ಖ್ಯಾತ ಕ್ರೀಡಾದಿರಿಸುಗಳ ಉತ್ಪಾದಕ ಕಂಪನಿ ತನ್ನ ಟ್ರೇಡ್‌ಮಾರ್ಕ್ ಆದಂತಹ 3 ಗೆರೆಗಳನ್ನು ಕಳೆದುಕೊಂಡಿದೆ. ಐಷಾರಾಮಿ ಬಟ್ಟೆಗಳ ತಯಾರಕ ಕಂಪನಿ ಥಾಮ್‌ ಬ್ರೌನ್ಸ್‌ ವಿರುದ್ಧ ನಡೆಸಿದ ಟ್ರೇಡ್‌ಮಾರ್ಕ್ ಯುದ್ಧದಲ್ಲಿ ಅಡಿಡಾಸ್‌ ಸೋತಿದೆ.

ನ್ಯೂಯಾರ್ಕ್: ಖ್ಯಾತ ಕ್ರೀಡಾದಿರಿಸುಗಳ ಉತ್ಪಾದಕ ಕಂಪನಿ ತನ್ನ ಟ್ರೇಡ್‌ಮಾರ್ಕ್ ಆದಂತಹ 3 ಗೆರೆಗಳನ್ನು ಕಳೆದುಕೊಂಡಿದೆ. ಐಷಾರಾಮಿ ಬಟ್ಟೆಗಳ ತಯಾರಕ ಕಂಪನಿ ಥಾಮ್‌ ಬ್ರೌನ್ಸ್‌ ವಿರುದ್ಧ ನಡೆಸಿದ ಟ್ರೇಡ್‌ಮಾರ್ಕ್ ಯುದ್ಧದಲ್ಲಿ ಅಡಿಡಾಸ್‌ ಸೋತಿದೆ. ಬ್ರೌನ್‌ ತನ್ನ ಬಟ್ಟೆಗಳಲ್ಲಿ 4 ಗೆರೆ ಗಳನ್ನು ಬಳಕೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಅಡಿಡಾಸ್‌ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೇ ಇದರಿಂದ ತನ್ನ ಬ್ರಾಂಡ್‌ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ 63 ಕೋಟಿ ರು. ಪರಿಹಾರವನ್ನೂ ಕೊಡಿಸಬೇಕು ಎಂದು ಕಂಪನಿ ಕೇಳಿತ್ತು. ಆದರೆ ಬ್ರೌನ್‌ (Thom Brownes)ಪರವಾಗಿ ತೀರ್ಪು ನೀಡಿದ ಕೋರ್ಟ್, ಅಡಿಡಾಸ್‌ಗೆ ಗೆರೆಗಳನ್ನು ಬಳಕೆ ಮಾಡದಂತೆ ಸೂಚಿಸಿದೆ.

ಎರಡೂ ಬ್ರಾಂಡ್‌ಗಳ ನಡುವೆ ಟ್ರೇಡ್‌ಮಾರ್ಕ್ (trademark) ಸಮಸ್ಯೆ ಉಂಟಾಗಲು ಸಾಧ್ಯವೇ ಇಲ್ಲ. ಏಕೆಂದರೆ ಎರಡೂ ಸಹ ಬೇರೆ ಬೇರೆ ಗ್ರಾಹಕರಿಗೆ, ಬೇರೆ ಬೇರೆ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಅಲ್ಲದೇ ಎರಡು ಬ್ರಾಂಡ್‌ಗಳಲ್ಲಿನ ಬೆಲೆಯಲ್ಲೂ ಸಾಕಷ್ಟು ವ್ಯತ್ಯಾಸವಿದೆ ಎಂದು ಬ್ರೌನ್‌ ವಾದಿಸಿತ್ತು. 2008ರಿಂದ ಇಲ್ಲಿಯವರೆಗೆ ಟ್ರೇಡ್‌ಮಾರ್ಕ್‌ಗೆ ಅಡಿಡಾಸ್‌ 200ಕ್ಕೂ ಹೆಚ್ಚು ರಾಜಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೋರ್ಟ್‌ನಲ್ಲಿ ವಾದಿಸುತ್ತಿದೆ.

ಬರೋಬ್ಬರಿ 1 ಲಕ್ಷ ರೂ. ಬೆಲೆಬಾಳುವ ಛತ್ರಿಯಿದು, ಆದ್ರೆ ಮಳೆಗಾಲದಲ್ಲಿ ಬಳಸೋಕಾಗಲ್ಲ !

ಟೀಂ ಇಂಡಿ​ಯಾ ಕಿಟ್ ಪ್ರಾಯೋಜಕತ್ವಕ್ಕೆ ಪೂಮಾ-ಆ್ಯಡಿ​ಡಾಸ್‌ ಪೈಪೋಟಿ..?