Asianet Suvarna News Asianet Suvarna News

ಟೀಂ ಇಂಡಿ​ಯಾ ಕಿಟ್ ಪ್ರಾಯೋಜಕತ್ವಕ್ಕೆ ಪೂಮಾ-ಆ್ಯಡಿ​ಡಾಸ್‌ ಪೈಪೋಟಿ..?

ಟೀಂ ಇಂಡಿಯಾ ಕಿಟ್ ಪ್ರಾಯೋಜಕತ್ವ ನವೀಕರಿಸಲು ನೈಕಿ ಕಂಪನಿ ಹಿಂದೇಟು ಹಾಕಿದ ಬೆನ್ನಲ್ಲೇ ಪೂಮಾ ಹಾಗೂ ಆ್ಯಡಿ​ಡಾಸ್‌ ಇದರ ಲಾಭ ಪಡೆಯಲು ಮುಂದಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

German Companies Puma Adidas look to fight it out for Team India Kit Sponsorship
Author
New Delhi, First Published Aug 10, 2020, 6:59 PM IST

ನವ​ದೆ​ಹ​ಲಿ(ಆ.10): ಭಾರತ ಕ್ರಿಕೆಟ್‌ ತಂಡದ ಕಿಟ್‌ ಪ್ರಾಯೋ​ಜ​ಕ​ತ್ವವನ್ನು ಜರ್ಮ​ನಿಯ ಪ್ರತಿ​ಷ್ಠಿತ ಕ್ರೀಡಾ ಪರಿ​ಕರಗಳ ಸಂಸ್ಥೆ ಪೂಮಾ ಖರೀ​ದಿ​ಸುವ ಸಾಧ್ಯತೆ ಇದೆ. ಪ್ರಾಯೋ​ಜ​ಕತ್ವಕ್ಕೆ ಬಿಸಿ​ಸಿಐ ಟೆಂಡರ್‌ ಆಹ್ವಾ​ನಿ​ಸಿದ್ದು, ಪೂಮಾ ಅರ್ಜಿ ಪಡೆ​ದು​ಕೊಂಡಿದೆ. 

ಪೂಮಾ ಸಂಸ್ಥೆ ಬಿಡ್‌ ಸಲ್ಲಿ​ಸಲು ಆಸಕ್ತಿ ವಹಿ​ಸಿದೆ ಎಂದು ಬಿಸಿ​ಸಿಐನ ಹಿರಿಯ ಅಧಿ​ಕಾ​ರಿ​ಯೊಬ್ಬರು ತಿಳಿ​ಸಿದ್ದಾರೆ. ನೈಕಿ ಸಂಸ್ಥೆ 2016ರಿಂದ 2020ರ ವರೆ​ಗಿ​ನ ಅವ​ಧಿಗೆ 370 ಕೋಟಿ ರುಪಾಯಿ ಮೌಲ್ಯದ ಒಪ್ಪಂದ ಮಾಡಿ​ಕೊಂಡಿತ್ತು. ಇತ್ತೀ​ಚೆ​ಗಷ್ಟೇ, ಒಪ್ಪಂದ ಮುಕ್ತಾ​ಯಗೊಂಡಿದ್ದು ನವೀ​ಕ​ರಿ​ಸದೆ ಇರಲು ಸಂಸ್ಥೆ ನಿರ್ಧ​ರಿ​ಸಿತ್ತು. 

ಕೊರೋನಾ ಆರ್ಥಿಕ ಸಂಕಷ್ಟದ ನೆಪ ಮುಂದಿ​ಟ್ಟು​ಕೊಂಡು ನೈಕಿ ಸಂಸ್ಥೆ ಹೊಸ​ದಾಗಿ ಬಿಡ್‌ ಸಲ್ಲಿ​ಸಲು ಚಿಂತಿ​ಸಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ. ಇದೇ ವೇಳೆ, ಜರ್ಮ​ನಿಯ ಮತ್ತೊಂದು ಕ್ರೀಡಾ ಬ್ರ್ಯಾಂಡ್‌ ಆ್ಯಡಿ​ಡಾಸ್‌ ಸಹ ಪ್ರಾಯೋ​ಜ​ಕತ್ವ ಹಕ್ಕಿಗೆ ಪೈಪೋಟಿ ನಡೆ​ಸ​ಬ​ಹು​ದು ಎನ್ನ​ಲಾ​ಗಿದೆ.

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

2016ರಲ್ಲಿ ನೈಕಿ ಕಂಪನಿಯು ಬಿಸಿಸಿಐ ಜತೆ 5 ವರ್ಷದ ಅವಧಿಗೆ 370 ಕೋಟಿ ರುಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಇದೇ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ. ಈ ಒಪ್ಪಂದದ್ವಯ ನೈಕಿ ಕಂಪನಿಯು ಟೀಂ ಇಂಡಿಯಾ ಆಡುವ ಪ್ರತಿಪಂದ್ಯಕ್ಕೆ 87,34,000 ರುಪಾಯಿಗಳನ್ನು ನೀಡುತಿತ್ತು ಎನ್ನಲಾಗಿದೆ.

ಆ್ಯಡಿಡಾಸ್ ಹಾಗೂ ಪೂಮಾ ಉತ್ಫನ್ನಕ್ಕೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಜತೆಗೆ ಪೂಮಾ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಒಪ್ಪಂದ ಮಾಡಿಕೊಂಡಿದೆ. ಇನ್ನು ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ಆ್ಯಡಿಡಾಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios