Asianet Suvarna News Asianet Suvarna News

4.5 ಕೋಟಿ ವೀಕ್ಷಕರಿಗೆ ಝೀ, ಸ್ಟಾರ್‌, ಸೋನಿ ಕಟ್: ಹೈಕೋರ್ಟ್ ಮೊರೆ ಹೋದ ಕೇಬಲ್‌ ಆಪರೇಟರ್‌ ಸಂಘ..!

ಶುಲ್ಕ ಏರಿಕೆ ವಿವಾದ: 4.5 ಕೋಟಿ ಜನರಿಗೆ ಹಲವು ಚಾನೆಲ್‌ ಕಟ್‌ ಆಗಿದೆ. ಸ್ಟಾರ್‌, ಝೀ, ಸೋನಿ ಶೇ.15ರಷ್ಟು ದರ ಏರಿಸಿದ್ದು,  ಆಪರೇಟರ್ಸ್‌ ದರ ಏರಿಕೆಗೆ ಒಪ್ಪದ ಕಾರಣ ಚಾನೆಲ್‌ ಸೇವೆ ಸ್ಥಗಿತ ಮಾಡಲಾಗಿದೆ. 

star sony zee go off cable platforms over nto 3 0 pricing ash
Author
First Published Feb 19, 2023, 6:42 AM IST

ನವದೆಹಲಿ (ಫೆಬ್ರವರಿ 19, 2023): ಹೊಸ ದರ ನೀತಿ (ಎನ್‌ಟಿಒ) ಅನ್ವಯ ಟೀವಿ ಚಾನೆಲ್‌ಗಳು ಶೇ.15ರಷ್ಟು ಶುಲ್ಕ ಏರಿಕೆಗೆ ನಿರ್ಧಾರ ಮಾಡಿವೆ. ಆದರೆ ಇದರ ವಿರುದ್ಧ ಕೇಬಲ್‌ ಆಪರೇಟರ್‌ಗಳು ಸಿಡಿದೆದ್ದಿದ್ದು, ಶುಲ್ಕ ಹೆಚ್ಚಳಕ್ಕೆ ಸಮ್ಮತಿ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ, ಇದರ ವಿರುದ್ಧ ಕೇರಳ ಹೈಕೋರ್ಟ್‌ ಮೊರೆಗೂ ಹೋಗಿದ್ದು, ನಾಳೆ ವಿಚಾರಣೆ ನಡೆಯಲಿದೆ. ಆದರೆ ಅಷ್ಟರಲ್ಲೇ ದರ ಏರಿಕೆಗೆ ಒಪ್ಪಲಿಲ್ಲ ಎಂದು ಹೇಳಿ, ಡಿಸ್ನಿ ಸ್ಟಾರ್‌, ಝೀ ಎಂಟರ್‌ಟೇನ್‌ಮೆಂಟ್‌ ಹಾಗೂ ಸೋನಿ ಪಿಕ್ಚರ್ಸ್‌ನಂಥ ಕಂಪನಿಗಳು ಕೇಬಲ್‌ ಆಪರೇಟರ್‌ಗಳಿಗೆ ಚಾನೆಲ್‌ ಸೇವೆ ಸ್ಥಗಿತಗೊಳಿಸಿವೆ. ಇದರಿಂದಾಗಿ ದೇಶದ ಸುಮಾರು 4.5 ಕೋಟಿ ಕೇಬಲ್‌ ಟೀವಿ ವೀಕ್ಷಕರಿಗೆ ಝೀ, ಸ್ಟಾರ್‌ ಹಾಗೂ ಸೋನಿ ಅಡಿ ಬರುವ ಚಾನೆಲ್‌ಗಳ ಪ್ರಸಾರ ನಿಂತು ಹೋಗಿದೆ.

ಫೆಬ್ರವರಿಯಿಂದಲೇ ಜಾರಿಗೆ ಬರುವಂತೆ ಹೊಸ ದರ ನೀತಿಯಡಿ ಚಾನೆಲ್‌ಗಳು (Channels) ಶೇ.15ರಷ್ಟು ದರ ಹೆಚ್ಚಿಸಿ ದರ ಪರಿಷ್ಕರಿಸಿವೆ. ಇದಕ್ಕೆ ಸಮ್ಮತಿಸಬೇಕು ಎಂದು ಕೇಬಲ್‌ ಆಪರೇಟರ್‌ಗಳಿಗೆ (Cable Operators) ಇತ್ತೀಚೆಗೆ ಅವು ನೋಟಿಸ್‌ ಕೂಡ ನೀಡಿದ್ದವು. ಆದರೆ ಹೊಸ ಶುಲ್ಕ ನೀತಿ ಜಾರಿ ಮಾಡಿದರೆ ವೀಕ್ಷಕರಿಗೆ ಭಾರಿ ಹೊರೆ ಆಗಲಿದೆ. ದರವು ಶೇ.25 ರಿಂದ 35ರಷ್ಟು ಹೆಚ್ಚಲಿದೆ ಎಂದು ಕೇಬಲ್‌ ಆಪರೇಟರುಗಳ ಉನ್ನತ ಸಂಘವಾದ ಅಖಿಲ ಭಾರತ ಡಿಜಿಟಲ್‌ ಕೇಬಲ್‌ ಫೆಡರೇಶನ್‌ (All India Digital Cable Federation) ಹೇಳಿದೆ. ಅಲ್ಲದೆ, ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದೂ ಅದು ಹೇಳಿದೆ.

