Asianet Suvarna News Asianet Suvarna News

ಎಸ್ ಬಿಐಯಲ್ಲಿವೆ 6 ವಿಧದ ಉಳಿತಾಯ ಖಾತೆಗಳು; ಯಾರು, ಯಾವುದರಲ್ಲಿ ಹೂಡಿಕೆ ಮಾಡಬಹುದು?

ಎಸ್ ಬಿಐ ಸಮಾಜದ ನಾನಾ ವರ್ಗದ ಜನರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಉಳಿತಾಯ ಖಾತೆಗಳನ್ನು ಹೊಂದಿದೆ. ಹೀಗಾಗಿ ನಿಮ್ಮ ಅಗತ್ಯ ಹಾಗೂ ಆದಾಯಕ್ಕೆ ಅನುಗುಣವಾಗಿ ಎಸ್ ಬಿಐ ಉಳಿತಾಯ ಖಾತೆಗಳನ್ನು ತೆರೆಯಬಹುದು. 

State Bank of India 6 types of SBI savings accounts  what they offer
Author
First Published Jan 10, 2023, 12:45 PM IST

Business Desk:ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ). ಇತ್ತೀಚೆಗೆ ಆರ್ ಬಿಐ ಬಿಡುಗಡೆ ಮಾಡಿದ ದೇಶದ ಸುರಕ್ಷಿತ ಹಾಗೂ ಅತ್ಯಂತ ನಂಬಿಕಾರ್ಹ ಬ್ಯಾಂಕ್ ಗಳ ಪಟ್ಟಿಯಲ್ಲಿ ಎಸ್ ಬಿಐ ಸ್ಥಾನ ಪಡೆದಿದೆ. ಉಳಿತಾಯ ಹಾಗೂ ಹೂಡಿಕೆ ವಿಚಾರ ಬಂದಾಗ ಸುರಕ್ಷತೆ ದೃಷ್ಟಿಯಿಂದ ಗ್ರಾಹಕರು ಎಸ್ ಬಿಐಯನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ ಕೂಡ.  ಉಳಿತಾಯ ಖಾತೆಗಳು, ಗೃಹ ಹಾಗೂ ಕಾರು ಸಾಲಗಳು, ಕ್ರೆಡಿಟ್ ಕಾರ್ಡ್, ಸ್ಥಿರ ಠೇವಣಿಗಳು, ಹೂಡಿಕೆ ಸೇರಿದಂತೆ ಅನೇಕ ಸೇವೆಗಳನ್ನು ಎಸ್ ಬಿಐ ಗ್ರಾಹಕರಿಗೆ ಒದಗಿಸುತ್ತಿದೆ. ಇನ್ನು ಎಸ್ ಬಿಐ ಉಳಿತಾಯ ಖಾತೆಯಲ್ಲಿ ಕೂಡ ಅನೇಕ ವಿಧಗಳಿವೆ. ಹೀಗಾಗಿ ಗ್ರಾಹಕರು ತಮ್ಮ ಅಗತ್ಯ, ಆದಾಯಕ್ಕೆ ಹೊಂದಿಕೆಯಾಗುವ ಉಳಿತಾಯ ಖಾತೆಯನ್ನು ಎಸ್ ಬಿಐಯಲ್ಲಿ ತೆರೆಯಬಹುದು. ಎಸ್ ಬಿಐ ಖಾತೆಯಲ್ಲಿ ನೀವು ಉಳಿತಾಯ ಮಾಡಿದ ಹಣ ಸುರಕ್ಷಿತವಾಗಿರುವ ಕಾರಣ ಭಯಪಡುವ ಅಗತ್ಯ ಕೂಡ ಇಲ್ಲ. ಹಾಗಾದ್ರೆ ಎಸ್ ಬಿಐ ಗ್ರಾಹಕರಿಗೆ ಯಾವೆಲ್ಲ ವಿಧದ ಉಳಿತಾಯ ಖಾತೆಗಳನ್ನು ಒದಗಿಸುತ್ತದೆ? ಇಲ್ಲಿದೆ ಮಾಹಿತಿ. 

