Asianet Suvarna News Asianet Suvarna News

80 ಪೈಲಟ್‌ಗಳನ್ನು 3 ತಿಂಗಳು ವೇತನ ನೀಡದೇ ಮನೆಗೆ ಕಳುಹಿಸಲು SpiceJet ಸಿದ್ಧತೆ

ಸ್ಪೈಸ್ ಜೆಟ್ ಏರ್‌ವೇಸ್‌ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ರಜೆಯಲ್ಲಿ ಕಳುಹಿಸಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಸ್ಪೈಸ್ ಜೆಟ್ ಏರ್‌ವೇಸ್‌ ಹೇಳಿಕೊಂಡಿದೆ. ಈಗಾಗಲೇ ಸಾಕಷ್ಟು ಪೈಲಟ್‌ಗಳನ್ನು ಸಂಸ್ಥೆ ಹೊಂದಿದ್ದು, ಈ ಕಾರಣಕ್ಕೆ ಹೆಚ್ಚಿರುವ ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ಮನೆಗೆ ಕಳುಹಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ.

Spice jet planes to send its 80 pilots to long leave Without Pay For 3 Months source akb
Author
First Published Sep 20, 2022, 5:55 PM IST

ಮುಂಬೈ: ಸ್ಪೈಸ್ ಜೆಟ್ ಏರ್‌ವೇಸ್‌ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ರಜೆಯಲ್ಲಿ ಕಳುಹಿಸಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಸ್ಪೈಸ್ ಜೆಟ್ ಏರ್‌ವೇಸ್‌ ಹೇಳಿಕೊಂಡಿದೆ. ಈಗಾಗಲೇ ಸಾಕಷ್ಟು ಪೈಲಟ್‌ಗಳನ್ನು ಸಂಸ್ಥೆ ಹೊಂದಿದ್ದು, ಈ ಕಾರಣಕ್ಕೆ ಹೆಚ್ಚಿರುವ ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ಮನೆಗೆ ಕಳುಹಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಕೆಲ ಮೂಲಗಳ ಪ್ರಕಾರ ಬೋಯಿಂಗ್ 737 ವಿಭಾಗದ 40 ಪೈಲಟ್‌ಗಳು ಹಾಗೂ Q400 ವಿಭಾಗದ 40 ಪೈಲಟ್‌ಗಳು ಹೀಗೆ ಒಟ್ಟು 80 ಪೈಲಟ್‌ಗಳನ್ನು ಹೀಗೆ ಧೀರ್ಘ ರಜೆ ಮೇಲೆ ಮನೆಗೆ ಕಳುಹಿಸಲು ಏರ್‌ಲೈನ್ಸ್ ಸಿದ್ಧತೆ ನಡೆಸಿದೆ.

ಪ್ರಾದೇಶಿಕ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಕಾರ್ಯ ನಿರ್ವಹಿಸುವ ಒಟ್ಟು 80 ಪೈಲಟ್‌ಗಳನ್ನು ಮೂರು ತಿಂಗಳವರೆಗೆ ವೇತನ ರಹಿತ ರಜೆಯ ಮೇಲೆ ಹೋಗಲು ಆದೇಶಿಸಲಾಗಿದೆ. ಡಿಸೆಂಬರ್‌ನಲ್ಲಿ ಏಳು ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದ್ದಾಗಿ ವರದಿ ಆಗಿದೆ.

ಇದಲ್ಲದೇ ಹೊಸ ವಿಮಾನಗಳು ಬರುವವರೆಗೆ ಇದು, ಕಡಿಮೆ ಸಂಖ್ಯೆಯ ಸಿಬ್ಬಂದಿ (wet-leased aircraft) ಬಳಸಿಕೊಂಡು ವಿಮಾನ ಹಾರಾಟ ನಡೆಸಲು ಮುಂದಾಗಿದೆ. ವೆಟ್-ಲೀಸ್ಡ್ ವಿಮಾನಗಳಿಗೆ ಹೆಚ್ಚಿನ ಪೈಲಟ್‌ಗಳ ಅಗತ್ಯವಿಲ್ಲ ಏಕೆಂದರೆ ಅವುಗಳನ್ನು ಬಾಡಿಗೆಗೆ ಪಡೆಯುವ ಏರ್‌ಲೈನ್‌ನ ಸಿಬ್ಬಂದಿ ನಿರ್ವಹಿಸುತ್ತಾರೆ. 2021 ಆರಂಭದಲ್ಲಿ ಈ ಸ್ಪೈಸ್ ಜೆಟ್ ಏರ್‌ಲೈನ್, 95 ವಿಮಾನಗಳನ್ನು ಹೊಂದಿತ್ತು. ದರೆ ಈಗ ಕೇವಲ 50 ವಿಮಾನಗಳನ್ನು ಹೊಂದಿದೆ. ಹಲವು ವಿಮಾನಗಳನ್ನು ಅದು ಲೀಸ್‌ ಪಡೆಯುವವರಿಗೆ ನೀಡಿದೆ. ಮತ್ತೆ ಕೆಲವು ನಿರ್ವಹಣಾ ಕಾರಣಕ್ಕೆ (maintenance issue) ಹಾರಾಟ ನಡೆಸುತ್ತಿಲ್ಲ. 

ಹೀಗಾಗಿ ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆಯನ್ನು ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಪ್ರಸ್ತುತ ಸ್ಪೈಸ್ ಜೆಟ್, ಜೆಟ್ ಏರ್‌ವೇಸ್‌ನಿಂದ (Jet Airways) ಪಡೆದ 737 ಹಳೆಯ ವಿಮಾನಗಳನ್ನು ವಾಪಸ್ ಕಳುಹಿಸುತ್ತಿದೆ. ಆದರೆ ಲೀಸ್‌ಗೆ ಪಡೆದವರು ನಾಲ್ಕು ವಿಮಾನಗಳನ್ನು ವಾಪಸ್ ನೀಡುತ್ತಿದ್ದಾರೆ. ಇದರ ಜೊತೆಗೆ ಸುಮಾರು ಹತ್ತು Q400 ವಿಮಾನಗಳನ್ನು ಬಿಡಿಭಾಗಳು ಸಿಗದ ಕಾರಣಕ್ಕೆ ನಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಇಷ್ಟೊಂದು ಪೈಲಟ್‌ಗಳನ್ನು ಯಾವುದೇ ವೇತನ ನೀಡದೇ ವಾಪಸ್ ಕಳುಹಿಸುವುದರಿಂದ ಇರುವ ಪೈಲಟ್‌ಗಳ ವೇತನ ಹೆಚ್ಚಿಸಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಸ್ಪೈಸ್ ಜೆಟ್, ವಿದೇಶಿ ವಿಮಾನಯಾನ ಸಂಸ್ಥೆಗಳು ಹಾಗೂ ದೇಶಿಯ ವಿಮಾನ ಯಾನ ಸಂಸ್ಥೆಗಳಿಂದ ವ್ಯಾಪಕವಾದ ಸ್ಪರ್ಧೆ ಎದುರಿಸುತ್ತಿದೆ. 

ಇತ್ತೀಚೆಗೆ ಆರಂಭವಾದ ಆಕಾಶ್ ಏರ್ (Akasa Air) ಕೂಡ ಸ್ಪೈಸ್ ಜೆಟ್‌ಗೆ ತೀವ್ರವಾದ ಸ್ಪರ್ಧೆಯೊಡ್ಡುತ್ತಿದೆ. ಆಕಾಶ್ ಏರ್‌ಲೈನ್ಸ್ ಮುಂದಿನ ಐದು ತಿಂಗಳಲ್ಲಿ ಇನ್ನೂ 13 ವಿಮಾನಗಳನ್ನು ಹಾರಾಟಕ್ಕೆ ಇಳಿಸಲು ನಿರ್ಧರಿಸಿದೆ. ಅದು ತನ್ನ ಪೈಲಟ್‌ಗಳ ವೇತನವನ್ನು (salary of pilots) ಸರಾಸರಿ 60 ಪ್ರತಿಶತದಷ್ಟು ಹೆಚ್ಚಿಸಿದೆ. ಆದರೆ ಇತ್ತ ಸ್ಪೈಸ್‌ಜೆಟ್ ಪೈಲಟ್‌ಗಳ (SpiceJet pilots) ಸಂಬಳವವನ್ನು ಕಡಿತಗೊಳಿಸಿದ್ದಲ್ಲದೇ ಅನೇಕರಿಗೆ 15 ದಿನ ವಿಳಂಬವಾಗಿ ಸಂಬಳ ನೀಡುತ್ತಿದೆ ಎಂದು ತಿಳಿದು ಬಂದಿದೆ. 
 

Follow Us:
Download App:
  • android
  • ios