ಇದನ್ನು ಓದಿ: ಡಿಡಿ, ಆಕಾಶವಾಣಿಯ ಮೂಲಸೌಕರ್ಯ ಹೆಚ್ಚಳಕ್ಕೆ 2500 ಕೋಟಿ ರೂ. ಪ್ರಕಟ

ಇದರ ನಡುವೆ, ತಮ್ಮ ನೋಟಿಸ್‌ಗೆ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿ ಸ್ಟಾರ್‌ (Star), ಝೀ (Zee) ಹಾಗೂ ಸೋನಿ (Sony) ಕಂಪನಿಗಳು ತಮ್ಮ ಕಂಪನಿ ಅಡಿ ಬರುವ ಎಲ್ಲ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಳಿಸಿವೆ. ಇದರಿಂದ 4.5 ಕೋಟಿ ಜನರು ಈ ಚಾನೆಲ್‌ಗಳ ವೀಕ್ಷಣೆಯಿಂದ ವಂಚಿತರಾಗಿದ್ದಾರೆ.

ಹೀಗಾಗಿ ಹಳೆಯ ದರಗಳನ್ನೇ ಮುಂದುವರಿಸಲು ಕೋರಿ ಆಪರೇಟರುಗಳು ಕೇರಳ ಹೈಕೋರ್ಟ್‌ (Kerala High Court) ಮೊರೆ ಹೋಗಿದ್ದಾರೆ. ಈ ಸಂಬಂಧ ನಾಳೆ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮೋದಿ, ಸುಪ್ರೀಂ, ಚುನಾವಣಾ ಆಯೋಗದ ಬಗ್ಗೆ ಸುಳ್ಳು ಸುದ್ದಿ ಹರಡ್ತಿದ್ದ 3 ಯೂಟ್ಯೂಬ್ ಚಾನೆಲ್‌ ಪತ್ತೆಹಚ್ಚಿದ PIB..!

ಆದರೆ,  DTH ಕಂಪನಿಗಳು ತಾವೇ ಸ್ವಲ್ಪ ಹೊರೆ ಹೊತ್ತಿದ್ದು, ಚಂದಾದಾರರಿಗೆ ಕೇವಲ 5-9% ಹೆಚ್ಚಳವನ್ನು ವರ್ಗಾಯಿಸುತ್ತಾರೆ. ಈ ಮಧ್ಯೆ, ಕೇಬಲ್ ಉದ್ಯಮವು ಬೆಲೆ ಏರಿಕೆಗೆ ವಿರೋಧಿಸಿದ್ದು, ಮಲ್ಟಿ-ಸಿಸ್ಟಮ್-ಆಪರೇಟರ್‌ಗಳ (ಎಂಎಸ್‌ಒ) ಲಾಬಿ ಗುಂಪಿನ ಅಖಿಲ ಭಾರತ ಡಿಜಿಟಲ್‌ ಕೇಬಲ್‌ ಫೆಡರೇಶನ್‌ (ಎಐಡಿಸಿಎಫ್) ಈಗಾಗಲೇ ಎನ್‌ಟಿಒ 3.0 ವಿರುದ್ಧ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಮತ್ತು ಪ್ರಸಾರಕರು ನೀಡಿದ ಸಂಪರ್ಕ ಕಡಿತದ ಸೂಚನೆಗಳಿಂದ ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದೆ. ಈ ಸಂಬಂಧ ನ್ಯಾಯಾಲಯವು ಫೆಬ್ರವರಿ 20 ರಂದು ಅಂದರೆ ನಾಳೆ ವಿಚಾರಣೆಯನ್ನು ಪಟ್ಟಿ ಮಾಡಿದೆ.

DTH ಕಂಪನಿಗಳಿಗಿಂತ ಭಿನ್ನವಾಗಿ, MSO ಗಳು ಸ್ಥಳೀಯ ಕೇಬಲ್ ಆಪರೇಟರ್‌ಗಳ (LCOs) ಮೂಲಕ ಗ್ರಾಹಕರ ಮನೆಗಳಿಗೆ ಸಿಗ್ನಲ್‌ಗಳನ್ನು ಒದಗಿಸುತ್ತವೆ ಮತ್ತು ಹೀಗಾಗಿ ಅವರೊಂದಿಗೆ NCF ನ ಭಾಗವನ್ನು ಹಂಚಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮದ್ಯಪಾನ, ಡ್ರಗ್ಸ್, ಗನ್‌ಗಳನ್ನು ವೈಭವೀಕರಿಸುವ ಹಾಡು ಹಾಕಬೇಡಿ: ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿದ ಭಾರತೀಯ ಟೆಲಿಕಾಂ ಸೇವೆಗಳ ಕಾರ್ಯಕ್ಷಮತೆ ಸೂಚಕಗಳ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು ಕೇಬಲ್ ಚಂದಾದಾರರು ಜೂನ್ 2021 ರಲ್ಲಿ 46 ಮಿಲಿಯನ್‌ನಿಂದ ಸೆಪ್ಟೆಂಬರ್ 2021 ರಲ್ಲಿ 45.5 ಮಿಲಿಯನ್‌ಗೆ ಇಳಿದಿದ್ದಾರೆ. ಈಗ ಮತ್ತಷ್ಟು ಬೆಲೆ ಏರಿಕೆಯಾದರೆ, ಮತ್ತಷ್ಟು ಜನರು ಕೇಬಲ್‌ನಿಂದ ಡಿಟಿಎಚ್‌ಗೆ ಅಥವಾ ಓಟಿಟಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. 
 

Follow Us:
Download App:
  • android
  • ios