Asianet Suvarna News Asianet Suvarna News

ಸೆನ್ಸೆಕ್ಸ್ ನಾಗಾಲೋಟ: ಮೋದಿ ಭಾರತದ ಕಣ್ಣೋಟ!

ನಾಗಾಲೋಟದತ್ತ ಭಾರತೀಯ ಷೇರು ಮಾರುಕಟ್ಟೆ! 38 ಸಾವಿರ ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್! ಸಾರ್ವಕಾಲಿಕ ದಾಖಲೆ ಬರೆದ ಷೇರು ಮಾರುಕಟ್ಟೆ

Sensex Hits 38,000 For First Time, Nifty At 11,495: 10 Points
Author
Bengaluru, First Published Aug 9, 2018, 12:17 PM IST

ಮುಂಬೈ(ಆ.9): ಭಾರತೀಯ ಷೇರು ಮಾರುಕಟ್ಟೆ ತನ್ನ ಅಂಕಗಳಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಗುರುವಾರ ಸೆನ್ಸೆಕ್ಸ್ 38 ಸಾವಿರ ಅಂಕಗಳ ಗಡಿ ದಾಟುವ ಮೂಲಕ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ.

ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 221 ಅಂಕಗಳ ಗಳಿಸುವ ಮೂಲಕ 38 ಸಾವಿರ ಗಡಿ ದಾಟಿದೆ. ಅಂತೆಯೇ ನಿಫ್ಚಿ ಕೂಡ 20 ಅಂಕಗಳ ಏರಿಕೆಯೊಂದಿಗೆ 11,464ಕ್ಕೆ ಏರಿಕೆಯಾಗಿದೆ.

ಇನ್ನು ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಗರಿಷ್ಠ ಲಾಭ ಗಳಿಸಿದ್ದು, ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ. 3.25ರಷ್ಟು ಏರಿಕೆಯಾಗಿದೆ. ಅಂತೆಯೇ ಟಾಟಾ ಮೋಟಾರ್ಸ್ ಶೇ.1.18ರಷ್ಟು, ಇನ್ಫೋಸಿಸ್ ಷೇ1.15ರಷ್ಟು, ಎಸ್ ಬಿಐ ಶೇ.1.09ರಷ್ಟು ಮತ್ತು ಸನ್ ಫಾರ್ಮಾ ಷೇರುಗಳ ಮೌಲ್ಯದಲ್ಲಿ ಶೇ. 0.99ರಷ್ಟು ಏರಿಕೆ ಕಂಡುಬಂದಿದೆ.

ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಎಸ್ ಬಿಐ ಮತ್ತು ಐಟಿಸಿ ಷೇರುಗಳ ಬೇಡಿಕೆ ಹೆಚ್ಚಾಗಿದ್ದೇ ಸೆನ್ಸೆಕ್ಸ್ ಏರಿಕೆಗೆ ಕಾರಣ ಎನ್ನಲಾಗಿದೆ.

Follow Us:
Download App:
  • android
  • ios