Asianet Suvarna News Asianet Suvarna News

Invest on Shares: ಐದು ವರ್ಷದಲ್ಲಿ ಲಕ್ಷಾಧಿಪತಿ ಕೋಟ್ಯಾಧಿಪತಿ ಮಾಡಿದ ಕಂಪನಿ

ಶ್ರೀಮಂತರಾಗಬೇಕೆಂಬುದು ಎಲ್ಲರ ಬಯಕೆ.ಇತ್ತೀಚಿನ ದಿನಗಳಲ್ಲಿ ರಾತ್ರಿ ಬೆಳಗಾಗೋದ್ರಲ್ಲಿ ಹಣದ ಮಳೆ ಸುರಿಯಬೇಕೆನ್ನುವವರೇ ಹೆಚ್ಚು. ಆದ್ರೆ ಅದು ಅಸಾಧ್ಯ. ಗಳಿಸಿದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ,ಶಾಂತಿಯಿಂದ ಕಾದಲ್ಲಿ ಐದಾರು ವರ್ಷಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ. ಅದಕ್ಕೆ ಷೇರು ಮಾರುಕಟ್ಟೆ ಉತ್ತಮ ನಿದರ್ಶನ.

Shares Made 10 Lakh Rupees to 1. 7 Crore in 5 Years
Author
Bangalore, First Published Dec 16, 2021, 2:17 PM IST

ಕೊರೊನಾ ನಂತರ ಜನರಲ್ಲಿ ಹೂಡಿಕೆ (Investment) ಬಗ್ಗೆ ಹೆಚ್ಚು ಉತ್ಸಾಹ ಕಂಡು ಬರುತ್ತಿದೆ. ಭವಿಷ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಿರುವ ಜನರು ಸುರಕ್ಷಿತ ಹೂಡಿಕೆಗೆ ಮಹತ್ವ ನೀಡುತ್ತಿದ್ದಾರೆ. ವಿಮಾ ಕಂಪನಿ,ಬ್ಯಾಂಕ್,ಅಂಚೆ ಕಚೇರಿಯ ಹೂಡಿಕೆ ಯೋಜನೆಗಳಲ್ಲಿ ಹಣ ಹೂಡುತ್ತಿದ್ದಾರೆ. ಇದ್ರ ಜೊತೆಗೆ ಜನರು ಷೇರು ಮಾರುಕಟ್ಟೆ (Stock Market)ಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಹೂಡಿಕೆಯು  ರಕ್ಷಿತ ಮತ್ತು ಸುಭದ್ರ  ಭವಿಷ್ಯಕ್ಕೆ ಪ್ರಮುಖವಾಗಿದೆ.  ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಅನೇಕರು ಷೇರು ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ದಿನ ಷೇರು ಮಾರುಕಟ್ಟೆಯಲ್ಲಿ ಬದಲಾವಣೆ ಕಾಣಬಹುದು. ಷೇರು ಮಾರುಕಟ್ಟೆ ಪಾರದರ್ಶಕವಾಗಿದೆ. ಷೇರುಗಳ ಬೆಲೆಗಳು ಆನ್ಲೈನ್ ನಲ್ಲಿ ಲಭ್ಯವಿದೆ. ಒಂದೇ ವೇದಿಕೆಯಲ್ಲಿ ಹೂಡಿಕೆ ಮಾಡಲು,ಖರೀದಿ ಮಾಡಲು ಅವಕಾಶ ಇಲ್ಲಿ ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ಹೆಜ್ಜೆಯಿಡಬೇಕು. 

ಪ್ರಸಿದ್ಧ ಕಂಪನಿಗಳಲ್ಲಿ ಮಾಡಿದ ಹೂಡಿಕೆಯೂ ಕೆಲವೊಮ್ಮೆ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಅನುಭವಿ ಬ್ರೋಕರ್ (Broker) ಆಯ್ಕೆ ಮಾಡಬೇಕಾಗುತ್ತದೆ. ನಂತ್ರ ನೀವು ಆಯ್ಕೆ ಮಾಡಿಕೊಂಡ ಷೇರು ಕಂಪನಿಯ ತಿಳಿಯಬೇಕಾಗುತ್ತದೆ. ಅನೇಕ ವರ್ಷಗಳ ಹಿಂದೆ ಹೂಡಿದ್ದ ಸಣ್ಣ ಪ್ರಮಾಣದ ಹಣ ಇಂದು ಲಕ್ಷಾಂತರ ರೂಪಾಯಿಯಾಗಿರುವ ಉದಾಹರಣೆಯಿದೆ. ಐದು ವರ್ಷಗಳ ಹಿಂದೆ ತಲಾ ಒಂದು ಲಕ್ಷದಂತೆ ಹೂಡಿದ್ದ 10 ಲಕ್ಷ ಹಣ ಈಗ 1.7 ಕೋಟಿಯಾಗಿದೆ. ವರದಿಯ ಪ್ರಕಾರ, ಗುಜರಾತ್‌ನ ಅದಾನಿ ಟ್ರಾನ್ಸ್ಮಿಷನ್ 2016 ಮತ್ತು 2021 ರ ನಡುವೆ ಅತಿದೊಡ್ಡ ಲಾಭ ಗಳಿಸಿದೆ. ಕಂಪನಿಯು ತನ್ನ ಹೂಡಿಕೆದಾರರ ಸಂಪತ್ತನ್ನು ವಾರ್ಷಿಕವಾಗಿ ಶೇಕಡಾ 93ರ ದರದಲ್ಲಿ ಹೆಚ್ಚಿಸಿದೆ.

ದೊಡ್ಡ ಲಾಭ ಗಳಿಸಿದ 10 ಷೇರುಗಳು : 
ಅದಾನಿ ಟ್ರಾನ್ಸ್ಮಿಷನ್ (Adani Transmission), ದೀಪಕ್ ನೈಟ್ರೈಟ್ (Deepak Nitrite), ಅದಾನಿ ಎಂಟರ್‌ಪ್ರೈಸಸ್ (Adani Enterprises), ತನ್ಲಾ ಪ್ಲಾಟ್‌ಫಾರ್ಮ್‌ (Tanla Platforms), ರುಚಿ ಸೋಯಾ (Ruchi Soya), ಅಲ್ಕಿಲ್ ಅಮೈನ್ಸ್ (Alkyl Amines), ವೈಭವ್ ಗ್ಲೋಬಲ್ (Vaibhav Global), ಎಪಿಎಲ್ ಅಪೊಲೊ ಟ್ಯೂಬ್‌ಗಳು(APL Apollo Tubes), ಪಿ & ಜಿ ಹೆಲ್ತ್ (P&G Health) ಮತ್ತು ಎಸ್ಕಾರ್ಟ್ಸ್ (Escorts). ಈ ಕಂಪನಿಗಳ ಶೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ.  

ಮಕ್ಕಳಿಗೆ ಆಧಾರ ಕಾರ್ಡ್ ಮಾಡಿಸೋದು ಹೇಗೆ?

ಯಾವ ಷೇರು ಎಷ್ಟು ಲಾಭಗಳಿಸಿದೆ ? : 
ದೀಪಕ್ ನೈಟ್ರೈಟ್ ಹೂಡಿಕೆದಾರರ ಸಂಪತ್ತನ್ನು ವಾರ್ಷಿಕವಾಗಿ ಶೇಕಡಾ 90 ರಷ್ಟು ಹೆಚ್ಚಿಸಿದೆ. ಇದರ ನಂತರ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 86ರಷ್ಟು ಸಂಪತ್ತನ್ನು ಹೆಚ್ಚಿಸಿದೆ. ತನ್ಲಾ ಪ್ಲಾಟ್‌ಫಾರ್ಮ್ ಗ್ರಾಹಕರ ಸಂಪತ್ತನ್ನು ಶೇಕಡಾ 85ರಷ್ಟು ಹೆಚ್ಚಿಸಿದೆ. ರುಚಿ ಸೋಯಾದಿಂದ ಗ್ರಾಹಕರ ಸಂಪತ್ತು ಶೇಕಡಾ 81ರಷ್ಟು ಹೆಚ್ಚಾಗಿದೆ. ಇನ್ನು ಅಲ್ಕಿಲ್ ಅಮೈನ್ಸ್ ಮೇಲೆ ಹೂಡಿಕೆ ಮಾಡಿದ್ದ ಗ್ರಾಹಕರ ಸಂಪತ್ತು ಶೇಕಡಾ 79ರಷ್ಟು ಹೆಚ್ಚಾಗಿದೆ.  ವೈಭವ್ ಗ್ಲೋಬಲ್ ಗ್ರಾಹಕರ ಸಂಪತ್ತು ಶೇಕಡಾ 64ರಷ್ಟು ಹೆಚ್ಚಾಗಿದೆ. ಹಾಗೆ ಎಪಿಎಲ್ ಅಪೋಲೋ ಟ್ಯೂಬ್ ಗ್ರಾಹಕರ ಸಂಪತ್ತನ್ನು ಶೇಕಡಾ 60ರಷ್ಟು ಹೆಚ್ಚಿಸಲು ನೆರವಾಗಿದೆ. ಪಿ & ಜಿ ಹೆಲ್ತ್, ಶೇಕಡಾ 57ರಷ್ಟು ಸಂಪತ್ತು ಹೆಚ್ಚಿಸಲು ನೆರವಾಗಿದೆ. ಎಸ್ಕಾರ್ಟ್ಸ್ ನಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರ ಸಂಪತ್ತು  ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ ಶೇಕಡಾ 56 ರಷ್ಟು ಹೆಚ್ಚಾಗಿದೆ. 

ಐದು ವರ್ಷಗಳಲ್ಲಿ ದೊಡ್ಡ ಬದಲಾವಣೆ : 
ಈ 10 ಷೇರುಗಳ ಪೈಕಿ 7 ಕಂಪನಿಗಳ ಷೇರುಗಳು 5 ವರ್ಷಗಳ ಹಿಂದೆ 20 ಅಥವಾ ಅದಕ್ಕಿಂತ ಕಡಿಮೆ P/E ನಲ್ಲಿ ವಹಿವಾಟು ನಡೆಸುತ್ತಿದ್ದವು. ಹೂಡಿಕೆದಾರರು ಕೈಗೆಟಕುವ ದರದಲ್ಲಿ ಇದನ್ನು ಖರೀದಿ ಮಾಡಿದ್ದರು.  

Follow Us:
Download App:
  • android
  • ios