ಕೆಲಸದ ಸಮಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, ಕೆಲಸದ ಗುಣಮಟ್ಟ ಮುಖ್ಯವೆಂದಿದ್ದಾರೆ. ಉದ್ಯೋಗಿಗಳು ಕಚೇರಿಯಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದಕ್ಕಿಂತ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ. ಕೆಲಸ ಮತ್ತು ಕುಟುಂಬ ಎರಡೂ ಮುಖ್ಯವೆಂದು ಅವರು ಮುಂಬೈ ಟೆಕ್ ವೀಕ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ನಾರಾಯಣ ಮೂರ್ತಿ 70 ಗಂಟೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದರು.

ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡ್ಬೇಕು ಎನ್ನುವ ಬಗ್ಗೆ ಅನೇಕ ದಿನಗಳಿಂದ ಚರ್ಚೆ ನಡೀತಾನೇ ಇದೆ. ವಾರದಲ್ಲಿ 9೦ ಗಂಟೆ ಕೆಲ್ಸ ಮಾಡ್ಬೇಕು, 70 ಗಂಟೆ ಕೆಲ್ಸ ಮಾಡ್ಬೇಕು ಎನ್ನುವ ವಾದ – ಪ್ರತಿವಾದಗಳ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ (Reliance Industries Chairman Mukesh Ambani,) ಮಗ ಹಾಗೂ ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ (Reliance Jio Infocomm Chairman Akash Ambani) ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಅವರು ಉದ್ಯೋಗಿ ಕೆಲಸದ ಸಮಯಕ್ಕಿಂತ ಕೆಲಸದ ಕ್ವಾಲಿಟಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಉದ್ಯೋಗಿ ಎಷ್ಟು ಗಂಟೆ ಕೆಲಸ ಮಾಡ್ತಾರೆ ಎನ್ನುವುದಕ್ಕಿಂತ ಹೇಗೆ ಕೆಲಸ ಮಾಡ್ತಾರೆ ಅನ್ನೋದು ಮುಖ್ಯವಾಗುತ್ತೆ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ. 

ಒಬ್ಬ ವ್ಯಕ್ತಿ, ಕಚೇರಿಯಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದಕ್ಕಿಂತ ಕೆಲಸದ ಗುಣಮಟ್ಟ ಮುಖ್ಯವಾಗಿದೆ ಎಂದಿದ್ದಾರೆ. ಕೆಲಸ ಮತ್ತು ಕುಟುಂಬ ಎರಡೂ ತಮ್ಮ ಜೀವನದಲ್ಲಿ ದೊಡ್ಡ ಆದ್ಯತೆಗಳಾಗಿವೆ ಮತ್ತು ಒಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಆದ್ಯತೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ. 

ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ 2 ಸಾವಿರ ಇಳಿಕೆ; ಇತ್ತ LPG ಸಿಲಿಂಡರ್ ಕಥೆ ಏನು?

ಮುಂಬೈ ಟೆಕ್ ವೀಕ್ ಕಾರ್ಯಕ್ರಮದಲ್ಲಿ ಆಕಾಶ್ ಅಂಬಾನಿ ಪಾಲ್ಗೊಂಡಿದ್ದರು. ಈ ವೇಳೆ ಆಕಾಶ್ ಅಂಬಾನಿ ಒಂದು ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡ್ಬೇಕು ಎನ್ನುವ ವಿಷ್ಯವನ್ನು ಪ್ರಸ್ತಾಪಿಸಿದ್ದಾರೆ. ನಾನು ಕೆಲಸದಲ್ಲಿ ಕಳೆಯುವ ಸಮಯ ಮತ್ತು ಗಂಟೆಯ ಬಗ್ಗೆ ಯೋಚಿಸುವುದಿಲ್ಲ. ನೀವು ಕೆಲಸ ಮಾಡುವ ಗುಣಮಟ್ಟಕ್ಕೆ ಆದ್ಯತೆ ನೀಡ್ತೇನೆ ಎಂದಿದ್ದಾರೆ. 

ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಕೆಲ ತಿಂಗಳಿಂದ ಕೆಲಸದ ಸಮಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಉದ್ಯೋಗಿ ಎಷ್ಟು ಸಮಯ ಕೆಲ್ಸ ಮಾಡ್ಬೇಕು ಎನ್ನುವ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗ್ತಿದೆ. ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ, ಭಾರತೀಯರು ಕಷ್ಟಪಟ್ಟು ಕೆಲಸ ಮಾಡ್ಬೇಕು ಎಂದಿದ್ದರು. ಅವರು ದೇಶವನ್ನು ಮುನ್ನಡೆಸಲು ನಾವು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡ್ಬೇಕು ಎಂದು ಸಲಹೆ ನೀಡಿದ್ರು. ನಾರಾಯಣ ಮೂರ್ತಿ ಹೇಳಿಕೆ ನಂತ್ರ ಈ ವಿಷ್ಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಗ ನಾರಾಯಣ ಮೂರ್ತಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ವಾರದಲ್ಲಿ 70 ಗಂಟೆ ಕೆಲಸ ಮಾಡ್ಬೇಕು ಎಂಬುದು ನಿಮ್ಮ ಆಯ್ಕೆಯಷ್ಟೆ. ಅದ್ರಲ್ಲಿ ಒತ್ತಡವಿಲ್ಲ. ಯಾರೋಬ್ಬರೂ ಒತ್ತಡ ಹೇರಬಾರದು. ನಾನೂ ಬೆಳಿಗ್ಗೆ ಆರು ಇಪ್ಪತ್ತಕ್ಕೆ ಕಚೇರಿಗೆ ಹೋಗಿ ರಾತ್ರಿ ಎಂಟು ಮೂವತ್ತಕ್ಕೆ ವಾಪಸ್ ಬರ್ತೇನೆ ಎಂದಿದ್ದರು.

ಆತ್ಮವಿಶ್ವಾಸ ಕಡಿಮೆಯಾಗಿದೆಯಾ? ವೃತ್ತಿ ಬದುಕು ಬದಲಿಸಬಲ್ಲ ಈ 6 ಪುಸ್ತಕಗಳನ್ನ ಓದಿ!

ನಾರಾಯಣ ಮೂರ್ತಿ ನಂತ್ರ ಎಲ್ ಆಂಡ್ ಟಿ ಅಧ್ಯಕ್ಷ ಎಸ್. ಎನ್ . ಸುಬ್ರಹ್ಮಣ್ಯನ್ ಹೇಳಿಕೆ ವಿವಾದ ಸೃಷ್ಟಿಸಿತ್ತು. ಎಲ್. ಎನ್. ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಮಾಡುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಭಾನುವಾರವೂ ಕೆಲ್ಸ ಮಾಡಿ, ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ತಾ ಕುಳಿತುಕೊಳ್ತೀರಿ ಎಂದು ಸುಬ್ರಹ್ಮಣ್ಯನ್ ಕೇಳಿದ್ದರಲ್ಲದೆ, ತಮ್ಮ ಕಚೇರಿ ಸಿಬ್ಬಂದಿ 90 ಗಂಟೆ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಅದೇ ಸಮಯದಲ್ಲಿ, ಒಂದು ಗುಂಪು ವಾರಕ್ಕೆ 50 ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡುವಂತೆ ವಾದ ಮಂಡಿಸಿದೆ. ನಿರಂತರ ಕಚೇರಿ ಕೆಲಸದಿಂದ ಆರೋಗ್ಯ ಹಾಳಾಗುತ್ತದೆ, ನೌಕರರಿಗೆ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗೋದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.