ಮುಂಬೈ[ಮೇ.18]: 2019ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ದೇಶದಲ್ಲಿ ಸ್ಥಿರ ಸರ್ಕಾರ ರಚನೆಯಾಗಬಹುದಾದ ಸಾಧ್ಯತೆ ಇರಬಹುದಾದ ಕಾರಣದಿಂದಾಗಿ ಬಾಂಬೆ ಷೇರುಪೇಟೆ ಸೂಚ್ಯಂಕ ‘ಸೆನ್ಸೆಕ್ಸ್‌’ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ‘ನಿಫ್ಟಿ’ ಶುಕ್ರವಾರ ಭಾರೀ ಪ್ರಮಾಣದ ಏರಿಕೆ ಕಂಡಿವೆ.

ಸುಧಾರಣೆಗಳ ಮುಂದುವರಿಕೆ ಹಾಗೂ ಸ್ಥಿರ ಸರ್ಕಾರ ರಚನೆಯಾಗಲಿದೆ ಎಂಬ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿವಹಿವಾಟಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಶುಕ್ರವಾರ ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ 537 ಅಂಕಗಳ ಏರಿಕೆಯೊಂದಿಗೆ 37,930.77 ಅಂಕಗಳೊಂದಿಗೆ ತನ್ನ ವಹಿವಾಟನ್ನು ಮುಕ್ತಾಯಗೊಳಿಸಿತು.

ಹಾಗೆಯೇ, 150 ಅಂಕಗಳ ಏರಿಕೆ ಕಂಡಿರುವ ನಿಫ್ಟಿಯು 11,407.15 ಅಂಕಗಳೊಂದಿಗೆ ತನ್ನ ವಹಿವಾಟನ್ನು ಮುಗಿಸಿದೆ. ಈ ಮೂಲಕ ಈ ವಾರದಲ್ಲಿ ಸೆನ್ಸೆಕ್ಸ್‌ ಒಟ್ಟಾರೆ 467.78 ಅಂಕಗಳು ಹಾಗೂ ನಿಫ್ಟಿ128.25 ಅಂಕಗಳ ಏರಿಕೆ ದಾಖಲಿಸಿದಂತಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.