ಷೇರು ವರ್ಗಾವಣೆ ಪ್ರಕರಣಎಲ್ಲಾ ವಿವಾದಗಳ ಪೂರ್ಣ ಇತ್ಯರ್ಥಕ್ಕಾಗಿ ಆಫರ್600 ಕೋಟಿ ರೂಪಾಯಿ ನಗದು ಹಣ ನೀಡಲು ಮುಂದಾದ ಸ್ಪೈಸ್ ಜೆಟ್
ನವದೆಹಲಿ (ಫೆ. 10): ಷೇರು ವರ್ಗಾವಣೆ ಪ್ರಕರಣವನ್ನು (Share Transfer Case) ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಇರಾದೆ ತೋರಿರುವ ದೇಶೀಯ ಏರ್ ಲೈನ್ಸ್ ಸಂಸ್ಥೆ ಸ್ಪೈಸ್ ಜೆಟ್ (Domestic airline Spicejet), ತನ್ನ ಮಾಜಿ ಪ್ರವರ್ತಕರಾದ ಕಲಾನಿಧಿ ಮಾರನ್ (Kalanithi Maran) ಹಾಗೂ ಅವರ ಕಂಪನಿ ಕೆಎಎಲ್ ಏರ್ ವೇಸ್ ಗೆ (KAL Airways) 600 ಕೋಟಿ ರೂಪಾಯಿ ಹಣವನ್ನು ನಗದು ರೂಪದಲ್ಲಿ ನೀಡುವ ಆಫರ್ ನೀಡಿದೆ. ಇದಕ್ಕೆ ಪ್ರತಿಯಾಗಿ ಕಂಪನಿಯ ಜೊತೆಗಿರುವ ಎಲ್ಲಾ ವಿವಾದಗಳ ಸಂಪೂರ್ಣ ಹಾಗೂ ಅಂತಿಮ ಇತ್ಯರ್ಥ ಮಾಡಬೇಕು ಎಂದು ಕೇಳಿಕೊಂಡಿದೆ. ಇನ್ನೊಂದೆಡೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಕಲಾನಿಧಿ ಮಾರನ್ ಹಾಗೂ ಕೆಎಎಲ್ ಏರ್ ವೇಸ್ ಗೆ ಸ್ಪೈಸ್ ಜೆಟ್ ನೀಡುತ್ತಿರುವ ಸೆಟಲ್ ಮೆಂಟ್ ಆಫರ್ ಅನ್ನು ಪರಿಶೀಲನೆ ಮಾಡುವಂತೆ ಗುರುವಾರ ಹೇಳಿದೆ.
ಮಧ್ಯಸ್ಥಿಕೆಯಲ್ಲಿ ನೀಡಲಾದ 578 ಕೋಟಿ ರೂಪಾಯಿಗಳ ಮೂಲ ಮೊತ್ತದಲ್ಲಿ ಏರ್‌ಲೈನ್ ಈಗಾಗಲೇ 308 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸಿದೆ ಮತ್ತು 270 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿಯನ್ನು ಠೇವಣಿ ಮಾಡಿದೆ ಎಂದು ಸ್ಪೈಸ್‌ಜೆಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು. ಬ್ಯಾಂಕ್ ಗ್ಯಾರಂಟಿಗೆ ಸಮಾನವಾಗಿರುವ 270 ಕೋಟಿ ರೂಪಾಯಿಗಳನ್ನು ಸ್ಪೈಸ್ ಜೆಟ್ ಸಂಸ್ಥೆ ನಗದು ರೂಪದಲ್ಲಿ ಪಾವತಿಸಲು ಸಿದ್ಧವಿದೆ. ಅದರೊಂದಿಗೆ ಇನ್ನೂ 22 ಕೋಟಿ ರೂಪಾಯಿ ಮೊತ್ತವನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಒಟ್ಟಾರೆ 600 ಕೋಟಿ ರೂಪಾಯಿ ನೀಡಲು ಸಿದ್ಧವಿದೆ. ಆದರೆ, ಅದಕ್ಕಾಗಿ ಎರಡೂ ಪಕ್ಷಗಳ ನಡುವಿನ ಎಲ್ಲಾ ವಿವಾದಗಳ ಪೂರ್ಣ ಹಾಗೂ ಅಂತಿಮ ಇತ್ಯರ್ಥವಾಗಬೇಕು ಎಂದು ಬಯಸುತ್ತದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಮಾರನ್ ಪರವಾಗಿ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರಿಗೆ ಸ್ಪೈಸ್‌ಜೆಟ್‌ನ ನೀಡಿರುವ 300 ಕೋಟಿ ರೂಪಾಯಿಗಳ ಹೆಚ್ಚಿನ ಹಣ ಇದಕ್ಕೆ ಪ್ರತಿಯಾಗಿ ಸಂಪೂರ್ಣ ಪ್ರಕರಣದ ಇತ್ಯರ್ಥದ ಆಫರ್ ಅನ್ನು ಒಪ್ಪಲು ಸಿದ್ಧರಿದ್ದಾರೆಯೇ ಎಂದು ಕೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿದೆ.
