35ಎ ರದ್ದು ಬೆನ್ನಲ್ಲೇ, ಕಾಶ್ಮೀರದಲ್ಲಿ ಮೊದಲ ಕೈಗಾರಿಕೆ ಸ್ಥಾಪನೆಗೆ ಆಫರ್‌!

35ಎ ರದ್ದು ಬೆನ್ನಲ್ಲೇ, ಕಾಶ್ಮೀರದಲ್ಲಿ ಮೊದಲ ಕೈಗಾರಿಕೆ ಸ್ಥಾಪನೆ ಆಫರ್‌| ಸ್ಟೀಲ್‌ಬರ್ಡ್‌ ಹೈಟೆಕ್‌ ಕಂಪನಿಯಿಂದ ಕಾರ್ಖಾನೆ ಆರಂಭ ಪ್ರಸ್ತಾಪ| ಏಷ್ಯಾದ ಅತಿದೊಡ್ಡ ಹೆಲ್ಮೆಟ್‌ ತಯಾರಿಕಾ ಕಂಪನಿಯಿಂದ ಘೋಷಣೆ| ಅಕ್ಟೋಬರ್‌ನ ಹೂಡಿಕೆದಾರರ ಸಮಾವೇಶದಲ್ಲಿ ಯೋಜನೆ ಬಹಿರಂಗ

Steelbird eyes helmet manufacturing in Jammu and Kashmir

ನವ​ದೆ​ಹ​ಲಿ[ಆ.07]: ಕಾಶ್ಮೀ​ರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾ​ನದ 35ಎ ವಿಧಿ ತಿದ್ದು ಪಡಿ ಮಾಡಿದ ಬೆನ್ನಲ್ಲೇ ಜಮ್ಮು-ಕಾಶ್ಮೀ​ರದಲ್ಲಿ ಕೈಗಾ​ರಿಕೆ ಸ್ಥಾಪಿಸಲು ಏಷ್ಯಾ​ದ ಅತಿ ದೊಡ್ಡ ಹೆಲ್ಮೆಟ್‌ ತಯಾ​ರಿಕಾ ಕಂಪನಿ ಸ್ಟೀಲ್‌ ಬರ್ಡ್‌ ಹೈ-ಟೆಕ್‌ ಇಂಡಿಯಾ ಮುಂದೆ ಬಂದಿದೆ.

ಈ ಬಗ್ಗೆ ಮಾತ​ನಾ​ಡಿ​ರುವ ಕಂಪನಿ ಅಧ್ಯಕ್ಷ ಸುಭಾಷ್‌ ಕಪೂರ್‌, ಕೇಂದ್ರ ಸರ್ಕಾ​ರದ ಈ ನಿಲುವು ಕಣಿವೆ ರಾಜ್ಯ​ದ​ಲ್ಲಿ ಕೈಗಾ​ರಿ​ಕಾ ಕ್ರಾಂತಿಗೆ ನಾಂದಿ ಹಾಡ​ಲಿದ್ದು, ಅಲ್ಲಿನ ಜನ​ರಿಗೆ ಉದ್ಯೋ​ಗಾ​ವ​ಕಾ​ಶ​ಗಳು ಸಿಗು​ವು​ದ​ಲ್ಲದೇ ದೇಶದ ಒಟ್ಟಾರೆ ಅಭಿ​ವೃ​ದ್ಧಿಯೂ ಸಾಧ್ಯ​ವಾ​ಗು​ತ್ತದೆ. ಸ್ಟೀಲ್‌ ಬರ್ಡ್‌ ಕಂಪನಿ ಸರ್ಕಾ​ರದ ಈ ನಿಲು​ವನ್ನು ಸ್ವಾಗ​ತಿ​ಸು​ತ್ತದೆ ಎಂದರು.

ಇಷ್ಟರವರೆಗೆ ಜಮ್ಮು​ವಿ​ನ​ಲ್ಲಿ ಅಲ್ಲಿನ ಸಂಪ​ನ್ಮೂ​ಲ ಕೃಷಿ ಹಾಗೂ ಕರ​ಕು​ಶಲ ಉತ್ಪಾ​ದ​ನೆಗೆ ಮಾತ್ರ ಸೀಮಿ​ತ​ವಾ​ಗಿತ್ತು. ನಾವೀಗ ಅಲ್ಲಿ ಕೈಗಾ​ರಿಕೆ ಸ್ಥಾಪಿ​ಸಲು ಉದ್ದೇ​ಶಿ​ಸಿದ್ದು ಸ್ಥಳೀ​ಯ​ ಉತ್ಪಾ​ದ​ಕ​ರೊಂದಿಗೆ ಸೇರಿ ಉತ್ತಮ ಸರ​ಪ​ಳಿ​ಯನ್ನು ಸೃಜಿ​ಸಲು ಎದು​ರು ​ನೋ​ಡು​ತ್ತಿ​ದ್ದೇವೆ. ಹೆಚ್ಚಿನ ನಗ​ರ​ಗ​ಳು ಇದೇ ರೀತಿ ಬೆಳವಣಿಗೆ ಕಂಡಿದ್ದು ಸ್ಥಳೀ​ಯ​ರಿಗೆ ಇದ​ರಿಂದ ಉತ್ತಮ ಅವ​ಕಾಶ ಸಿಗ​ಲಿದೆ. ಮುಂದಿನ ಅಕ್ಟೋ​ಬ​ರ್‌​ನಲ್ಲಿ ನಡೆ​ಯುವ ಹೂಡಿ​ಕೆ​ದಾ​ರರ ಸಮಾ​ವೇ​ಶ​ದಲ್ಲಿ ನಾವು ಈ ಕುರಿತ ಯೋಜ​ನೆ​ಯೊಂದಿಗೆ ಬರ​ಲಿ​ದ್ದೇವೆ ಎಂದು ಅವರು ಹೇಳಿ​ದ್ದಾರೆ.

ಇಲ್ಲಿಯವರೆಗೆ ಕಾಶ್ಮೀ​ರ​ದಲ್ಲಿ 35ರ ವಿಧಿ ಜಾರಿ​ಯ​ಲ್ಲಿ​ದ್ದ​ರಿಂದ ಹೊರ​ರಾ​ಜ್ಯದ ಯಾವುದೇ ಕಂಪ​ನಿ​ಗ​ಳಿಗೆ ವ್ಯವ​ಹಾರ ನಡೆ​ಸುವ ಅವ​ಕಾ​ಶ ಇರ​ಲಿ​ಲ್ಲ.

Latest Videos
Follow Us:
Download App:
  • android
  • ios