ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ| 1708 ಅಂಕಗಳ ಭಾರೀ ಕುಸಿತ
ಮುಂಬೈ(ಏ.13): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ 1708 ಅಂಕಗಳ ಭಾರೀ ಕುಸಿತ ಕಂಡು 47,883 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಫೆ.26 ನಂತರದ ಗರಿಷ್ಠ ದೈನಂದಿನ ಕುಸಿತವಾಗಿದೆ.
ಪರಿಣಾಮ ಹೂಡಿಕೆದಾರರ 8.77 ಲಕ್ಷ ಕೋಟಿ ರು. ಸಂಪತ್ತು ಒಂದೇ ದಿನದಲ್ಲಿ ಕರಗಿ ಹೋಗಿದೆ. ಇದೇ ವೇಳೆ ನಿಫ್ಟಿಸಹ 524.05 ಅಂಕಗಳ ಕುಸಿತ ಕಂಡು 14,310 ಅಂಕಗಳೊಂದಿಗೆ ದಿನವ ವಹಿವಾಟು ಮುಗಿಸಿದೆ.
ದೇಶದಲ್ಲಿ ಕೊರೋನಾ 2ನೇ ಅಲೆಯ ಪ್ರತಾಪ ಆರ್ಥಿಕತೆ ಮೇಲೆ ಬೀರಬಹುದಾದ ಅಡ್ಡಪರಿಣಾಮಗಳ ಭೀತಿಯು ಷೇರುಪೇಟೆಯ ಮೇಲೆ ಆತಂಕ ಕವಿಯುವಂತೆ ಮಾಡಿದೆ.
