Asianet Suvarna News Asianet Suvarna News

ಹಲೋ ಕಾಶ್ಮೀರ್... 72 ದಿನಗಳ ಬಳಿಕ ಕಣಿವೆಯಲ್ಲಿ ರಿಂಗಣಿಸಿದ ಮೊಬೈಲ್

72 ದಿನಗಳ ಬಳಿಕ ಕಣಿವೆಯಲ್ಲಿ  ರಿಂಗಣಿಸಿದ ಮೊಬೈಲ್ ಪುನಾರಂಭಗೊಂಡ ಪೇಯ್ಡ್ ಮೊಬೈಲ್ ಸೇವೆ | 2 ತಿಂಗಳ ಬಳಿಕ ಕಾಶ್ಮೀರಿಗಳಲ್ಲಿ  ಬಕ್ರೀದ್ ಸಂಭ್ರಮ

postpaid mobile phone services restored in kashmir 72 days after lockdown
Author
Bengaluru, First Published Oct 15, 2019, 8:11 AM IST

ಶ್ರೀನಗರ (ಅ. 15): ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದು ಮಾಡುವುದಕ್ಕೂ ಪೂರ್ವಭಾವಿಯಾಗಿ ಕಣಿವೆಯಾದ್ಯಂತ ಸಂಪೂರ್ಣವಾಗಿ ಸಂವಹನ ಮಾಧ್ಯಮದ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದ್ದು, ಒಟ್ಟು 40 ಲಕ್ಷ ಗ್ರಾಹಕರಿಗೆ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಪುನಾರಂಭಿಸಲಾಗಿದೆ.

ಕರ್ನಾಟಕದಲ್ಲಿ ಬಾಂಗ್ಲಾ ಉಗ್ರರ ಅಡಗುತಾಣ

ಸುಮಾರು 72 ದಿನಗಳ ಬಳಿಕ ಈ ಸೇವೆಗಳನ್ನು ಆರಂಭಿಸಲಾಗಿದ್ದು, ಕರೆ ಹಾಗೂ ಎಸ್ ಎಂಎಸ್ ಸೇವೆಗಳನ್ನು ಮಾತ್ರ ಮುಕ್ತಗೊಳಿಸಲಾಗಿದೆ. ಇಂಟರ್‌ನೆಟ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿದಿದೆ.
ಬಕ್ರೀದ್‌ಗಿಂತ ಒಂದು ವಾರ ಮುಂಚಿತವಾಗಿ ಸಂವಹನ ಮಾಧ್ಯಮಗಳನ್ನು ಕಡಿತಗೊಳಿಸಲಾಗಿತ್ತು. ನಿಷೇಧ ತೆರವಿನಿಂದ ಬಕ್ರೀದ್ ಹಬ್ಬದಷ್ಟೇ ಸಂತೋಷವಾಗಿದೆ ಎಂದು ಕಾಶ್ಮೀರಿ ಮಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ಎರಡು ತಿಂಗಳ ಬಳಿಕ ಸಂಬಂಧಿಕರಿಗೆ ಕರೆ ಮಾಡಿ ಪರಸ್ಪರ ಈದ್ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಜತೆಗೆ ಮೊಬೈಲ್ ಬಳಕೆ ಮೇಲಿನ ನಿಷೇಧ ತೆರವಿನಿಂದ ಉಂಟಾಗಬಹುದಾದ ಸಾಂಭವ್ಯ ತೊಂದರೆಗಳನ್ನು ಎದುರಿಸಲು ಸಜ್ಜಾಗಿರಬೇಕೆಂದು ಸೇನಾ ಪಡೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Follow Us:
Download App:
  • android
  • ios