Asianet Suvarna News Asianet Suvarna News

ಅನಗತ್ಯ ಮೀಟಿಂಗ್‌ಗೆ ಕಡಿವಾಣ ಹಾಕಲು ಕಂಪನಿಯ ಗ್ರೇಟ್ ಐಡಿಯಾ, 30 ನಿಮಿಷ ಸಭೆಗೆ 1.3 ಲಕ್ಷ ರೂ ದಂಡ!

ಕಚೇರಿಯಲ್ಲಿ ಮೀಟಿಂಗ್ ಸಾಮಾನ್ಯ. ಆದರೆ ಹಲವು ಬಾರಿ ಕೆಲ ಮೀಟಿಂಗ್‌ಗಳಿಂದ ಪ್ರಯೋಜಗಳು ಇರುವುದಿಲ್ಲ. ಇದೀಗ ಖಾಸಗಿ ಇ ಕಾಮರ್ಸ್ ಕಂಪನಿ ಮ್ಯಾನೇಜರ್, ಡೈರೆಕ್ಟರ್ ಸೇರಿದಂತೆ ಕಂಪನಿಯ ಪ್ರಮುಖ ಅಧಿಕಾರಿಗಳು ಆಯೋಜಿಸುವ ಅನಗತ್ಯ ಮೀಟಿಂಗ್‌ಗೆ ಕಡಿವಾಣ ಹಾಕಲು ಹೊಸ ಕ್ಯಾಲ್ಕುಲೇಟರ್ ಬಿಡುಗಡೆ ಮಾಡಿದೆ. 

Shopify introduce Cost Calculator for pointless meetings with a 30 minute chat costing up to 1600 us Dollar ckm
Author
First Published Jul 14, 2023, 11:12 AM IST

ಕೆನಡ(ಜು.14) ಸಮಯ ಅತ್ಯಮೂಲ್ಯ. ಒಂದೊಂದು ಸೆಕೆಂಡ್ ಎಷ್ಟು ಮುಖ್ಯ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಇನ್ನು ಖಾಸಗಿ ಕಂಪನಿಗಳಲ್ಲಿ ಸಮಯಕ್ಕೆ ಅತೀ ಹೆಚ್ಚಿನ ಬೆಲೆ. ನಿಗಿದಿತ ಸಮಯದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಅನ್ನೋದರ ಮೇಲೆ ವೇತನ ನಿರ್ಧಾರವಾಗುತ್ತದೆ. ಆದರೆ ಕೆಲ ಕಂಪನಿಗಳಲ್ಲಿ ಉದ್ಯೋಗಗಳಿಗೆ ಅನಗತ್ಯ ಮೀಟಿಂಗ್‌ಗಳನ್ನು ಆಯೋಜಿಸಲಾಗುತ್ತದೆ. ಈ ಮೀಟಿಂಗ್‌ನಿಂದ ಕಂಪನಿಗಾಗಲಿ, ಉದ್ಯೋಗಿಗಾಗಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಇದೀಗ ಈ ರೀತಿಯ ಅನಗತ್ಯ ಮೀಟಿಂಗ್‌ಗೆ ಕಡಿವಾಣ ಹಾಕಲು ಇ ಕಾಮರ್ಸ್ ಕಂಪನಿ ಶಾಪಿಫೈ ಗ್ರೇಟ್ ಐಡಿಯಾ ಮಾಡಿದೆ. ಅನಗತ್ಯ ಮೀಟಿಂಗ್‌ನಿಂದ ಆಗುವ ನಷ್ಟವನ್ನು ಲೆಕ್ಕ ಹಾಕಲು ಕ್ಯಾಲ್ಕುಲೇಟರ್ ಬಿಡುಗಡೆ ಮಾಡಿದೆ. ಇದೀಗ ಶಾಪಿಫೈ ಕಂಪನಿಯಲ್ಲಿ ಸುಖಾಸುಖಮ್ಮನೆ 3 ಉದ್ಯೋಗಿಗಳು 30 ನಿಮಿಷಗಳ ಕಾಲ ಮೀಟಿಂಗ್ ಮಾಡಿದರೆ, 57,000 ರೂಪಾಯಿಯಿಂದ 1.31 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಈ ಕ್ಯಾಲ್ಯುಕುಲೇಟರ್ ಲೆಕ್ಕ ಹಾಕಿದೆ. ಮೀಟಿಂಗ್ ಆಯೋಜಿಸುವವರು ಹಾಗೂ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುವವರು ಈ ಮೊತ್ತ ಕಂಪನಿಗೆ ಪಾವತಿಸಬೇಕಿದೆ.

