* ಸ್ಟ್ಯಾಂಡರ್ಡ್ ಕಾರ್ಪೆಟ್ಸ್ ಸಂಸ್ಥೆಯ ಹೊಸ ಸಾಹಸ* ಒಂದೇ ಸೂರಿನಡಿ ಎಲ್ಲ ಉತ್ಪಾದನೆ* ನೆಲಹಾಸು, ಹುಲ್ಲಿನ ಹಾಸು, ಕಾರ್ಪೆಟ್ಸ್ ರಫ್ತು* ವಿಶ್ವದ 60 ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ  ಸಂಸ್ಥೆ

ದುಬೈ(ಮಾ. 31) ಒಂದು ಸುಂದರ ಮನೆ (House) ನಿರ್ಮಾಣ ಪ್ರತಿಯೊಬ್ಬನ ಕನಸು. ಮನೆ ಅಂದ ಮೇಲೆ ಅದಕ್ಕೆ ಅಡಿಪಾಯದಿಂದ ಹಿಡಿದು ಸುಣ್ಣ-ಬಣ್ಣ ಬಳಿಯುವವರೆಗೂ ಹಲವಾರು ಜವಾಬ್ದಾರಿಗಳು ಇರುತ್ತವೆ. ಮನೆಗೆ ಹಾಕುವ ನೆಲಹಾಸು (carpets) ಸಹ ಅಷ್ಟೇ ಮುಖ್ಯವಾಗುತ್ತದೆ.

ಯುಎಇಯ ಅತಿದೊಡ್ಡ ಉತ್ಪಾದಕ ಸಂಸ್ಥೆ ಎಂದು ಹೆಸರು ಸಂಪಾದನೆ ಮಾಡಿಕೊಂಡಿರುವ ಸ್ಟ್ಯಾಂಡರ್ಡ್ ಕಾರ್ಪೆಟ್ಸ್ (Standard Carpets Pioneers UAE) ಬೋರ್ಡ್ ರೂಂ ಕಾರ್ಪೆಟ್ಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

ಸ್ಟ್ಯಾಂಡರ್ಡ್ ಕಾರ್ಪೆಟ್ಸ್ ಪಯೋನಿಯರ್ಸ್ ಯುಎಇ ದುಬೈ (Dubai)ಇಂಡಸ್ಟ್ರಿಯಲ್ ಸಿಟಿಯಲ್ಲಿ ಅತಿದೊಡ್ಡ ಫ್ಲೋರಿಂಗ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದು ಒಂದೇ ಸೂರಿನಡಿ ಎಲ್ಲವೂ ಸಿಗಲಿದೆ. 2023 ರಲ್ಲಿ ಈ ಫ್ಲಾಂಟ್ ಪೂರ್ಣಗೊಳ್ಳಲಿದ್ದು 1.6 ಮಿಲಿಯನ್ ಚದರ ಅಡಿಗಳನ್ನು ಒಳಗೊಂಡಿರುವ ಹೊಸ ಉತ್ಪಾದನಾ ಘಟಕ ವಿಶ್ವದಲ್ಲೇ ಅಗ್ರಮಾನ್ಯವಾಗಲಿದೆ.

ಯುದ್ಧದ ಎಫೆಕ್ಟ್‌: ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಆಮದಿನಲ್ಲಿ ಶೇ.25ರಷ್ಟುಕೊರತೆ

ಈ ಘಟಕ ಸ್ಥಾಪನೆ ನಂತರ ಸ್ಟ್ಯಾಂಡರ್ಡ್ ಕಾರ್ಪೆಟ್‌ಗಳ ಉತ್ಪಾದನಾ ಸಾಮರ್ಥ್ಯ ಶೇ. 40 ಹೆಚ್ಚಾಗುತ್ತದೆ, ಮೊದಲ ಹಂತದ ಅಭಿವೃದ್ಧಿಯಲ್ಲಿ ತಿಂಗಳಿಗೆ 400 ಟನ್ ನೂಲು ಉತ್ಪಾದನೆ ಸಾಧ್ಯವಾಗಲಿದೆ.

