ಕ್ರಿಕೆಟ್ ವೀಕ್ಷಣೆಯಿಂದ ನೀವೇನಾಗುತ್ತಿದ್ದೀರಿ ಗೊತ್ತಾ? ದೇಶಕ್ಕೂ ಇದೆ ಗಂಡಾಂತರ; ಕಾರಣ ಬಹಿರಂಗ!
ಟಿ20 ವಿಶ್ವಕಪ್ ಟೂರ್ನಿ ವೀಕ್ಷಿಸಿದ ಭಾರತೀಯ ಕುಣಿದು ಕುಪ್ಪಳಿಸಿದ್ದಾರೆ. ಟ್ರೋಫಿ ಗೆದ್ದ ಸಂಭ್ರಮ ಇನ್ನೂ ಮುಗಿದಿಲ್ಲ. ಜಿಂಬಾಬ್ವೆ ಸರಣಿ, ಬಳಿಕ ಶ್ರೀಲಂಕಾ ಹೀಗೆ ಸಾಲು ಸಾಲು ಸರಣಿಗಳಿವೆ. ಹೀಗೆ ಟೀಂ ಇಂಡಿಯಾ ಸೇರಿ ಇತರ ತಂಡದ ಪ್ರದರ್ಶನ ನೋಡಲು ಕ್ರಿಕೆಟ್ ಲೈವ್ ವೀಕ್ಷಿಸುತ್ತಿರುವುದರಿಂದ ದೇಶದ ಪರಿಸ್ಥಿತಿ ಏನಾಗುತ್ತಿದೆ? ಕ್ರಿಕೆಟ್‌ನಿಂದ ಆಪತ್ತು ಎದುರಾಗಿದ್ದು ಹೇಗೆ ಅನ್ನೋದನ್ನು ಖಾಸಗಿ ಉದ್ಯೋಗಿ ಪ್ರಮೋದ್ ಹೆಗ್ಡೆ ವಿವರಿಸಿದ್ದಾರೆ.
ಬೆಂಗಳೂರು(ಜು.15) ವಿಶ್ವಕಪ್ ಟೂರ್ನಿ, ಟೆಸ್ಟ್ ಚಾಂಪಿಯನ್‌ಶಿಪ್, ಇತ್ತೀಚೆಗೆ ಮುಕ್ತಾಯಗೊಂಡು ಚಾಂಪಿಯನ್ ಆದ ಟಿ20 ವಿಶ್ವಕಪ್..ಹೀಗೆ ಸಾಲು ಸಾಲು ಕ್ರಿಕೆಟ್ ಟೂರ್ನಿಗಳನ್ನು ಭಾರತೀಯರು ಮಿಸ್ ಮಾಡಿಕೊಂಡಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ಕೂದಲೆಳೆ ಅಂತರದಲ್ಲಿ ಟ್ರೋಫಿ ಮಿಸ್ ಮಾಡಿಕೊಂಡ ಭಾರತ, 2024ರ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಬಳಿಕ ಸಂಭ್ರಮ, ಮುಂಬೈನಲ್ಲಿ ರೋಡ್ ಶೋ, ದೇಶಾದ್ಯಂತ ಆಚರಣೆಗಳು ನಡೆದಿದೆ. ಇದೀಗ ಜಿಂಬಾಬ್ವೆ ಸರಣಿ, ಬಳಿಕ ಶ್ರೀಲಂಕಾ, ಹೀಗೆ ಸರಣಿ ಮುಂದುವರಿಯಲಿದೆ. ಹೀಗೆ ಸತತ ಕ್ರಿಕೆಟ್ ಸರಣಿಯಿಂದ ಬಿಸಿಸಿಐ ಹಾಗೂ ಕ್ರಿಕೆಟಿಗರಿಗೆ ಆದಾಯ ಸಿಗುತ್ತಿದೆ. ಆದರೆ ದೇಶದ ಆದಾಯ, ಉತ್ಪಾದನೆ ಕುಂಠಿತವಾಗುತ್ತಿದೆ. ಇಷ್ಟೇ ಅಲ್ಲ ಇದೇ ಕ್ರಿಕೆಟ್ ನೋಡುತ್ತಿರುವ ಜನ ಸೋಮಾರಿಗಳಾಗುತ್ತಿದ್ದಾರೆ. ಈ ಕುರಿತು ಖಾಸಗಿ ಉದ್ಯೋಗಿ ಪ್ರಮೋದ್ ಹೆಗ್ಡೆ ಬೆಳಕು ಚೆಲ್ಲಿದ್ದಾರೆ.
ಹೌದು, ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಟೀಂ ಇಂಡಿಯಾ ಸತತ ಕ್ರಿಕೆಟ್ ಆಡುತ್ತಿದೆ. ಒಂದಲ್ಲಾ ಒಂದು ಸರಣಿ ನಡೆಯುತ್ತಲೇ ಇರುತ್ತದೆ. ಪ್ರತಿ ಸರಣಿಯ ನೇರಪ್ರಸಾರ ದಾಖಲೆ ಮಟ್ಟದ ವೀಕ್ಷಣೆ ಪಡೆಯುತ್ತಿದೆ. ಇನ್ನು ಇಂಡೋ ಪಾಕ್, ಸೇರಿದಂತೆ ಪ್ರಮುಖ ಮುಖಾಮಖಿಗಳು ವೀಕೆಂಡ್ ಸೇರಿದಂತೆ ರಜಾ ದಿನಗಳಲ್ಲೇ ಆಯೋಜನೆಯಾಗುತ್ತಿದೆ.
