಷಿಕ ಕಾರ್ಯಕ್ರಮದ ಅಡಿಯಲ್ಲಿ ವರ್ಷಕ್ಕೆ 2 ಬಾರಿ ಪರಿಷ್ಕರಿಸಲಾಗುತ್ತದೆ. 2023 ರಲ್ಲಿ ಒಟ್ಟು 8% ಡಿಎ ಹೆಚ್ಚಿಸಲಾಗಿದೆ. ಪ್ರಸ್ತುತ, ಸರ್ಕಾರಿ ನೌಕರರು ತುಟ್ಟಿ ಭತ್ಯೆಯಲ್ಲಿ 4% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ನಿರೀಕ್ಷಿಸುತ್ತಿದ್ದಾರೆ. ಡಿಎ ಹೆಚ್ಚಳ ಘೋಷಣೆಯಾದರೆ, ಜನವರಿ 2024 ರಿಂದ ಜಾರಿಗೆ ಬರಲಿದೆ ಮತ್ತು 2024 ರ ಹೋಳಿಯೊಳಗೆ ಘೋಷಣೆಯಾಗುವ ನಿರೀಕ್ಷೆಯಿದೆ.

ಹೊಸ ವರ್ಷಕ್ಕೆ ಎಫ್‌ಡಿ ಇಡಲು ಬಯಸ್ತಿದ್ದೀರಾ? ಹಾಗಾದ್ರೆ ಪ್ರಮುಖ ಬ್ಯಾಂಕ್‌ಗಳು ಎಷ್ಟು ಬಡ್ಡಿ ದರ ನೀಡ್ತಿವೆ ನೋಡಿ..

ಈ ವರ್ಷ ಲೋಕಸಭೆ ಚುನಾವಣೆ ಸಹ ಇದ್ದು, ಚುನಾವಣೆ ದಿನಾಂಕ ಘೋಷಣೆಯಾಗುವ ವೇಳೆಯೊಳಗೆ ಕೇಂದ್ರ ಸರ್ಕಾರ ಘೋಷಣೆ ಹೊರಡಿಸಲಿದೆ ಎನ್ನಲಾಗಿದೆ. ಹಾಗೂ, ಚುನಾವಣೆ ಹಿನ್ನೆಲೆ ಡಿಎ ಹಾಗೂ ಎಚ್‌ಆರ್‌ಎ ಎರಡನ್ನೂ ಸಹ ಹೆಚ್ಚಳ ಮಾಡಬಹುದು. 

Latest Videos
Follow Us:
Download App:
  • android
  • ios