1.ಮೂಲ ಉಳಿತಾಯ ಖಾತೆ
ಸಮಾಜದ ಬಡ ವರ್ಗದ ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ಉಳಿತಾಯ ಪ್ರಾರಂಭಿಸಲು ನೆರವಾಗುವ ಉದ್ದೇಶದಿಂದ ಈ ಖಾತೆ ರೂಪಿಸಲಾಗಿದೆ. ಇನ್ನು ಮೂಲ ಉಳಿತಾಯ ಖಾತೆಗೆಯಾವುದೇ ಕನಿಷ್ಠ ಅಥವಾ ಗರಿಷ್ಠ ಬ್ಯಾಲೆನ್ಸ್ ಮಿತಿಯಿಲ್ಲ. ಸಮರ್ಪಕ ಕೆವೈಸಿ ಮಾಹಿತಿಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಕೂಡ ಈ ಖಾತೆ ತೆರೆಯಲು ಅರ್ಹತೆ ಹೊಂದಿದ್ದಾನೆ. ಇನ್ನು ಈ ಖಾತೆಯಲ್ಲಿ ಗ್ರಾಹಕರಿಗೆ ಸುರಕ್ಷಿತ ಠೇವಣಿ ಲಾಕರ್  ( Safe deposit locker) ಸೌಲಭ್ಯ ಕೂಡ ಲಭ್ಯವಿದೆ. 

ನೋಟಿನ ಮೇಲೆ ಏನಾದ್ರೂ ಬರೆದಿದ್ರೆ ಅಮಾನ್ಯವಾಗುತ್ತ? ಈ ಸುದ್ದಿ ನಿಜಾನಾ?

2.ಎಸ್ ಬಿಐ ಮೂಲ ಸಣ್ಣ ಉಳಿತಾಯ ಖಾತೆ
ಈ ಖಾತೆಯನ್ನು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗಾಗಿ ರೂಪಿಸಲಾಗಿದ್ದರೂ ಅಧಿಕೃತವಾಗಿ ಬೇಕಿರುವ ಕೆವೈಸಿ ದಾಖಲೆಗಳನ್ನು ಹೊಂದಿರದವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುಕೂಲ ಕಲ್ಪಿಸುತ್ತದೆ. ಈ ಖಾತೆಗೆ ಕನಿಷ್ಠ ಬ್ಯಾಲೆನ್ಸ್ ಮಿತಿಯಿಲ್ಲ. ಆದರೆ, ಗರಿಷ್ಠ ಬ್ಯಾಲೆನ್ಸ್ ಮಿತಿ 50,000ರೂ. ಅಧಿಕೃತ ಕೆವೈಸಿ ದಾಖಲೆಗಳನ್ನು ಹೊಂದಿರದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಈ ಖಾತೆ ತೆರೆಯಲು ಅರ್ಹತೆ ಹೊಂದಿದ್ದಾರೆ. ಈ ಖಾತೆಗೆ ಯಾವುದೇ ವಾರ್ಷಿಕ ನಿರ್ವಹಣ ಶುಲ್ಕವಿಲ್ಲ. ಮಾಸಿಕ ವಹಿವಾಟಿನ ಮಿತಿ 10,000ರೂ. ಹಾಗೂ ವಾರ್ಷಿಕ ಗರಿಷ್ಠ ಕ್ರೆಡಿಟ್ ಮಿತಿ 1ಲಕ್ಷ ರೂ.

3.ಎಸ್ ಬಿಐ ನಿಯಮಿತ ಉಳಿತಾಯ ಖಾತೆ
ಇದು ಸರಳ ಉಳಿತಾಯ ಖಾತೆಯಾಗಿದ್ದು, ಗ್ರಾಹಕರಿಗೆ ಎಸ್ಎಂಎಸ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಹಾಗೂ ಇನ್ನು ಅನೇಕ ಸೇವೆಗಳನ್ನು ಒದಗಿಸುತ್ತದೆ. ಈ ಖಾತೆ ತೆರೆಯಲು ನಿಮ್ಮ ಬಳಿ ಕೆವೈಸಿ ದಾಖಲೆಗಳು ಇರಬೇಕು. ಮಾಸಿಕ ಸರಾಸರಿ ಬ್ಯಾಲೆನ್ಸ್ ಇಷ್ಟೇ ಇರಬೇಕು ಎಂಬ ಯಾವ ನಿಯಮವೂ ಇಲ್ಲ. ನಾಮನಿರ್ದೇಶನ ಕಡ್ಡಾಯ. ಇಂಟರ್ನೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕೂಡ ಲಭ್ಯ. ಯಾವುದೇ ಗರಿಷ್ಠ ಮಿತಿಯಿಲ್ಲ. 

4.ಅಪ್ರಾಪ್ತ ವಯಸ್ಕರ ಉಳಿತಾಯ ಖಾತೆ 
ಮಕ್ಕಳಿಗೆ ಹಣ ಹಾಗೂ ಉಳಿತಾಯದ ಮಹತ್ವ ತಿಳಿಸೋದು ಎಸ್ ಬಿಐ ಈ ಖಾತೆಯ ಉದ್ದೇಶ. ಅಲ್ಲದೆ, ಇದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹಣಕಾಸಿನ ನಿರ್ವಹಣೆಗೆ ನೆರವು ನೀಡಲಿದೆ. ಮಕ್ಕಳಿಗೆ ತಮ್ಮ ಖರೀದಿ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಆದರೆ, ಈ ಖಾತೆ ನಿರ್ವಹಣೆಗೆ ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಅಗತ್ಯ. ಈ ಖಾತೆಯ ಗರಿಷ್ಠ ಬ್ಯಾಲೆನ್ಸ್ 10ಲಕ್ಷ ರೂ. ಪ್ರತಿದಿನ ಮೊಬೈಲ್ ಬ್ಯಾಂಕಿಂಗ್ ಮಿತಿ  2,000ರೂ. ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮಿತಿ  5,000ರೂ. ಈ ಖಾತೆಯನ್ನು ಪೋಷಕರು ತೆರೆಯಬಹುದು ಇಲ್ಲವೆ ಅಪ್ರಾಪ್ತ ಮಕ್ಕಳೊಂದಿಗೆ ಜಂಟಿಯಾಗಿ ತೆರೆಯಬಹುದು. 

ಎಸ್ ಬಿಐ, ಪಿಎನ್ ಬಿ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ?

5.ಎಸ್ ಬಿಐ ಉಳಿತಾಯ ಪ್ಲಸ್ ಖಾತೆ
ಎಸ್ ಬಿಐ ಟರ್ಮ್ ಠೇವಣಿ ಖಾತೆಯನ್ನು ಗ್ರಾಹಕರ ಉಳಿತಾಯ ಅಥವಾ ಚಾಲ್ತಿ ಖಾತೆ ಬಳಸಿಕೊಂಡು ತೆರೆಯುವ ಜೊತೆಗೆ ಅದಕ್ಕೆ ಲಿಂಕ್ ಕೂಡ ಮಾಡಲಾಗುತ್ತದೆ. ಈ ಸ್ಥಿರ ಠೇವಣಿ ಅವಧಿ ಒಂದರಿಂದ ಐದು ವರ್ಷಗಳು. ಈ ಖಾತೆಯನ್ನು ಹೂಡಿಕೆ ಅಭ್ಯಾಸ ಉತ್ತೇಜಿಸಲು ತೆರೆಯಲಾಗುತ್ತದೆ. ಗ್ರಾಹಕರು ಎಂಒಡಿ ಠೇವಣಿ ಮೇಲೆ ಸಾಲ ಕೂಡ ಪಡೆಯಹುದು. ಕನಿಷ್ಠ ವಹಿವಾಟಿನ ಮಿತಿ 10,000ರೂ. ಹಾಗೂ ಕನಿಷ್ಠ ಬ್ಯಾಲೆನ್ಸ್ ಮಿತಿ 35,000ರೂ. ಇದಕ್ಕಿಂತ ಹೆಚ್ಚಿನ ಮೊತ್ತ ಸ್ಥಿರ ಠೇವಣಿಗೆ ಸ್ವಯಂ ಆಗಿ ಪರಿವರ್ತನೆಗೊಳ್ಳುತ್ತದೆ. 

6.ಇನ್ ಸ್ಟಾ ಪ್ಲಸ್ ವಿಡಿಯೋ ಕೆವೈಸಿ ಉಳಿತಾಯ ಖಾತೆ
ಆಧಾರ್ ಹಾಗೂ ಪ್ಯಾನ್ ಮಾಹಿತಿ ಬಳಸಿ ವಿಡಿಯೋ ಕೆವೈಸಿ ಮೂಲಕ ಈ ಎಸ್ ಬಿಐ ಉಳಿತಾಯ ಖಾತೆಯನ್ನು ಆನ್ ಲೈನ್ ನಲ್ಲೇ ತೆರೆಯಬಹುದು. ಯಾವುದೇ ರೀತಿಯ ಪರಿಶೀಲನೆಗೆ ಅರ್ಜಿದಾರರ ಬ್ಯಾಂಕ್ ಶಾಖೆಗೆ ತೆರಳಬೇಕಾದ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟ ಭಾರತೀಯ ಶಿಕ್ಷಿತ ನಿವಾಸಿ ತೆರೆಯಬಹುದು. ಈ ಖಾತೆಗೆ ನಾಮಿನಿ ಕಡ್ಡಾಯ. ಎಸ್ ಬಿಐ ತ್ವರಿತ ಮಿಸ್ಡ್ ಕಾಲ್ ಸೌಲಭ್ಯ ಹಾಗೂ ಎಸ್ ಎಂಎಸ್ ಅಲರ್ಟ್ ಈ ಖಾತೆಗೆ ಇರಲಿದೆ. 

Follow Us:
Download App:
  • android
  • ios