ಮದ್ಯಪ್ರಿಯರಿಗೆ ಶಾಕ್‌, ಈ 6 ಬಿಯರ್‌ಗಳ ಬೆಲೆ 10 ರಿಂದ 45 ರೂಪಾಯಿವರೆಗೆ ಏರಿಕೆ!

ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬಿಯರ್‌ಗಳ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದೆ.

Shock for alcohol lovers in Karnataka prices of 6 major beers increase from Rs 10 to Rs 45 san

ಬೆಂಗಳೂರು (ಜ.20): ನಿರೀಕ್ಷೆಯಂತೆಯೇ ರಾಜ್ಯದಲ್ಲಿ ಬಿಯರ್‌ಗಳ ಬೆಲೆಯಲ್ಲಿ ಅಬಕಾರಿ ಇಲಾಖೆ ದೊಡ್ಡ ಮಟ್ಟದ ಏರಿಕೆ ಮಾಡಿದೆ. ಹಾಗಂತ ಎಲ್ಲಾ ಬ್ರ್ಯಾಂಡ್‌ನ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕೈಗೆಟುವಂತಿದ್ದ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದೆ.  10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ‌ ಹೆಚ್ಚಳ ಮಾಡಿದೆ. ಕಳೆದ ಒಂದೇ ವರ್ಷದಲ್ಲಿ ಕರ್ನಾಟಕದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

ಇನ್ನು ಯಾವೆಲ್ಲಾ ಬಿಯರ್‌ಗಳಿಗೆ ಬೆಲೆ ಏರಿಕೆ ಮಾಡಲಾಗಿದೆ ಅನ್ನೋದನ್ನ ನೋಡೋದಾದರೆ, ಲಜೆಂಡ್‌ ಬಿಯರ್‌ ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಇದು ಮಾರಾಟವಾಗಲಿದೆ.

ಸರ್ಕಾರದಿಂದ ಕುಡುಕರ ಲೂಟಿ, ರಾಜ್ಯದಲ್ಲಿ ಬಿಯರ್‌ ದರ ಗರಿಷ್ಠ 50 ರೂಪಾಯಿ ಏರಿಕೆ!

ಇನ್ನು ಬ್ಲ್ಯಾಕ್‌ ಫೋರ್ಟ್‌ ಹೆಸರಿನ ಬಿಯರ್‌ಗೆ 15 ರೂಪಾಯಿ ದರ ಏರಿಕೆ ಮಾಡಲಾಗಿದೆ. ಇಂದಿನಿಂದ ಬಾಟಲ್‌ಗೆ 160 ರೂಪಾಯಿ ಆಗಲಿದೆ. ಹಂಟರ್‌ ಬಿಯರ್‌ನ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 190 ರೂಪಾಯಿ ಆಗಲಿದೆ. ಅದರೊಂದಿಗೆ ವುಡ್‌ಪೀಕರ್‌ ಕ್ರೆಸ್ಟ್‌ ಹಾಗೂ ವುಡ್‌ಪೀಕರ್‌ ಗ್ಲೈಡ್‌ ಬಿಯರ್‌ ಬೆಲೆಯಲ್ಲಿ ತಲಾ 10 ರೂಪಾಯಿ ಏರಿಕೆಯಾಗಿದೆ. ಈ ಬಿಯರ್‌ಗಳು ಕ್ರಮವಾಗಿ 250 ಹಾಗೂ 240 ರೂಪಾಯಿಗೆ ಇಂದಿನಿಂದ ಸಿಗಲಿದೆ.

ಈ ರಾಜ್ಯಕ್ಕೆ ಬಿಯರ್‌ ಸರಬರಾಜು ಮಾಡೋದಿಲ್ಲ ಎಂದ ಕಿಂಗ್‌ಫಿಶರ್‌ ಬ್ರ್ಯಾಂಡ್‌!

Latest Videos
Follow Us:
Download App:
  • android
  • ios