Asianet Suvarna News Asianet Suvarna News

Star Series Bank Note: ಸ್ಟಾರ್‌ ಸರಣಿಯದ್ದು ಕಾನೂನುಬದ್ಧ ನೋಟುಗಳು, ಆರ್‌ಬಿಐ ಸ್ಪಷ್ಟನೆ

ದೋಷಪೂರಿತವಾಗಿ ಮುದ್ರಿತವಾದ ನೋಟುಗಳ ಬದಲಿಯಾಗಿ ಇದನ್ನು ಪ್ರಿಂಟ್‌ ಮಾಡಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಸ್ಟಾರ್‌ (*) ಚಿಹ್ನೆ ಇರುವ ಬ್ಯಾಂಕ್‌ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ನಡುವೆ ಆರ್‌ಬಿಐ ಈ ಸ್ಪಷ್ಟನೆ ನೀಡಿದೆ.

Star Series Bank Notes are legal clarifies RBI san
Author
First Published Jul 27, 2023, 8:13 PM IST | Last Updated Jul 27, 2023, 8:13 PM IST

ನವದೆಹಲಿ (ಜು.27): ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟ್‌ಗಳು ಕಾನೂನುಬದ್ಧವಾಗಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಇತರ ನೋಟುಗಳಂತೆ ಅದನ್ನೂ ಕೂಡ ಲೀಗಲ್‌ ಟೆಂಡರ್‌ ಆಗಿ ಬಳಸಿಕೊಳ್ಳಬಹುದು ಎಂದು ಆರ್‌ಬಿಐ ಗುರುವಾರ ಸ್ಪಷ್ಟನೆ ನೀಡಿದೆ. ಬೇರೆಲ್ಲ ನೋಟುಗಳಲ್ಲಿ ಸಾಮಾನ್ಯವಾಗಿ ಮೂರು ಅಕ್ಷರಗಳ ಬಳಿಕ ನಂಬರ್‌ಗಳಿದ್ದರೆ, ಸ್ಟಾರ್‌ ಚಿಹ್ನೆಯ ನೋಟುಗಳಲ್ಲಿ ಸೀರಿಯಲ್‌ ನಂಬರ್‌ಗೂ ಮುನ್ನ * ಚಿಹ್ನೆ ಇದೆ. ಹಾಗಾಗಿ ಈ ನೋಟುಗಳ ಸಿಂಧುತ್ವದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಅನುಮಾನ ವ್ಯಕ್ತಪಡಿಸಿದರು. ಇದರ ಬೆನ್ನಲ್ಲಿಯೇ ಆರ್‌ಬಿಐ ಸ್ಪಷ್ಟ ನೀಡಿದ್ದು, ಅದು ಕಾನೂನುಬದ್ಧ ನೋಟುಗಳು ಎಂದು ಹೇಳಿದೆ.  ನಕ್ಷತ್ರ ಚಿಹ್ನೆಯು ನೋಟುಗಳ ಅರ್ಥ, ಅದನ್ನು ಪ್ರಿಟಿಂಗ್‌ ವೇಳೆ ಬದಲಿ ಮಾಡಿದ ಅಥವಾ ಮರುಮುದ್ರಣ ಮಾಡಿದ ನೋಟು ಎಂದು ಗುರುತಿಸುತ್ತದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಿಂಟಿಗ್‌ ಮಾಡುವಾಗ ದೋಷವಾದಾಗ ಅಥವಾ ತಪ್ಪಾಗಿ ಪ್ರಿಂಟ್‌ ಆದಾಗ ಅಂಥಾ ನೋಟುಗಳ ಮರುಮುದ್ರಣ ಮಾಡಲಾಗುತ್ತದೆ. ಆದರೆ, ಅದೇ ಸೀರಿಯಲ್‌ ನಂಬರ್‌ಗಳ ಮುನ್ನ * ಚಿಹ್ನೆ ಹಾಕಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

100 ಸರಣಿ ಸಂಖ್ಯೆಯ ಕರೆನ್ಸಿ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಯುಕ್ತವಾಗಿ ಮುದ್ರಿತ ನೋಟುಗಳಿಗೆ ಬದಲಿಯಾಗಿ ಬಳಸಲಾಗುವ ಬ್ಯಾಂಕ್‌ನೋಟಿನ ಸಂಖ್ಯೆಯ ಪ್ಯಾಕೆಟ್‌ನಲ್ಲಿ ನಕ್ಷತ್ರ ಚಿಹ್ನೆಯ ನೋಟ್‌ಗಳನ್ನು ಸೇರಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಆರ್‌ಬಿಐ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಪ್ರಕಾರ, ಆಗಸ್ಟ್ 2006 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ತಾಜಾ ಬ್ಯಾಂಕ್‌ನೋಟುಗಳನ್ನು ಕ್ರಮವಾಗಿ ಸಂಖ್ಯೆ ಮಾಡಲಾಗಿದೆ. ಈ ಪ್ರತಿಯೊಂದು ಟಿಪ್ಪಣಿಗಳು ಅಂಕಿಗಳು ಮತ್ತು ಅಕ್ಷರಗಳನ್ನು ಒಳಗೊಂಡಿರುವ ಪೂರ್ವಪ್ರತ್ಯಯದೊಂದಿಗೆ ವಿಶಿಷ್ಟವಾದ ಸರಣಿ ಸಂಖ್ಯೆಯನ್ನು ಹೊಂದಿವೆ. ನೋಟುಗಳನ್ನು 100 ನೋಟುಗಳಿರುವ ಪ್ಯಾಕೆಟ್‌ಗಳಲ್ಲಿ ನೀಡಲಾಗುತ್ತದೆ.

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್‌ ಲೋನ್‌ ರೈಟ್‌ ಆಫ್‌!

100 ಸರಣಿ ಸಂಖ್ಯೆಯ ಬ್ಯಾಂಕ್ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಪೂರಿತವಾಗಿ ಮುದ್ರಿತ ನೋಟುಗಳನ್ನು ಬದಲಿಸಲು ಬ್ಯಾಂಕ್ ಸ್ಟಾರ್ ಸರಣಿ ಸಂಖ್ಯೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ನಕ್ಷತ್ರ ಚಿಹ್ನೆಯ ನೋಟುಗಳು ಇತರ ನೋಟುಗಳಷ್ಟೇ ಕಾನೂನುಬದ್ಧ. ಆದರೆ ಪೂರ್ವಪ್ರತ್ಯಯ ಮತ್ತು ಸರಣಿ ಸಂಖ್ಯೆಯ ನಡುವಿನ ಜಾಗದಲ್ಲಿ  ಹೆಚ್ಚುವರಿ ಅಕ್ಷರವಾಗಿ ಸ್ಟಾರ್‌ ಚಿಹ್ನೆಯನ್ನು ಹೊಂದಿರುತ್ತದೆ.

2000 ರೂ. ನೋಟು ಖರ್ಚು ಮಾಡೋಕೆ ಜನ ಏನೇನೆಲ್ಲ ಮಾಡ್ತಿದ್ದಾರೆ? ಸಮೀಕ್ಷೆ ವರದಿ ಹೇಳಿದ್ದೀಗೆ..

Latest Videos
Follow Us:
Download App:
  • android
  • ios