ದೀಪಾವಳಿ ಹಬ್ಬದಲ್ಲಿ ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಸೋನ್ ಪಾಪಡಿ ಅಲ್ಲಿ, ಇಲ್ಲಿ ಎಲ್ಲ ಕಡೆ ಇರುತ್ತೆ. ಹಬ್ಬದಲ್ಲಿ ಎಲ್ರೂ ಸೋನ್ ಪಾಪಡಿ ಕಾಲೆಳೆದ್ರೂ ಖರೀದಿ ಕಡಿಮೆ ಮಾಡೋದಿಲ್ಲ. 

ದೀಪಾವಳಿ (Diwali) ಹತ್ರ ಬರ್ತಿದೆ. ಮಾರ್ಕೆಟ್ ತುಂಬಾ ಸಿಹಿ ತಿಂಡಿಗಳ ಅಬ್ಬರ ಜೋರಾಗಿದೆ. ದೀಪಾವಳಿ ಬರ್ತಿದ್ದಂತೆ ಜನರು ಪರಸ್ಪರ ಸಿಹಿ, ಗಿಫ್ಟ್ ನೀಡಿ ಹಬ್ಬವನ್ನು ಸಂಭ್ರಮಿಸ್ತಾರೆ. ದೀಪಾವಳಿ ಹಬ್ಬದಲ್ಲಿ ಗಿಫ್ಟ್ ಆಗಿ ಸೋನ್ ಪಾಪಡಿ ಸಿಕ್ಕಿಲ್ಲ ಅಂದ್ರೆ ಹೇಗೆ? ಸೋನ್ ಪಾಪಡಿ ಇಲ್ದೆ ಹಬ್ಬವೇ ಇಲ್ಲ. ಹಬ್ಬದ ಟೈಂನಲ್ಲಿ ಸೋನ್ ಪಾಪ್ಡಿ ತಮಾಷೆ ವಸ್ತುವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೊ ಮೀಮ್ಸ್ ಹರಿದಾಡ್ತಿರುತ್ವೆ. ಆದ್ರೆ ಗಿಫ್ಟ್ ಅಂತ ಬಂದಾಗ ಜನರ ಮೊದಲು ಆಯ್ಕೆ ಮಾಡ್ಕೊಳ್ಳೋದೇ ಸೋನ್ ಪಾಪ್ಡಿ. ಕೆಲ ವರ್ಷಗಳಿಂದ ದೇಶದಲ್ಲಿ ಸೋನ್ ಪಾಪಡಿ (Son Papdi)ಗೆ ಸ್ಪರ್ಧಿಗಳಿರಲಿಲ್ಲ. ಎರಡು ವರ್ಷಗಳಿಂದ ಮಾರ್ಕೆಟ್ ನಲ್ಲಿ ಕಡಿಮೆ ಬೆಲೆಗೆ ಉತ್ತಮ ಗಿಫ್ಟ್ ಹಾಗೂ ಸ್ವೀಟ್ ಸಿಗ್ತಿದೆ.

ಸೋನ್ ಪಾಪಡಿಗೆ ಹೆಚ್ಚಾಗ್ತಿದ್ಯಾ ಸ್ಪರ್ಧೆ ? : 

ಈಗ ಮಾರ್ಕೆಟ್ ನಲ್ಲಿ 100 ರಿಂದ 150 ರೂಪಾಯಿ ಬೆಲೆಗೆ ಒಳ್ಳೆ ಗಿಫ್ಟ್ ಪ್ಯಾಕೇಜ್ ಸಿಗ್ತಿದೆ. ಪ್ಯಾಕಿಂಗ್ ಆಕರ್ಷಕವಾಗಿರೋದ್ರಿಂದ ಜನರು ಅದನ್ನು ಆಯ್ಕೆ ಮಾಡ್ಕೊಳ್ತಿದ್ದಾರೆ. ಈ ನೂರು ರೂಪಾಯಿ ಪ್ಯಾಕೆಟ್ ಒಳಗೆ ಚಿಪ್ಸ್, ಕುರ್ ಕುರೆ, ಬಿಸ್ಕತ್, ಜ್ಯೂಸ್ ಇರುತ್ತೆ. ಮಕ್ಕಳಿರುವ ಮನೆಗಳಿಗೆ ಜನರು ಇದನ್ನು ಗಿಫ್ಟ್ ನೀಡ್ತಿದ್ದಾರೆ. ಒಂದು ಕಡಿಮೆ ಬೆಲೆ ಇನ್ನೊಂದು ಪ್ಯಾಕೇಜ್ ಆಕರ್ಷಕವಾಗಿರೋದು ಕಾರಣ. ಹಾಗೆ ಸೋನ್ ಪಾಪಡಿ ಎನ್ನುವ ಟ್ಯಾಗ್ ನಿಂದ ಹೊರಗುಳಿಯಲು ಜನರು ಹೊಸ ಆಯ್ಕೆ ಹುಡುಕ್ತಿದ್ದಾರೆ.