ಪಾಕ್ ನಿದ್ದೆ ಕೆಡಿಸಿದ ಯುವಿ, ರೈನಾ, ಬಜ್ಜಿ; ಸೋಲಿನಿಂದ ಮೊದಲೇ ಕಂಗೆಟ್ಟಿವೆ ಸಾಕ್ ಬಿಡಿ ಎಂದ ಫ್ಯಾನ್ಸ್
ಇದರ ಪರಿಣಾಮ ಈ ಕ್ರಿಕೆಟ್ ನೋಡುತ್ತಾ ಜನ ಆಲಸಿಗಳಾಗಿದ್ದಾರೆ. ದೇಶದ ಉತ್ಪಾದನೆ ಕುಂಠಿತವಾಗಿದೆ. ವ್ಯಾಪಾರ ವಹಿವಾಟು ಕುಸಿಯುತ್ತಿದೆ. ಇದರ ಜೊತೆ ಪ್ರತಿ ಬಾರಿ ಕೇಳಿ ಬರುತ್ತಿರುವ ಇತರ ಕ್ರೀಡೆಗಳಿಗೂ ಪ್ರಚಾರ ಸಿಗುತ್ತಿಲ್ಲ ಅನ್ನೋ ವಿಚಾರಗಳನ್ನು ಪ್ರಮೋದ್ ಹೆಗ್ಡೆ ವಿವರಿಸಿದ್ದಾರೆ.
ಜನಪ್ರಿಯತೆ ಹೆಚ್ಚಿಸುತ್ತಿರುವ ಕ್ರಿಕೆಟ್ ವ್ಯಾಪಾರ ವಹಿವಾಟವನ್ನು ಮಾರಕವಾಗುವ ಮೂಲಕ ದೇಶದ ಉತ್ಪಾದಕತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಿದೆ. ಇಷ್ಟೇ ಅಲ್ಲ ಇದೇ ಕ್ರಿಕೆಟ್ ವೀಕ್ಷಣೆ ಮಾಡುತ್ತಿರುವ ಜನ ಸೋಮಾರಿಗಳಾಗುತ್ತಿದ್ದಾರೆ. ಕ್ರಿಕೆಟ್ ಟೂರ್ನಿಗಳ ಪ್ರಮಾಣ ಹೆಚ್ಚಾಗಿದೆ. ವಿಶ್ವಕಪ್ , ಟಿ20 ವಿಶ್ವಕಪ್, ಐಪಿಎಲ್ , ಮಹಿಳಾ ಕ್ರಿಕೆಟ್ ಟೂರ್ನಿ, ಜ್ಯೂನಿಯರ್ ಕ್ರಿಕೆಟ್, ಇದರ ಜೊತೆಗೆ ಲೆಜೆಂಡ್ ವಿಶ್ವಕಪ್ ಚಾಂಪಿಯನ್ ಟೂರ್ನಿ. ಹೀಗೆ ಸಾಲು ಸಾಲು ಸರಣಿಗಳು ಜನರ ಸಮಯವನ್ನು ಕಸಿಯುತ್ತಿದೆ. ಈ ಸತತ ಕ್ರಿಕೆಟ್‌ನಿಂದ ಬಿಸಿಸಿಐ ಆದಾಯಗಳಿಸುತ್ತಿದೆ. ಆದರೆ ಇತರ ಎಲ್ಲಾ ವ್ಯಾಪಾರ, ವ್ಯಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ವೀಕೆಂಡ್ ಬಂದರೆ ಜನರು ಮಾಲ್, ರೆಸ್ಟೋರೆಂಟ್, ಸಿನಿಮಾ, ಪ್ರಯಾಣ, ಪ್ರವಾಸಿ ತಾಣಗಳ ವ್ಯವಹಾರ ಹೆಚ್ಚಾಗುತ್ತಿತ್ತು. ಆದರೆ ಇದೀಗ ಈ ಎಲ್ಲಾ ವ್ಯಾಪಾರ ಕುಸಿಯುತ್ತಿದೆ. ಕ್ರಿಕೆಟ್‌ನ್ನು ಮನೋರಂಜನೆಯಾಗಿ ನೋಡುತ್ತಾ, ವಿಶ್ರಾಂತಿ ಪಡೆಯುವ ಜನರನ್ನು ಸೋಮಾರಿಗಳಾಗಿ ಮಾಡುತ್ತಿದೆ. ಕ್ರಿಕೆಟ್ ಅತೀಯಾದರೆ ಹಾನಿ. ಅತೀಯಾದ ಕ್ರಿಕೆಟ್ ಆರ್ಥಿಕತೆ, ಉತ್ಪಾದಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಅತೀಯಾದರೆ ಎಲ್ಲವೂ ಕೆಟ್ಟದು. ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್‌ನಿಂದ ಇತರ ಕ್ರೀಡೆಗಳು ಕಳೆಗುಂದಿದೆ ಅನ್ನೋ ಆರೋಪವಿದೆ. ಇದರ ಜೊತೆಗೆ ವ್ಯಾಪಾರ, ಕೈಗಾರಿಕೆಗಳಿಗೂ ಹೊಡೆತ ನೀಡುತ್ತಿದೆ ಎಂದು ಪ್ರಮೋದ್ ಹೆಗ್ಡೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಖಡಕ್ ತೀರ್ಮಾನ..!