ಬೆಂಗಳೂರು(ಜು.31): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ ಹಿನ್ನೆಲೆಯಲ್ಲಿ, ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಅವರನ್ನು ಸಂಸ್ಥೆಯ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಂಸ್ಥೆಯ ಆಡಳಿತ ಮಂಡಳಿ, ಕಾಫಿ ಡೇ ಜವಾಬ್ದಾರಿಯನ್ನು ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿಸಿದೆ.

ಸಿದ್ಧರ್ಥ ನಿಧನದ ಹಿನ್ನೆಲೆಯಲ್ಲಿ ಕಾಫಿ ಡೇ ಕಂಪನಿಗೆ ಹೊಸ ಆಡಳಿತ ಮಂಡಳಿ ರಚಿಸಲಾಗಿದ್ದು, ಈ ನೂತನ ಮಂಡಳಿ ಮಾಳವಿಕ ಅವರನ್ನು ನೂತನ ಮುಖ್ಯಸ್ಥೆಯಾಗಿ ನೇಮಿಸಿದೆ.

ಸದ್ಯ ಕಾಫಿ ಡೇ ಹಂಗಾಮಿ ಅಧ್ಯಕ್ಷರನ್ನಾಗಿ ಎಸ್.ವಿ. ರಂಗನಾಥ್ ಅವರನ್ನು ನೇಮಕ ಮಾಡಲಾಗಿದ್ದು, ನಿತಿನ್ ಬಾಗಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಆಗಿ ನೇಮಕ ಮಾಡಲಾಗಿದೆ.

ಇದೇ ವೇಳೆ ಆ.8ರಂದು ನಡೆಯಲಿರುವ ಬೋರ್ಡ್ ಆಫ್ ಮೀಟಿಂಗ್’ನಲ್ಲಿ ಮಾಳವಿಕ ಆಯ್ಕೆಯನ್ನು ಘೋಷಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.