ಅಂಬಾನಿ ಕುಟುಂಬದ ಮಹಿಳೆಯರು ಫ್ಯಾಷನ್‌ನಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ನೀತಾ ಅಂಬಾನಿ ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಸೊಸೆಯಂದಿರಾದ ಶ್ಲೋಕಾ ಮತ್ತು ರಾಧಿಕಾ ಕೂಡ ಟ್ರೆಂಡಿ ಉಡುಪುಗಳಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಶ್ಲೋಕಾ ಅಂಬಾನಿ ಸುಮಾರು 10 ಲಕ್ಷ ರೂಪಾಯಿ ಬೆಲೆಯ ಮಿನಿ ಡ್ರೆಸ್ ಧರಿಸಿ ಪತಿ ಆಕಾಶ್ ಜೊತೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಫ್ಯಾಷನ್ (Fashion) ಅಂತ ಬಂದಾಗ ನಮ್ಮ ಗಮನ ಸೆಳೆಯೋದು ಅಂಬಾನಿ ಕುಟುಂಬ (Ambani family) ದ ಮಹಿಳೆಯರು. ಯಾವ್ದೇ ಫಂಕ್ಷನ್ ಇರಲಿ ಅಂಬಾನಿ ಕುಟುಂಬದ ಮಹಿಳೆಯ ಸ್ಟೈಲ್ ನಲ್ಲಿ ಒಂದು ಕೈ ಮುಂದಿರ್ತಾರೆ. ಫ್ಯಾಷನ್ ಐಕಾನ್ ಎಂದೇ ನೀತಾ ಅಂಬಾನಿ ಪ್ರಸಿದ್ಧಿ ಪಡೆದಿದ್ದಾರೆ. ನೀತಾ ಅಂಬಾನಿ ಮಾತ್ರವಲ್ಲ ನೀತಾ ಅಂಬಾನಿಯ ಇಬ್ಬರು ಸೊಸೆಯಂದಿರಾದ ಶ್ಲೋಕಾ ಅಂಬಾನಿ (Shloka Ambani) ಹಾಗೂ ರಾಧಿಕಾ ಕೂಡ ಫ್ಯಾಷನ್ ವಿಷ್ಯದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ನೀತಾ ಅಂಬಾನಿ ಮಗಳು ಇಶಾ ಅಂಬಾನಿ, ಅನೇಕ ಇವೆಂಟ್ಗಳಲ್ಲಿ ತಮ್ಮ ಫ್ಯಾಷನ್ಸ್ ಸೆನ್ಸ್ನಿಂದ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಉಡುಗೆ ಇರಲಿ ಇಲ್ಲ ಮಾಡರ್ನ್ ಡ್ರೆಸ್ ಇರಲಿ, ಎಲ್ಲದಕ್ಕೂ ಸೈ ಎನ್ನುವ ಅಂಬಾನಿ ಸೊಸೆ ಶ್ಲೋಕಾ ಈಗ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಪತಿ ಆಕಾಶ್ ಅಂಬಾನಿ ಜೊತೆ ನೈಟ್ ಔಟ್ ಮಾಡಿದ ಶ್ಲೋಕಾ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. 

ಮಿನಿ ಡ್ರೆಸ್ ನಲ್ಲಿ ಮಿಂಚಿದ ಶ್ಲೋಕಾ ಅಂಬಾನಿ : ಆಕಾಶ್ ಜೊತೆ ನೈಟ್ ಔಟ್ ಮಾಡಿದ್ದ ಶ್ಲೋಕಾ, ವ್ಯಾಲೆಂಟಿನೋಸ್ ಕ್ರೆಪ್ ಕೌಚರ್ ಸೀಕ್ವಿನ್ ಎಂಬಲಿಶ್ಡ್ ನ ಗುಲಾಬಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು. ಇಟಲಿಯಲ್ಲಿ ಉಣ್ಣೆ ಮತ್ತು ರೇಷ್ಮೆಯ ಐಷಾರಾಮಿ ಮಿಶ್ರಣದಿಂದ ತಯಾರಾದ ಡ್ರೆಸ್ ಇದು. ರೌಂಡ್ ನೆಕ್ ಜೊತೆ ಸಣ್ಣ ಸ್ಲಿವ್ ಇದಕ್ಕಿದೆ. ಶೈನಿಂಗ್ ಹೊಂದಿರುವ ಈ ಡ್ರೆಸ್ ರಾತ್ರಿ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ. ಈ ಡ್ರೆಸ್ಗೆ ಶ್ಲೋಕಾ ಮತ್ತಷ್ಟು ಮೆರಗು ನೀಡಿದ್ದು ಅವರ ಎಕ್ಸಸರಿಸ್. ವ್ಯಾಲೆಂಟಿನೋ ಡ್ರೆಸ್ ಜೊತೆ ಶ್ವೇತಾ ಅಕ್ವಾಝುರಾದ ಸಿಲ್ವರ್ ಟಕಿಲಾ ಹೀಲ್ಸ್‌ ಧರಿಸಿದ್ದರು. ದೊಡ್ಡ ಗಾತ್ರದ ವಜ್ರದ ಕಿವಿಯೋಲೆ ಹಾಗೂ ಬಳೆ ಅವರನ್ನು ಮತ್ತಷ್ಟು ಆಕರ್ಷಕಗೊಳಿಸಿತ್ತು. ಟೋನ್ ಮೇಕಪ್ ಆರಿಸಿಕೊಂಡಿದ್ದ ಅವರು ಕೂದಲನ್ನು ಕಟ್ಟಿದ್ದರು. 

