ಮಹಿಳೆಯರಿಂದ, ಮಹಿಳೆಯರಿಗಾಗಿ: ಸಂಪೂರ್ಣ ಮಹಿಳಾ ಹೊಟೇಲ್!

Soon, a hotel by women for women
Highlights

ಕೇರಳದಲ್ಲಿ ತಲೆ ಎತ್ತಲಿದೆ ಮಹಿಳಾ ಹೊಟೇಲ್

ಸಂಪೂರ್ಣವಾಗಿ ಮಹಿಳೆಯರದ್ದೇ ನಿರ್ವಹಣೆ

ಹೋಸ್ಟೆಸ್ ಹೋಟೆಲ್ ನಿರ್ಮಾಣಕ್ಕೆ  ಸರ್ಕಾರ ಸಜ್ಜು

ರಾಜಧಾನಿ ತಿರುವನಂತಪುರಂನಲ್ಲಿ ತಲೆ ಎತ್ತಲಿದೆ ಹೊಟೇಲ್ 

ತಿರುವನಂತಪುರಂ(ಜು.26): ಕೇರಳ ಪ್ರವಾಸೋದ್ಯಮ ಇಲಾಖೆ ದೇಶದ ಪ್ರಥಮ ಮಹಿಳಾ ಹೊಟೇಲ್ ನ್ನು ಪ್ರಾರಂಭಿಸಿದೆ. ಈ ಮೂಲಕ ಮಹಿಳೆಯರೇ ನಡೆಸಲಿರುವ ಸರ್ಕಾರಿ ಪ್ರಾಯೋಜಕತ್ವದ ಹೊಟೇಲ್ ಪ್ರಾರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಭಾಜನವಾಗಿದೆ.

ಹೋಸ್ಟೆಸ್ ಎಂಬ ಹೆಸರಿನಲ್ಲಿ ರಾಜಧಾನಿ ತಿರುವನಂತಪುರಂನಲ್ಲಿ ಹೊಟೇಲ್ ಪ್ರಾರಂಭವಾಗಲಿದ್ದು, 6 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.  

ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ನೂತನ ಹೊಟೇಲ್‌ನ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಈ ಹೊಟೇಲ್‌ನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದು, ಅಂತರಾಷ್ಟ್ರೀಯ ದರ್ಜೆಯ ಹೊಟೇಲ್‌ನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಟೇಲ್‌ಗೆ ಬರುವ ಗ್ರಾಹಕರ ಚಲನವಲನಗಳ ಮೇಲೆ ನಿಗಾ ಇಡಲಾಗವುದು ಎಂದು ಸಚಿವರು ತಿಳಿಸಿದ್ದಾರೆ. 22 ಎಸಿ ಕೋಣೆಗಳು, 28 ಜನ ಒಟ್ಟಿಗೆ ಕುಳಿತುಕೊಳ್ಳಬಹುದಾದ ಎಸಿ ಹಾಲ್ ನಿರ್ಮಾಣ ಮಾಡಲಾಗುವುದು. 

ಒಂದು ವೇಳೆ ಈ ಹೊಟೇಲ್ ಜನಪ್ರಿಯವಾದರೆ ರಾಜ್ಯದ ಇತರೆಡೆಯೂ ಇಂತಹ ಹೊಟೇಲ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸುರೇಂದ್ರನ್ ಮಾಹಿತಿ ನೀಡಿದರು.ಕೇರಳ ರಾಜ್ಯ ಸರ್ಕಾರ ಹೋಸ್ಟೆಸ್ ಹೊಟೇಲ್ ಗಾಗಿ 17.5 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಮೂಲಗಳು ತಿಳಿಸಿವೆ.      
 

loader