Personal Finance : ತಿಂಗಳ ಇಎಂಐ ಹೊಣೆ ಕಡಿಮೆಯಾಗ್ಬೇಕೆಂದ್ರೆ ಹೀಗೆ ಮಾಡಿ
ವಸ್ತು ಖರೀದಿ ಮಾಡುವಾಗ ಜೇಬು ಖಾಲಿಯಾಗೋದಿಲ್ಲ. ಯಾಕೆಂದ್ರೆ ನಾವು ಇಎಂಐನಲ್ಲಿ ವಸ್ತು ಖರೀದಿ ಮಾಡಿರ್ತೇವೆ. ಆದ್ರೆ ತಿಂಗಳ ಆರಂಭದಲ್ಲಿ ಇಎಂಐ ಕಟ್ ಆದ ವಸ್ತು ಭಾರವಾಗಲು ಶುರುವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಟಪ್ಸ್ ಫಾಲೋ ಮಾಡ್ಬೇಕು.
ಈಗ ವಸ್ತುಗಳ ಖರೀದಿ ಸುಲಭ. ಬೆಲೆ ಎಷ್ಟೇ ಆಗಿರಲಿ ತಕ್ಷಣ ಪೂರ್ತಿ ಹಣ ಪಾವತಿಸಬೇಕಾಗಿಲ್ಲ. ಕೆಲ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಒಂದು ರೂಪಾಯಿ ಪಾವತಿಸಿ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಎನ್ನುವ ಜಾಹೀರಾತು ಕೂಡ ನೀಡ್ತವೆ. ಈಗ ದಿನ ಬಳಕೆಯ ಎಲ್ಲ ಸಣ್ಣ ವಸ್ತುಗಳಿಗೂ ಇಎಂಐ ಸೌಲಭ್ಯವಿದೆ.
ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ಸಣ್ಣ ಮತ್ತು ದೊಡ್ಡ ಗೃಹೋಪಯೋಗಿ ವಸ್ತುಗಳಿಗೆ ಇಎಂಐ (EMI ) ಸೌಲಭ್ಯವಿದೆ. ಇಎಂಐ ಅಂದ್ರೆ ಮಾಸಿಕ ಕಂತಿನಲ್ಲಿ ನಾವು ವಸ್ತುವಿನ ಹಣ (Money) ವನ್ನು ಪಾವತಿ ಮಾಡಬೇಕಾಗುತ್ತದೆ. ಅನೇಕ ಬಾರಿ ವಸ್ತುಗಳ ಖರೀದಿ ಅನಿವಾರ್ಯವಾಗಿರುವುದಿಲ್ಲ. ಆದ್ರೆ ಆಕರ್ಷಕ ಸಾಲ ಹಾಗೂ ಇಎಂಐ ಸೌಲಭ್ಯ ನೋಡಿ ನಾವು ವಸ್ತು ಖರೀದಿ (Purchase ) ಮಾಡಿರ್ತೇವೆ. ವಸ್ತುಗಳನ್ನು ಖರೀದಿ ಮಾಡುವಾಗ ಕೈನಲ್ಲಿ ಪೂರ್ಣ ಹಣವಿಲ್ಲದೆ ಹೋದ್ರೂ ವಸ್ತು ಮನೆಗೆ ಬರುವ ಕಾರಣ ಇಎಂಐ ವಿಧಾನ ಅತ್ಯುತ್ತಮ ಎನ್ನಿಸುತ್ತದೆ. ಆದ್ರೆ ತಿಂಗಳು ತಿಂಗಳು ಇಎಂಐಗೆ ಹಣ ಕಡಿತವಾದಾಗ ಸಮಸ್ಯೆ ಶುರುವಾಗುತ್ತದೆ. ತಿಂಗಳ ಖರ್ಚಿಗೆ ಹಣವಿಲ್ಲದಂತಾಗುತ್ತದೆ. ನೀವೂ ಇಎಂಐ ಪಾವತಿ ಮಾಡ್ತಿದ್ದರೆ ಕೆಲವೊಂದು ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತಿಂಗಳ ಇಎಂಐ ಹೊಣೆಯನ್ನು ಕಡಿಮೆ ಮಾಡಬಹುದು.
ಇಎಂಐ ಹೊಣೆಯನ್ನು ಹೀಗೆ ಸುಲಭಗೊಳಿಸಿ :
ತಿಂಗಳ ಕಂತಿನ ಮೊತ್ತ ಹೆಚ್ಚಿಸಿಕೊಳ್ಳಿ : ಹೆಚ್ಚಿನ ಸಾಲವನ್ನು ನಿಮಗೆ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ನೀಡಲಾಗುತ್ತದೆ. ನೀವು 12 ತಿಂಗಳು ಇಎಂಐ ಪಾವತಿ ಮಾಡ್ತಿರಬೇಕಾಗುತ್ತದೆ. ಇಎಂಐ ಭಾರ ಬೇಗ ಕಡಿಮೆಯಾಗ್ಬೇಕು ಅಂದ್ರೆ ನಿಮ್ಮ ಮಾಸಿಕ ಕಂತನ್ನು ಹೆಚ್ಚಿಸಿಕೊಂಡು ನೀವು ಅವಧಿಯನ್ನು ಕಡಿಮೆ ಮಾಡಬೇಕು. 12 ತಿಂಗಳಲ್ಲಿ ಮುಗಿಯಬೇಕಾದ ಇಎಂಐ ಅನ್ನು ನೀವು 6 ತಿಂಗಳಿಗೆ ಇಳಿಸಿಕೊಳ್ಳಬಹುದು.
