ಮುಂಬೈ(ಮೇ.23): ಲೋಕಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಎಂಬುದು ನಿಚ್ಚಳವಾಗಿದೆ.

ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೇ, ಷೇರು ಮಾರುಕಟ್ಟೆ ಸೂಚ್ಯಂಕ ದಾಖಲೆ ಏರಿಕೆ ಕಂಡಿದೆ. 

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ನಿಫ್ಟಿ ಸೂಚ್ಯಂಕದಲ್ಲಿ 208 ಏರಿಕೆ ಕಂಡಿದ್ದು 11,945.90ಕ್ಕೆ ಏರಿಕೆ ಕಂಡಿದೆ. ಇನ್ನು ಬಿಎಸ್ಇ ಸೆನ್ಸೆಕ್ಸ್ ನಲ್ಲಿ 724 ಅಂಕ ಏರಿಕೆಯೊಂದಿಗೆ 39,835.17ಕ್ಕೆ ಏರಿಕೆ ಕಂಡಿದೆ. 

ಮೋದಿ ಮತ್ತೆ ಪ್ರಧಾನಿ ಎಂಬುದು ಖಚಿತವಾಗುತ್ತಿದ್ದಂತೇ ಷೇರು ಮಾರುಕಟ್ಟೆಯಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ.