ಶೇರ್‌ ಮಾರ್ಕೆಟ್‌ನಲ್ಲಿ ರಕ್ತದೋಕುಳಿ, 906 ಪಾಯಿಂಟ್‌ ಕುಸಿದ ಸೆನ್ಸೆಕ್ಸ್‌; ಒಂದೇ ದಿನ ಕರಗಿದ 13 ಲಕ್ಷ ಕೋಟಿ ರೂಪಾಯಿ!

ಬುಧವಾರ ಸ್ಟಾಕ್‌ ಮಾರ್ಕೆಟ್‌ನಲ್ಲಿ ರಕ್ತದೋಕುಳಿಯಾಗಿದೆ. ಸೆನ್ಸೆಕ್ಸ್‌ 906 ಅಂಕ ಕುಸಿದರೆ, ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ ಕ್ಯಾಪ್‌ ಸೂಚ್ಯಂಕದಲ್ಲಿ ಹಣ ಹಾಕಿದವರು ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಬುಧವಾರ ಒಂದೇ ದಿನ 13 ಲಕ್ಷ ಕೋಟಿ ಕರಗಿ ಹೋಗಿದೆ.

Sensex fell 906 points Smallcap index fell 2189 points investors lost 13 lakh crore san

ಮುಂಬೈ (ಮಾ.13): ಭಾರತದ ಷೇರು ಮಾರುಕಟ್ಟೆ ಬುಧವಾರ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್‌ 906 ಅಂಕ ಕುಸಿದು 72,761ಕ್ಕೆ ಇಳಿದಿದ್ದರೆ, ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಕೂಡ 338 ಅಂಕ ಕುಸಿದು 21,997 ಅಂಕಕ್ಕೆ ಇಳಿದಿದೆ. ಸೆನ್ಸೆಕ್ಸ್‌ನ ಒಟ್ಟು 30 ಷೇರುಗಳ ಪೈಕಿ 23 ಷೇರುಗಳು ಕುಸಿತ ಕಂಡಿವೆ. ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಕೂಡ ಇಂದು ಕುಸಿತ ಕಂಡಿವೆ. ಸ್ಮಾಲ್‌ಕ್ಯಾಪ್ ಸೂಚ್ಯಂಕವು 2,189 ಪಾಯಿಂಟ್‌ಗಳು (5.11%) ಕುಸಿದು 40,641 ಕ್ಕೆ ತಲುಪಿದೆ. ಮಿಡ್‌ಕ್ಯಾಪ್ ಸೂಚ್ಯಂಕವು 1,646 ಪಾಯಿಂಟ್‌ಗಳಷ್ಟು (4.20%) ಕುಸಿತ ಕಂಡಿದೆ. 37,591 ಮಟ್ಟದಲ್ಲಿ ಮುಕ್ತಾಯವಾಯಿತು. ಜೆಟ್ ಏರ್‌ವೇಸ್ ಷೇರುಗಳು ಸತತ ಎರಡನೇ ದಿನವಾದ ಇಂದು 5% ರಷ್ಟು ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿವೆ. 2.15 ರೂಪಾಯಿ (5.00%) ಏರಿಕೆ ಕಂಡು 45.20 ರೂಪಾಯಿಗೆ ಮುಟ್ಟಿದೆ. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಅಂದರೆ NCLAT ಜೆಟ್ ಏರ್ವೇಸ್ ಅನ್ನು ಜಲನ್-ಕಾಲ್ರಾಕ್ ಕನ್ಸೋರ್ಟಿಯಂ (JKC) ಗೆ ಹಸ್ತಾಂತರಿಸುವ ನಿರ್ಧಾರವನ್ನು ಎತ್ತಿಹಿಡಿದಿದೆ. ಈ ಕಾರಣಕ್ಕಾಗಿ ಜೆಟ್‌ ಏರ್‌ವೇಸ್‌ನ ಷೇರುಗಳು ಏರಿಕೆ ಕಂಡಿವೆ.

ಷೇರುಪೇಟೆಯ ಮಾರುಕಟ್ಟೆ ಮೌಲ್ಯ ನಿನ್ನೆ ಅಂದರೆ ಮಂಗಳವಾರ 385 ಲಕ್ಷ ಕೋಟಿ ರೂಪಾಯಿಗಳಲ್ಲಿ ಮುಕ್ತಾಯವಾಗಿತ್ತು. ಆದರೆ,  ಇಂದು 372 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಮಾರುಕಟ್ಟೆ ಮೌಲ್ಯದಲ್ಲಿ ₹ 13 ಲಕ್ಷ ಕೋಟಿ ರೂಪಾಯಿ ಇಳಿಕೆಯಾಗಿದೆ.

ಕಳೆದ 5 ದಿನಗಳಲ್ಲಿ ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು 7% ಕ್ಕಿಂತ ಹೆಚ್ಚು ಕುಸಿದಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯ ಅಧ್ಯಕ್ಷರ ಹೇಳಿಕೆಯ ನಂತರ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳಲ್ಲಿ ಕುಸಿತ ಕಂಡುಬರುತ್ತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳ ಹೆಚ್ಚಿನ ಮೌಲ್ಯಮಾಪನದ ಬಗ್ಗೆ ಸೆಬಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲಿಯೇ ಈ ಎರಡೂ ಸೂಚ್ಯಂಕಗಳಲ್ಲಿ ಭಾರೀ ಪ್ರಮಾಣದ ಮಾರಾಟ ಕಂಡುಬಂದಿವೆ.

ಷೇರುಪೇಟೆಗೆ ಎಚ್ ಡಿಎಫ್ ಸಿ ಪೆಟ್ಟು,ಕುಸಿದ ಸೆನ್ಸೆಕ್ಸ್, ನಿಫ್ಟಿ; 3.4ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಕೆಲವರು ಇದನ್ನು ಬಬಲ್‌ ಎಂದು ಕರೆಯುತ್ತಿದ್ದಾರೆ. ಆದರೆ, ಈ ಬಬಲ್‌ ದೊಡ್ಡದಾಗಲು ಬಿಡೋದು ಸರಿಯಲ್ಲ. ಇದು ಹೀಗೇ ಮುಂದುವರಿದರೆ, ಅದು ದೊಡ್ಡದಾಗುತ್ತದೆ. ಸ್ಫೋಟಗೊಂಡಾಗ ಅದು ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಇದು ಸರಿಯಾದ ಕ್ರಮವಲ್ಲ. ಈ ಕಂಪನಿಗಳ ಮೌಲ್ಯಮಾಪನಗಳು ಮೂಲಭೂತ ಅಂಶಗಳನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದರು. ಸೆಬಿ ಮುಖ್ಯಸ್ಥರ ಈ ಹೇಳಿಕೆಯ ಬೆನ್ನಲ್ಲಿಯೇ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.

ಹಣ ಬಿತ್ತಿ, ಹಣ ಬೆಳೆದ ಷೇರು ಮಾರ್ಕೆಟ್‌ ರೈತರು.. 2023ರಲ್ಲಿ 82 ಲಕ್ಷ ಕೋಟಿ ಶ್ರೀಮಂತರಾದ ಹೂಡಿಕೆದಾರರು!

Latest Videos
Follow Us:
Download App:
  • android
  • ios