SBI ಹಾಗೂ ICICI ಬ್ಯಾಂಕ್ ಗ್ರಾಹಕರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಈ ಎರಡೂ ಬ್ಯಾಂಕ್ ಗಳೂ ಕೂಡ ಇದೀಗ  ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಶೇ.0.20ರಷ್ಟುಏರಿಕೆ ಮಾಡಿವೆ.

ನವದೆಹಲಿ: ಗೃಹ ಮತ್ತು ವಾಹನ ಸಾಲ ಪಡೆದವರಿಗೆ ಬ್ಯಾಂಕ್‌ಗಳು ಮತ್ತೆ ಶಾಕ್‌ ನೀಡಿವೆ. ಸೆ.1ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ಗಳು ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಶೇ.0.20ರಷ್ಟುಏರಿಕೆ ಮಾಡಿವೆ.

ಹೀಗಾಗಿ ಸಾಲದ ಮೇಲೆ ಬಡ್ಡಿದರ ವಿಧಿಸಲು ಮೂಲವಾಗಿ ಬಳಸುವ ಒಂದು ವರ್ಷದ ಎಂಸಿಎಲ್‌ಆರ್‌ ದರವನ್ನು ಶೇ.0.20ರಷ್ಟುಹೆಚ್ಚಿಸಲಾಗಿದೆ. ಹೀಗಾಗಿ ಇದುವರೆಗೆ ಶೇ.8.45ರಷ್ಟುಇದ್ದ ಗೃಹಸಾಲದ ಬಡ್ಡಿದರಗಳು ಶೇ.8.65ಕ್ಕೆ ಹೆಚ್ಚಳವಾಗಿದೆ. ಉದಾಹರಣೆಗೆ ಗ್ರಾಹಕರೊಬ್ಬರು 20 ವರ್ಷದ ಅವಧಿಗೆ 30 ಲಕ್ಷ ರು. ಗೃಹ ಸಾಲ ಪಡೆದಿದ್ದರೆ, ಅವರ ಮಾಸಿಕ ಇಎಂಐನಲ್ಲಿ 380 ರು. ಏರಿಕೆಯಾಗಲಿದೆ.