Asianet Suvarna News Asianet Suvarna News

ಎಸ್ ಬಿಐ, ಪಿಎನ್ ಬಿ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ?

ಬ್ಯಾಂಕ್ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ನೀತಿ ಆಯೋಗ ಕೂಡ ಯಾವೆಲ್ಲ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಬೇಕು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

Bank Privatization SBI PNB to go private Here is list shared by NITI Aayog
Author
First Published Jan 6, 2023, 2:00 PM IST

ನವದೆಹಲಿ (ಜ.6): ಬ್ಯಾಂಕ್ ಗಳ ಖಾಸಗೀಕರಣಕ್ಕೆ ಸರ್ಕಾರಿ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಯಾವೆಲ್ಲ ಹಣಕಾಸು ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬೇಕು ಹಾಗೂ ಯಾವೆಲ್ಲವನ್ನು ಮಾರಾಟದಿಂದ ಹೊರಗಿಡಬೇಕು ಎಂಬ ಬಗ್ಗೆ ನೀತಿ ಆಯೋಗ ಪ್ರಕಟಣೆ ಹೊರಡಿಸಿದೆ. ಎರಡು ಬ್ಯಾಂಕ್ ಗಳು ಹಾಗೂ ಒಂದು ಜನರಲ್ ಇನ್ಯುರೆನ್ಸ್ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ಈಗ ಯೋಚಿಸುತ್ತಿದೆ. 2019ರ ಆಗಸ್ಟ್ ನಲ್ಲಿ ಸರ್ಕಾರ 10 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ  ವಿಲೀನಗೊಳಿಸುವ ಮೂಲಕ ದೇಶದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಸಂಖ್ಯೆಯನ್ನು 27ರಿಂದ 12ಕ್ಕೆ ಇಳಿಕೆ ಮಾಡಿತ್ತು. ಈ ಎಲ್ಲ ಬ್ಯಾಂಕ್ ಗಳನ್ನು ಖಾಸಗೀಕರಣ ಪ್ರಕ್ರಿಯೆಯಿಂದ ಹೊರಗಿಡುವಂತೆ ಹಣಕಾಸು ಸಚಿವಾಲಯ ಶಿಫಾರಸ್ಸು ಮಾಡಿದೆ. ಇನ್ನು ನೀತಿ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದ ಹೆಸರಿದೆ. ಆದರೆ, ಸರ್ಕಾರದ ಅಧಿಕಾರಿಗಳು ಈ ಹಣಕಾಸು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಯಾರೊಬ್ಬರೂ ಕೂಡ ಖಾಸಗೀಕರಣ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಹೊಂದಿಲ್ಲ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳು ಹಾಗೂ ಒಂದು ಜನರಲ್ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸೋದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಕುರಿತ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. 2022ನೇ ಹಣಕಾಸು ಸಾಲಿನ ಪ್ರಸಕ್ತ ಹೂಡಿಕೆ ಹಿಂತೆಗೆತದ ಗುರಿ 1.75 ಲಕ್ಷ ರೂ. ಎಂದು ಸರ್ಕಾರ ಘೋಷಿಸಿದೆ.

New Year: ಬಿರಿಯಾನಿ ಜೊತೆ ಹೆಚ್ಚು ಮಾರಾಟವಾಗಿದ್ದು ಕಾಂಡೋಮ್ಸ್ !

2021-22ರ ಬಜೆಟ್ ನಲ್ಲಿ ಹಣಕಾಸು ಸಚಿವೆ (Finance Minister ) ನಿರ್ಮಲಾ ಸೀತಾರಾಮನ್ (Nirmala Sitharaman), ದೇಶದ ಅಗತ್ಯ ನಾಲ್ಕು ಕಾರ್ಯತಂತ್ರದ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ (Privitisation) ಮಾಡುವುದಾಗಿ ಹೇಳಿದ್ದಾರೆ. ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ, ಸಾರಿಗೆ ಮತ್ತು ದೂರಸಂಪರ್ಕ ಹಾಗೂ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರದ ಪಿಎಸ್ ಇ (PSE) ಅಲ್ಲಿ ಹಂತಹಂತವಾಗಿ ಸರ್ಕಾರ ಹೂಡಿಕೆ ಹಿಂಪಡೆಯಲಿದೆ ಎಂದಿದ್ದರು.

ಈ ಹಿಂದೆ ದೇನಾ ಬ್ಯಾಂಕು ಹಾಗೂ ವಿಜಯಾ ಬ್ಯಾಂಕುಗಳು (Vijaya Bank) ಬ್ಯಾಂಕ್‌ ಆಫ್‌ ಬರೋಡಾದಲ್ಲಿ (Bank of Baroda), ಓರಿಯಂಟಲ್‌ ಬ್ಯಾಂಕ್‌ (Oriental bank)ಹಾಗೂ ಯುನೈಟೆಡ್‌ ಬ್ಯಾಂಕುಗಳು (United Banks) ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಲ್ಲಿ (Punjab National Bank), ಸಿಂಡಿಕೇಟ್‌ ಬ್ಯಾಂಕು (Syndicate Bank) ಹಾಗೂ ಕೆನರಾ ಬ್ಯಾಂಕುಗಳು ( Canara Banks) ಇಂಡಿಯನ್‌ ಬ್ಯಾಂಕ್‌ನಲ್ಲಿ (Indian Bank), ಆಂಧ್ರಬ್ಯಾಂಕ್‌ (Andhra Bank) ಹಾಗೂ ಕಾರ್ಪೋರೆಷನ್‌ ಬ್ಯಾಂಕ್‌ಗಳು (Corporation Banks) ಯೂನಿಯನ್‌ ಬ್ಯಾಂಕ್‌ನಲ್ಲಿ (Union Bank) ವಿಲೀನವಾಗಿದ್ದವು. ಬ್ಯಾಂಕ್ ಗಳ ವಿಲೀನಕ್ಕೆ ಬ್ಯಾಂಕ್ ಉದ್ಯೋಗಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಕೂಡ. 

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದು ಓರ್ವ ಉದ್ಯಮಿ...!

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಸುರಕ್ಷಿತ ಹಾಗೂ ಅತ್ಯಂತ ನಂಬಿಕಾರ್ಹ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್ ಬಿಐಯ 2022ನೇ ಸಾಲಿನ ದೇಶದ ಸುರಕ್ಷಿತ ಹಾಗೂ ಅತ್ಯಂತ ನಂಬಿಕಾರ್ಹ ಬ್ಯಾಂಕ್ ಗಳ ಪಟ್ಟಿಯಲ್ಲಿ ಭಾರತದ ಮೂರು ಅತೀದೊಡ್ಡ ಬ್ಯಾಂಕ್ ಗಳಾದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಖಾಸಗಿ ವಲಯದ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಗಳು ಸೇರಿವೆ. ದೇಶದ ಕೆಲವು ಅತೀದೊಡ್ಡ ಹಾಗೂ ಅತ್ಯಂತ ಪ್ರಭಾವಿ ಹಣಕಾಸಿನ ಸಂಸ್ಥೆಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಸಂಸ್ಥೆಗಳ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಹಾಗೆಯೇ ಈ ಪಟ್ಟಿಯಲ್ಲಿರುವ ಬ್ಯಾಂಕ್ ಗಳಿಗೆ ಆರ್ ಬಿಐ ಒಂದು ಮಾನದಂಡವನ್ನು ಕೂಡ ನಿಗದಿಪಡಿಸಿದೆ. 

Follow Us:
Download App:
  • android
  • ios