BUSINESS IDEA : ಸಂಗೀತದ ಮೂಲಕ ಮನರಂಜನೆ ನೀಡಿ ಹಣ ಗಳಸಿ
ಕೈನಲ್ಲಿ ಹಣವಿದ್ದಾಗ ಹೀಗೆ ಮಾಡಿ : ಸಾಲದ ಪೂರ್ವಪಾವತಿ ಇನ್ನೊಂದು ಯೋಜನೆಯಾಗಿದೆ. ನಿಮಗೆ ಇನ್ನಾವುದೋ ಮೂಲದಿಂದ ಹಣ ಬಂದಾಗ, ಬೋನಸ್ ಬಂದಾಗ ಅದನ್ನು ಸಾಲ ತೀರಿಸಲು ಬಳಸಿಕೊಳ್ಳಬೇಕು. ನೀವು ಒಂದೇ ಬಾರಿ ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿದ್ರೆ ಇಎಂಐ ಅವಧಿ ಕಡಿಮೆಯಾಗುತ್ತದೆ. ಹೋಮ್ ಲೋನ್‌ನಂತಹ ದೊಡ್ಡ ಲೋನ್‌ಗಳ ಸಂದರ್ಭದಲ್ಲಿ ಆರಂಭಿಕ ವರ್ಷಗಳಲ್ಲಿ ಪೂರ್ವಪಾವತಿಯು ನಿಮ್ಮ ಲೋನ್ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇದ್ರಿಂದ ಸಾಲದ ಮೊತ್ತ ಹಾಗೂ ಇಎಂಐ ಅವಧಿ ಎರಡೂ ಕಡಿಮೆಯಾಗುತ್ತದೆ. ಸಮಯಕ್ಕಿಂತ ಮುಂಚಿತವಾಗಿ ಸಾಲವನ್ನು ಮರುಪಾವತಿ ಮಾಡುವ ಗುರಿಯನ್ನು ನೀವು ಹೊಂದಿರಬೇಕಾಗುತ್ತದೆ. 20 ವರ್ಷಗಳ ಅವಧಿಗೆ ಸಾಲ ಪಡೆದಿದ್ದರೆ ಅಲ್ಲಿಯವೆರೆಗ ನೀವು ಕಾಯ್ಬೇಕಾಗಿಲ್ಲ. ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ. ಆದ್ರೆ ಇಎಂಐ ಭಾರ ತೀರಿಸಲು ಇನ್ನೊಂದು ಕಡೆ ಸಾಲ ಮಾಡುವ ಸಹವಾಸಕ್ಕೆ ಹೋಗ್ಬೇಡಿ.
ಪ್ರತಿ ಅಂಗಡಿಯಲ್ಲೂ ಕಾಣಸಿಗುವ POS ಮಶಿನ್ ಅಂದ್ರೇನು ಗೊತ್ತಾ?
ಸಾಲದ ರೀಫೈನಾನ್ಸಿಂಗ್ : ಆರಂಭದಲ್ಲಿ ನೀವು ಹೆಚ್ಚಿನ ಬಡ್ಡಿಗೆ ಸಾಲ ಪಡೆದಿದ್ದು, ಈಗ ನಿಮಗೆ ಬೇರೆ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗ್ತಿದೆ ಎಂದಾದ್ರೆ ನೀವು ರೀಫೈನಾನ್ಸಿಂಗ್ ಮಾಡಿಕೊಳ್ಳೋದು ಬೆಸ್ಟ್. ನೀವು ನಿಮ್ಮ ಬ್ಯಾಂಕ್ ಸಾಲವನ್ನು ಕಡಿಮೆ ಬಡ್ಡಿ ದರದ ಬ್ಯಾಂಕ್ ಗೆ ವರ್ಗಾಯಿಸಿಕೊಳ್ಳಬೇಕು. ಇಎಂಐ ಹಾಗೂ ಕ್ರೆಡಿಟ್ ಬಿಲ್ ಗಳನ್ನು ನೀವು ಸರಿಯಾಗಿ ಪಾವತಿಸುತ್ತ ಬಂದಿದ್ದರೆ ನಿಮಗೆ ರೀಫೈನಾನ್ಸಿಂಗ್ ಸುಲಭವಾಗುತ್ತದೆ. ಗೃಹ ಸಾಲದಂತಹ ದೊಡ್ಡ ಸಾಲದಲ್ಲಿ ಸಣ್ಣ ಮಟ್ಟದಲ್ಲಿ ಬಡ್ಡಿ ಕಡಿಮೆಯಾದ್ರೂ ನಿಮಗೆ ದೊಡ್ಡ ವ್ಯತ್ಯಾಸವಾಗುತ್ತದೆ. ನೀವು ಲಕ್ಷಗಟ್ಟಲೆ ಹಣವನ್ನು ಇಲ್ಲಿ ಉಳಿಸಬಹುದಾಗಿದೆ. ಈ ಉಳಿದ ಹಣ ನಿಮ್ಮ ಬೇರೆ ಕೆಲಸಕ್ಕೆ ಬರುತ್ತದೆ.