ಕೆನಡಾ ಶಾಪಿಫೈ ಇ ಕಾಮರ್ಸ್ ಕಂಪನಿ ಹೊಸ ನೀತಿ ಜಾರಿಗೆ ತಂದಿದೆ. ಎಂಗೇಜ್‌ಮೆಂಟ್ ಕನ್ಸಲ್ಟೆನ್ಸಿ ಸ್ಟಡೀಸ್ ಅಧ್ಯಯನ ವರದಿಯನ್ನು ಮೂಲವಾಗಿಟ್ಟುಕೊಂಡು ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಕಾಝ್ ನೆಜಾಟಿಯನ್ ಹೊಸ ಕ್ಯಾಲ್ಕುಲೇಟರ್ ಬಿಡುಗಡೆ ಮಾಡಿದ್ದಾರೆ. ಪ್ರಮುಖವಾಗಿ ಉದ್ಯೋಗಿಗಳನ್ನು ಅನಗತ್ಯ ಮೀಟಿಂಗ್‌ಗಳನ್ನು ಆಯೋಜಿಸಿ ಕಂಪನಿ ಹಾಗೂ ಉದ್ಯೋಗಿಗಳ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಈ ಕ್ಯಾಲ್ಕುಲೇಟರ್ ಬಿಡುಗಡೆ ಮಾಡಲಾಗಿದೆ. 

ಟಾಟಾ ಕಂಪನಿಯ ಈ ಷೇರಿನಿಂದ ಕೆಲವೇ ನಿಮಿಷಗಳಲ್ಲಿ 500 ಕೋಟಿ ಸಂಪತ್ತು ಗಳಿಸಿದ ರಾಕೇಶ್‌ ಜುಂಜುನ್ವಾಲಾ ಪತ್ನಿ!

ಈ ಕ್ಯಾಲ್ಕುಲೇಟರ್ ಕೆಲಸಕ್ಕೆ ಹಾಜರಾಗಿರುವ ಉದ್ಯೋಗಿಗಳ ಸಂಖ್ಯೆ, ಸಭೆಯ ಸಮಯ, ಮೀಟಿಂಗ್‌ನಲ್ಲಿ ಭಾಗಿಯಾದವರ ವೇತನಗಳನ್ನು ಲೆಕ್ಕಹಾಕಿ ಮೀಟಿಂಗ್ ವೆಚ್ಚವನ್ನು ಹೇಳುತ್ತದೆ. ಉದಾಹರಣೆಗೆ ಮೂರು ಮಂದಿ 30 ನಿಮಿಷ ಮೀಟಿಂಗ್ ಮಾಡಿದರೆ ಸರಾಸರಿ 57 ಸಾವಿರ ರೂಪಾಯಿಂದ 1.3 ಲಕ್ಷ ರೂಪಾಯಿವರೆಗೆ ವೆಚ್ಚವಾಗಲಿದೆ. ಇನ್ನು ಮೀಟಿಂಗ್‌ನಲ್ಲಿ ಉದ್ಯೋಗಿಗಳ ಸಂಖ್ಯೆ,ಸಮಯ ಹೆಚ್ಚಾದಂತೆ ವೆಚ್ಚವೂ ಹೆಚ್ಚಾಗಲಿದೆ.

ಶಾಪಿಫೈ ಕಂಪನಿ ಹೆಚ್ಚಿನ ಸಮಯ ಅನಗತ್ಯ ಮೀಟಿಂಗ್ ಆಯೋಜಿಸಿ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಗಿ ಉದ್ಯೋಗಿಗಳು ಉತ್ಪಾದನೆಯಲ್ಲಿ ಹೆಚ್ಚಿನ ಸಮಯ ವ್ಯಯಿಸುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಅನಗತ್ಯ ಮೀಟಿಂಗ್‌ಗಳಿಂದ ಕಂಪನಿ ದುಬಾರಿ ವೆಚ್ಚ ಮಾಡಲಾಗುತ್ತಿತ್ತು. 

ಎಂಗೇಜ್ಮೆಂಟ್ ಕನ್ಸಲ್ಟೆನ್ಸಿ ಸರ್ವೆಯಲ್ಲಿ ಶೇಕಡಾ 46 ರಷ್ಟು ಕಂಪನಿಯ ಮೀಟಿಂಗ್‌ಗಳು ಅನಗತ್ಯವಾಗಿರುತ್ತದೆ. ಇದರಿಂದ ಉದ್ಯೋಗಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ ಅನ್ನೋ ಮಾಹಿತಿಯನ್ನು ನೀಡಿದೆ. ಇಷ್ಟೇ ಅಲ್ಲ ಅನಗತ್ಯ ಮೀಟಿಂಗ್ ಮುಗಿಸಿ ಉದ್ಯೋಗಿಗಳು ಮತ್ತೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕೆಲಸ ಮಯವೇ ಹಿಡಿಯುತ್ತಾರೆ  ಎಂದು ಅಧ್ಯಯನ ವರದಿ ಹೇಳಿದೆ.

ನೀವು ಈ ಸ್ಟಾಕ್‌ನಲ್ಲಿ 10 ವರ್ಷದ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 10 ಲಕ್ಷ ರೂ. ಇರ್ತಿತ್ತು!

ಉದ್ಯೋಗಿಗಳ ಜೊತೆ ಸಭೆ ಪರಿಪೂರ್ಣವಾಗಿರಬೇಕು, ಪರಿಣಾಮ ಬೀರಬೇಕು. ಅಧಿಕಾರ ಇದೆ ಎಂದು ಸುಖಾಸುಮ್ಮನೆ ಮೀಟಿಂಗ್ ಆಯೋಜಿಸುವುದು ಕಂಪನಿ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಶಾಪಿಫೈ ಹೇಳಿದೆ.
 

Follow Us:
Download App:
  • android
  • ios