ಬೆಳ್ಳಿ ಮೇಲೆ ಹೂಡಿಕೆ ಮಾಡಲು ಇದು ಸಕಾಲವೇ: ಸಿಲ್ವರೇ ಈಗ ಬಂಗಾರ

ನಿಜವಾಗ್ಲೂ ಸೋನ್ ಪಾಪಡಿ ಬ್ಯುಸಿನೆಸ್ ಅಪಾಯದಲ್ಲಿದ್ಯೆ? : 

ಈ ಪ್ರಶ್ನೆಗೆ ಉತ್ತರ ಇಲ್ಲ. ದೀಪಾವಳಿ ಟೈಂನಲ್ಲಿ ಜನರು ಈಗ್ಲೂ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸೋನ್ ಪಾಪಡಿಯನ್ನೇ ಮೊದಲು ಆಯ್ಕೆ ಮಾಡ್ಕೊಳ್ತಿದ್ದಾರೆ. ಆಕರ್ಷಕ ಪ್ಯಾಕೆಟ್ ನಲ್ಲಿ ಬಿಸ್ಕತ್, ಚಿಪ್ಸ್ ನೀಡಲು ಅನೇಕರಿಗೆ ಇಷ್ಟವಿಲ್ಲ. ಸೋನ್ ಪಾಪಡಿ ಪ್ಯಾಕೇಜಿಂಗ್ ಕೂಡ ಆಕರ್ಷಕವಾಗಿರುತ್ತೆ. ಕಡಿಮೆ ಬೆಲೆಗೆ ಹೆಚ್ಚು ಸಿಗೋ ಜೊತೆಗೆ ಮನೆಯವರೆಲ್ಲ ಇದನ್ನು ತಿನ್ಬಹುದು. 100 -300 ರೂಪಾಯಿಗೆ ಒಳ್ಳೆ ಬ್ರ್ಯಾಂಡ್ ನ ಸೋನ್ ಪಾಪಡಿ ಖರೀದಿ ಮಾಡ್ಬಹುದು.

ರಸಗುಲ್ಲಾ, ಬರ್ಫಿ ಎಲ್ಲ ಒಂದು ವಾರದಲ್ಲಿ ಹಾಳಾಗುತ್ತೆ. ಆದ್ರೆ ಸೋನ್ ಪಾಪಡಿಯನ್ನು ಒಂದು ತಿಂಗಳವರೆಗೆ ಆರಾಮವಾಗಿ ತಿನ್ಬಹುದು. ಎಲ್ಲ ಧರ್ಮದ, ಜಾತಿಯ ಜನರೂ ಇದನ್ನು ತಿನ್ನುತ್ತಾರೆ. ಮಧ್ಯ ವರ್ಗದವರು ಇದನ್ನು ಆರಾಮವಾಗಿ ಖರೀದಿ ಮಾಡ್ಬಹುದು. ಹಾಗೆ ಗಿಫ್ಟ್ ಸಿಕ್ಕ ಸೋನ್ ಪಾಪಡಿಯನ್ನು ಬೇರೆಯವರಿಗೆ ಗಿಫ್ಟ್ ಆಗಿ ಕೂಡ ನೀಡ್ಬಹುದು. ಪ್ಯಾಕಿಂಗ್ ಚೆನ್ನಾಗಿರೋ ಕಾರಣ ಅದನ್ನು ಆರಾಮವಾಗಿ ಕೋರಿಯರ್ ಕೂಡ ಮಾಡ್ಬಹುದು. ಇದೆಲ್ಲ ಕಾರಣಕ್ಕೆ ಜನರು ಸೋನ್ ಪಾಪಡಿಯನ್ನು ಹೆಚ್ಚು ಇಷ್ಟಪಡ್ತಾರೆ.

ಅನ್ನ vs ಉಪ್ಪಿಟ್ಟು: ತೂಕ ಇಳಿಕೆಗೆ ಬೆಳಗಿನ ಉಪಾಹಾರ ಯಾವುದು ಉತ್ತಮ?

ಯಾವ ಸ್ಥಾನದಲ್ಲಿದೆ ಸೋನ್ ಪಾಪಡಿ ? :

 ದೀಪಾವಳಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಿಹಿ ತಿಂಡಿಯಲ್ಲಿ ಕಾಜು ಕಟ್ಲಿ 5 ನೇ ಸ್ಥಾನದಲ್ಲಿದೆ. ಕಾಜು ಕಟ್ಲಿಗಿಂತ ಮತ್ತೆ ನಾಲ್ಕು ಸಿಹಿ ತಿಂಡಿಗಳು ಹೆಚ್ಚು ಮಾರಾಟವಾಗುತ್ವೆ. ಅದ್ರಲ್ಲಿ ಸೋನ್ ಪಾಪಡಿ ಮೊದಲ ಸ್ಥಾನದಲ್ಲಿದೆ. ಗುಲಾಬ್ ಜಾಮೂನ್ ಎರಡನೇ ಸ್ಥಾನದಲ್ಲಿದ್ರೆ ರಸಗುಲ್ಲಾ ಮತ್ತು ಬೇಸನ್ ಲಾಡು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಹಲ್ದಿರಾಮ್ ಬ್ರ್ಯಾಂಡ್ ನ ಸೋನ್ ಪಾಪಡಿಯನ್ನು ಜನರು ಹೆಚ್ಚು ಖರೀದಿ ಮಾಡ್ತಾರೆ. ಮಾರ್ಕೆಟ್ ನಲ್ಲಿ ಮೊದಲ ಸ್ಥಾನದಲ್ಲಿರುವ ಹಲ್ದಿ ರಾಮ್ ಸೋನ್ ಪಾಪಡಿ ಮಾರ್ಕೆಟ್ ನಲ್ಲಿ ಶೇಕಡಾ 37ರಷ್ಟು ಜಾಗನ್ನು ಆವರಿಸಿದೆ. ಮಾಹಿತಿ ಒಂದರ ಪ್ರಕಾರ, ಇಷ್ಟೊಂದು ಸ್ಪರ್ಧೆ ಮಧ್ಯೆಯೇ ಸೋನ್ ಪಾಪಡಿ ಮಾರ್ಕೆಟ್ 1300 ಕೋಟಿ ಎಂದು ಅಂದಾಜಿಸಲಾಗಿದೆ.