ಮುಂಬೈ (ಅ. 15): ಎಚ್‌ಸಿಎಲ್‌ ಕಂಪನಿಯ ಮುಖ್ಯಸ್ಥ ಶಿವನಾಡಾರ್‌, ಭಾರತೀಯ ಉದ್ಯಮಿಗಳ ಪೈಕಿ ಅತಿದೊಡ್ಡ ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಎಡೆಲ್‌ಗೀವ್‌ ಹುರೂನ್‌ ಇಂಡಿಯಾ ದಾನಿಗಳ ಪಟ್ಟಿ2019 ಬಿಡುಗಡೆಯಾಗಿದ್ದು, ಅದರಲ್ಲಿ ನಾಡಾರ್‌ಗೆ ಈ ಸ್ಥಾನ ಪ್ರಾಪ್ತವಾಗಿದೆ.  ಇದೇ ವೇಳೆ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ 2ನೇ ಸ್ಥಾನದಲ್ಲಿ ಮತ್ತು ಭಾರತದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಮೂರನೇ ಸ್ಥಾನದಲ್ಲಿದ್ದಾರೆ.  

ಹಲೋ ಕಾಶ್ಮೀರ್...72 ದಿನಗಳ ಬಳಿಕ ಕಣಿವೆಯಲ್ಲಿ ರಿಂಗಣಿಸಿದ ಮೊಬೈಲ್

ನಾಡರ್‌ ಮತ್ತು ಅವರ ಕುಟುಂಬ 826 ಕೋಟಿ ರು. ದಾನ ಮಾಡಿದರೆ, ಪ್ರೇಮ್‌ಜಿ 453 ಕೋಟಿ ರು ಹಾಗೂ ಅಂಬಾನಿ 402 ಕೋಟಿ ರು. ಸಂಪತ್ತನ್ನು ದಾನ ಮಾಡಿದ್ದಾರೆ. ಸಾಮಾಜಿಕ ಒಳಿತಿಗಾಗಿ 5 ಕೋಟಿಗಿಂತ ಹೆಚ್ಚಿನ ದಾನ ಮಾಡಿದವರ ಸಂಖ್ಯೆ ಒಂದು ವರ್ಷದಲ್ಲಿ ದುಪ್ಪಟ್ಟಾಗಿದ್ದು, 38ರಿಂದ 72ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟಾರೆಯಾಗಿ ಸಾಮಾಜಿಕ ಒಳಿತಿಗಾಗಿ ನೀಡಿದ ದಾನದ ಪ್ರಮಾಣವೂ ದುಪ್ಪಟ್ಟಾಗಿದ್ದು, 4,391 ಕೋಟಿ ರು. ತಲುಪಿದೆ ಎಂದು ವರದಿ ತಿಳಿಸಿದೆ. ದಾನಕ್ಕೆ ಶಿಕ್ಷಣ ಅತ್ಯಂತ ಮೆಚ್ಚಿನ ಕ್ಷೇತ್ರವೆನಿಸಿಕೊಂಡಿದೆ. ಬಳಿಕ ಆರೋಗ್ಯಸೇವೆಗೆ ಹೆಚ್ಚಿನ ದಾನ ನೀಡಲಾಗಿದೆ.