ಈಗ ಇರುವ ಘಟಕ 1.3 ಮಿಲಿಯನ್ ಚದರ ಅಡಿ ಇದ್ದು ಪ್ರತಿ ತಿಂಗಳು 18 ಮಿಲಿಯನ್ ಸ್ಕಾರ್ ಫೀಟ್ ನೆಲಹಾಸನ್ನು ಉತ್ಪಾದಿಸುತ್ತದೆ. ಹೊಸ ಘಟಕ ಉತ್ಪಾದನೆಯನ್ನು ಡಬಲ್ ಮಾಡಲಿದೆ. ಎರಡುನ ಹಂತದಲ್ಲಿ ಹೊಸ ಘಟಕ ಪರಿಪೂರ್ಣವಾಗಲಿದೆ. ಮೊದಲ ಹಂತವು ಗೋಡೆಯಿಂದ ಗೋಡೆ ಕಾರ್ಪೆಟ್ ಉತ್ಪಾದನೆಗೆ ಆದ್ಯತೆ ನೀಡಲಿದೆ. ಕೃತಕ ಹುಲ್ಲು ನೆಲಹಾಸು ಶೇ. 50 ಏರಿಕೆ ಕಾಣಲಿದೆ. ಎರಡನೇ ಹಂತವು ಹೊಸ ಉತ್ಪನ್ನಗಳ ಪರಿಚಯವನ್ನು ಒಳಗೊಂಡಿರುತ್ತದೆ" ಎಂದು ಸ್ಟ್ಯಾಂಡರ್ಡ್ ಕಾರ್ಪೆಟ್ಸ್‌ನ ಅಧ್ಯಕ್ಷ ಗುಲು ವೇನಿ ತಿಳಿಸಿದ್ದಾರೆ.

ಹೊಸ ಅತ್ಯಾಧುನಿಕ ಸೌಲಭ್ಯವು ಉತ್ಪಾದನೆಯ ಎಲ್ಲಾ ಹಂತಗಳನ್ನು ಒಂದೇ ಸೂರಿನಡಿ ತರುವುದು ಮತ್ತು ಉತ್ಪನ್ನಗಳ ಗುಣಮಟ್ಟ ಏರಿಕೆ ಗುರಿ ಹೊಂದಿದೆ. ವಿಶ್ವಾಸ ಅರ್ಹತೆಯೊಂದಿಗೆ ಕಂಪನಿ ಸುಮಾರು 60 ದೇಶಗಳಿಗೆ ರಫ್ತು ಮಾಡುತ್ತಿದೆ ಮತ್ತು ಫ್ಲೋರಿಂಗ್‌ನ ಪ್ರಮುಖ ಜಾಗತಿಕ ಪೂರೈಕೆದಾರನಾಗುವ ಗುಡಿಯನ್ನು ಇಟ್ಟುಕೊಂಡಿದೆ.. ಸ್ಟ್ಯಾಂಡರ್ಡ್ ಕಾರ್ಪೆಟ್‌ಗಳ ಐದು ದೊಡ್ಡ ಮಾರುಕಟ್ಟೆಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಸೌದಿ ಅರೇಬಿಯಾ ಸೇರಿವೆ.

ಸ್ಟ್ಯಾಂಡರ್ಡ್ ಕಾರ್ಪೆಟ್ ಸಂಸ್ಥೆ 1997 ರಲ್ಲಿ ಶಾರ್ಜಾದಲ್ಲಿನ ಸಣ್ಣ ಬಾಡಿಗೆ ಜಾಗದಲ್ಲಿ ಆರಂಭವಾಯಿತು. ದೇಶೀಯ ಮಾರುಕಟ್ಟೆಗೆ ಗೋಡೆಯಿಂದ ಗೋಡೆಗೆ ಕಾರ್ಪೆಟ್ ಅನ್ನು ಪೂರೈಸುತ್ತ ಅಭಿವೃದ್ಧಿ ಕಡೆ ಹೆಜ್ಜೆ ಹಾಕಿತು. ಗ್ರಾಹಕರನ್ನೇ ಪಾಲುದಾರರನ್ನಾಗಿ ಮಾಡಿಕೊಳ್ಳಲು ಕಂಪನಿ ಚಿಂತನೆ ನಡೆಸಿತು. ಖಾಸಗಿ ವಲಯದಲ್ಲಿ ನವೀಕರಿಸಬಹುದಾದ ಶಕ್ತಿಯ ಅತಿದೊಡ್ಡ ಉತ್ಪಾದಕರಾಗುವತ್ತ ಸಂಸ್ಥೆ ಯೋಚನೆ ಮಾಡಿತು. ಸೌರ ವಿದ್ಯುತ್ ಗೆ ಮೊದಲ ಆದ್ಯತೆ, ಕಚ್ಚಾ ವಸ್ತುಗಳ ಸಂಪೂರ್ಣ ಮರುಬಳಕೆ, ಶಕ್ತಿ ಮತ್ತು ಇಂಧನದ ಪರಪೂರ್ಣ ಪ್ರಯೋಜನ, ವೇಸ್ಟ್ ಮ್ಯಾನೇಜ್ ಮೆಂಟ್ ಅಳವಡಿಸಿಕೊಂಡು ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡಿಕೊಂಡು ಬಂದಿದೆ.