ಶುಭ ಸಮಾರಂಭಗಳಿಗಾಗಿ ಪಾಕಿಸ್ತಾನ್ ಶೈಲಿಯ ಅದ್ಭುತ ಕುರ್ತಿಗಳು

ಶ್ಲೋಕಾ ಅಂಬಾನಿ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು? : ಪತಿ ಆಕಾಶ್ ಅಂಬಾನಿ ಜೊತೆ ಸ್ಟನ್ನಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಶ್ಲೋಕಾ ಅಂಬಾನಿ ಧರಿಸಿದ್ದ ಮಿನಿ ಡ್ರೆಸ್ ಬೆಲೆ, ಫಾರ್ಫೆಚ್ ವೆಬ್‌ಸೈಟ್ ಪ್ರಕಾರ, ಸುಮಾರು 11,580 ಯುರೋ. ಅಂದರೆ ಸರಿಸುಮಾರು 10 ಲಕ್ಷ ರೂಪಾಯಿ. ಇನ್ನು ಅವರು ಧರಿಸಿದ್ದ ಅಕ್ವಾಝುರಾ ಹೀಲ್ಸ್ ಬೆಲೆ 1150 ಯುರೋ. ಅಂದ್ರೆ ಸುಮಾರು 1 ಲಕ್ಷ ರೂಪಾಯಿ. ದುಬಾರಿ ಬೆಲೆಯ ಡ್ರೆಸ್ ಹಾಗೂ ಹೀಲ್ಡ್ ಧರಿಸಿ ಶ್ಲೋಕಾ ಗಮನ ಸೆಳೆದ್ರೆ, ಆಕಾಶ್ ಅಂಬಾನಿ ಸರಳ, ಕ್ಲಾಸಿ ಡ್ರೆಸ್ ಧರಿಸಿದ್ರು. ಅವರು ಕಪ್ಪು ಟಿ-ಶರ್ಟ್ ಮೇಲೆ ನೇವಿ ಬ್ಲೂ ವೆಲ್ವೆಟ್ ಡಿನ್ನರ್ ಜಾಕೆಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. 

ವಾರಕ್ಕೆ 70 -90 ಗಂಟೆ ಕೆಲ್ಸ ಎಷ್ಟು ಸರಿ? ಇಲ್ಲಿದೆ ಆಕಾಶ್ ಅಂಬಾನಿ ಅಭಿಪ್ರಾಯ

ಮುಖೇಶ್ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿ. ಶ್ಲೋಕಾ, ಉದ್ಯಮಿ ರಸ್ಸೆಲ್ ಮೆಹ್ತಾ ಪುತ್ರಿ. ಇಬ್ಬರು ಮಾರ್ಚ್ 9. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಸ್ನೇಹಿತೆ ಶ್ಲೋಕಾರನ್ನು ಆಕಾಶ್ ಮೆಚ್ಚಿ ಮದುವೆಯಾಗಿದ್ದಾರೆ. ಮದುವೆ ಅದ್ಧೂರಿಯಾಗಿ ನಡೆದಿತ್ತು. ಇಬ್ಬರಿಗೆ ಮುದ್ದಾದ ಇಬ್ಬರು ಮಕ್ಕಳಿವೆ. ಇಬ್ಬರು ಮಕ್ಕಳ ತಾಯಿಯಾದ್ಮೇಲೂ ಶ್ಲೋಕಾ, ಗ್ಲಾಮರ್ ಕಳೆದುಕೊಂಡಿಲ್ಲ. ಇತ್ತೀಚಿಗೆ ಮುಂಬೈ ಟೆಕ್ ವೀಕ್‌ನಲ್ಲಿ ಭಾಗವಹಿಸಿದ್ದ ಆಕಾಶ್, ಪತ್ನಿ ಶ್ಲೋಕಾ ಮೇಲಿರುವ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದರು. ಶ್ಲೋಕಾ ಜೊತೆ ಡೇಟ್ ನೈಟ್ ಅಥವಾ ಹುಡುಗರ ಜೊತೆ ಗೇಮ್ ನೈಟ್, ಇದ್ರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ತೀರಿ ಎಂದು ಹರ್ಷ್ ಜೈನ್ ಕೇಳಿದ್ದರು. ಅದಕ್ಕೆ ಶ್ಲೋಕ ಜೊತೆ ಗೇಮಿಂಗ್ ನೈಟ್ ಎನ್ನುತ್ತ ತಮಾಷೆ ಮಾಡಿದ್ರು ಆಕಾಶ್ ಅಂಬಾನಿ.