ಸಾಂಬ್ರಾದಲ್ಲಿ ತಪ್ಪು ರನ್ ವೇನಲ್ಲಿ ವಿಮಾನ ಲ್ಯಾಂಡ್! ಪೈಲಟ್ ವಜಾ
ಸ್ಪೈಸ್‌ಜೆಟ್‌ನ ಆರ್ಥಿಕ ಸಂಕಷ್ಟಗಳು
ತನ್ನ ಹಿಂದಿನ ಪ್ರಮೋಟರ್ ಗಳಿಂದ ಕಾನೂನು ವಿವಾದ ಸ್ಪೈಸ್‌ಜೆಟ್‌ನ ಏಕೈಕ ಸಮಸ್ಯೆಯಲ್ಲ. ಹಣಕಾಸು ಸಂಸ್ಥೆ ಕ್ರೆಡಿಟ್ ಸ್ಯೂಸ್ ಎಜಿಯಿಂದ (Credit Suisse AG) ವಿಮಾನಯಾನ ಸಂಸ್ಥೆಯು ಕ್ರಮವನ್ನು ಎದುರಿಸುತ್ತಿದೆ. ವಿಮಾನದ ಎಂಜಿನ್‌ಗಳು ಮತ್ತು ಘಟಕಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆಗಾಗಿ ಸಂಗ್ರಹಿಸಿದ 24 ಮಿಲಿಯನ್ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಬಿಲ್‌ಗಳನ್ನು ಪಾವತಿಸಲು ಸ್ಪೈಸ್‌ಜೆಟ್ ತನ್ನ ಬದ್ಧತೆಯನ್ನು ಗೌರವಿಸಲು ವಿಫಲವಾಗಿದೆ ಎಂದು ಕ್ರೆಡಿಟ್ ಸ್ಯೂಸ್ ಎಜಿ ಆರೋಪಿಸಿದೆ.
SpiceJet air hostess: ಲೇಜಿ ಲಾಡ್ ಹಾಡಿಗೆ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಗಗನಸಖಿಯ ವಿಡಿಯೋ ವೈರಲ್
ಈ ವಿಚಾರವಾಗಿ ಸ್ವಿಸ್ ಹಣಕಾಸು ಸಂಸ್ಥೆ ಮದ್ರಾಸ್ ಹೈಕೋರ್ಟ್ (Madras High Court ) ಮೆಟ್ಟಿಲೇರಿತ್ತು. ಸ್ಪೈಸ್ ಜೆಟ್ ವಿರುದ್ಧವಾಗಿ ತೀರ್ಪು ನೀಡಿದ್ದ ಹೈಕೋರ್ಟ್, ವಿಮಾನಯಾನ ಸಂಸ್ಥೆಯನ್ನು ಮುಚ್ಚಲು ಆದೇಶ ನೀಡಿದ್ದು, ಮಾತ್ರವಲ್ಲದೆ ಕಂಪನಿಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಸ್ಪೈಸ್‌ಜೆಟ್, ಇದೀಗ, ಕ್ರೆಡಿಟ್ ಸ್ಯೂಸ್ ಎಜಿ ಜೊತೆಗಿನ ತನ್ನ ಹಣಕಾಸಿನ ವಿವಾದವನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ನಿಂದ ಮೂರು ವಾರಗಳ ಸ್ಟೇ ಆರ್ಡರ್ ಪಡೆಯುವಲ್ಲಿ ಯಶಸ್ವಿಯಾಗಿದೆ.
