Asianet Suvarna News Asianet Suvarna News

ಸೆನ್ಸೆಕ್ಸ್‌ 75,000: ಮೋದಿ ಪ್ರಧಾನಿಯಾದ ಬಳಿಕ 50,000 ಏರಿಕೆ..!

ನರೇಂದ್ರ ಮೋದಿ ಪ್ರಧಾನಿಯಾದ 2014ರಲ್ಲಿ ಷೇರುಪೇಟೆ ಸೂಚ್ಯಂಕ 25,000 ಇತ್ತು. ಹತ್ತು ವರ್ಷಗಳಲ್ಲಿ ಅದು 50,000 ಏರಿಕೆಯಾಗಿ 75,000 ಅಂಕಗಳನ್ನು ತಲುಪಿದೆ. ಇದೇ ವೇಳೆ, ನಿಫ್ಟಿ ಸೂಚ್ಯಂಕ ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ. ಬುಧವಾರ ಎನ್‌ಎಸ್‌ಇ 111 ಅಂಕ ಏರಿಕೆ ಕಂಡು, 22,753 ಅಂಕಗಳಲ್ಲಿ ಕೊನೆಗೊಂಡಿತು. 

Sensex Rose 50000 after PM Narendra Modi PM in India grg
Author
First Published Apr 11, 2024, 4:16 AM IST

ಮುಂಬೈ(ಏ.11): ಬಾಂಬೆ ಷೇರುಪೇಟೆ ಸೂಚ್ಯಂಕ ಬುಧವಾರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿ 75,000 ಅಂಕಗಳನ್ನು ತಲುಪಿದೆ. ಒಂದೇ ದಿನ 354 ಅಂಕಗಳಷ್ಟು ಏರಿದ ಸಂವೇದಿ ಸೂಚ್ಯಂಕ 75,038ರಲ್ಲಿ ಕೊನೆಗೊಂಡಿದೆ. ಅದರೊಂದಿಗೆ, ಹೂಡಿಕೆದಾರರ ಸಂಪತ್ತು ಒಂದೇ ದಿನ 2 ಲಕ್ಷ ಕೋಟಿ ರು.ಗಳಷ್ಟು ಏರಿಕೆಯಾಗಿದೆ. ವಿಶೇಷವೆಂದರೆ, ನರೇಂದ್ರ ಮೋದಿ ಪ್ರಧಾನಿಯಾದ 2014ರಲ್ಲಿ ಷೇರುಪೇಟೆ ಸೂಚ್ಯಂಕ 25,000 ಇತ್ತು. ಹತ್ತು ವರ್ಷಗಳಲ್ಲಿ ಅದು 50,000 ಏರಿಕೆಯಾಗಿ 75,000 ಅಂಕಗಳನ್ನು ತಲುಪಿದೆ.

ಇದೇ ವೇಳೆ, ನಿಫ್ಟಿ ಸೂಚ್ಯಂಕ ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ. ಬುಧವಾರ ಎನ್‌ಎಸ್‌ಇ 111 ಅಂಕ ಏರಿಕೆ ಕಂಡು, 22,753 ಅಂಕಗಳಲ್ಲಿ ಕೊನೆಗೊಂಡಿತು. ತ್ವರಿತವಾಗಿ ಮಾರಾಟವಾಗುವ ಎಫ್‌ಎಂಸಿಜಿ ಉತ್ಪನ್ನಗಳು, ಇಂಧನ ಹಾಗೂ ಲೋಹದ ಕಂಪನಿಗಳ ಷೇರಿನ ಬೆಲೆ ಭಾರಿ ಏರಿಕೆ ಕಂಡ ಪರಿಣಾಮ ಬುಧವಾರ ಷೇರು ಮಾರುಕಟ್ಟೆ ಹೊಸ ಎತ್ತರವನ್ನು ತಲುಪಿತು. ಐಟಿಸಿ, ಕೊಟಕ್‌ ಮಹಿಂದ್ರಾ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಏಷ್ಯನ್‌ ಪೇಂಟ್ಸ್‌, ಟೆಕ್‌ ಮಹಿಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ನೆಸ್ಲೆ ಕಂಪನಿಗಳ ಷೇರುಗಳು ದೊಡ್ಡ ಮಟ್ಟದ ಏರಿಕೆ ಕಂಡವು.

ಶೇರ್‌ ಮಾರ್ಕೆಟ್‌ನಲ್ಲಿ ರಕ್ತದೋಕುಳಿ, 906 ಪಾಯಿಂಟ್‌ ಕುಸಿದ ಸೆನ್ಸೆಕ್ಸ್‌; ಒಂದೇ ದಿನ ಕರಗಿದ 13 ಲಕ್ಷ ಕೋಟಿ ರೂಪಾಯಿ!

10 ವರ್ಷದಲ್ಲಿ ಅಗಾಧ ಏರಿಕೆ:

2014ರಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ 25,000 ಇತ್ತು. ಬಳಿಕ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಉದ್ಯಮಸ್ನೇಹಿ ನೀತಿಗಳಿಂದಾಗಿ ಷೇರುಪೇಟೆ ಭಾರೀ ಏರಿಕೆಯನ್ನು ದಾಖಲಿಸುತ್ತಾ ಸಾಗಿತು. ಅದು ಹತ್ತು ವರ್ಷಗಳಲ್ಲಿ 50,000ಗಳಷ್ಟು ಏರಿಕೆಯಾಗಿ, 75,000ವನ್ನು ತಲುಪಿತು. ಈ ಹತ್ತು ವರ್ಷಗಳಲ್ಲಿ ಬಿಎಸ್‌ಇಯಲ್ಲಿ ನೋಂದಾಯಿತವಾದ ಕಂಪನಿಗಳ ಮಾರುಕಟ್ಟೆ ಬಂಡವಾಳ ಐದು ಪಟ್ಟು ಏರಿಕೆಯಾಗಿದೆ.

ಸೆನ್ಸೆಕ್ಸ್‌ ಏರುಹಾದಿ

2014 - 25000
2018 - 35000
2019 - 40000
2019 - 50000
2021 - 60000
2023 - 70000
2024 - 75000

Follow Us:
Download App:
  • android
  • ios